ಬೆಂಗಳೂರು, ಡಿ. 18: ಬೈಕ್ ಸವಾರ ಅಪಘಾತವನ್ನು ತಪ್ಪಿಸಿಕೊಂಡು ಹೋಗಿ ಗಂಭೀರ ಗಾಯ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನೆಲಮಂಗಲದ ಸುಭಾಷ್ ನಗರದ ಬಜಾಜ್ ಶೋ ರೂಂ ಬಳಿ ಈ ಘಟನೆ ನಡೆದಿದೆ. ಮುಂದೆ ಹೋಗುತ್ತಿದ್ದ ಬೈಕ್ ಸವಾರಿ ಗುಂಡಿಯಲ್ಲಿದೆ ಎಂದು ಏಕಾಏಕಿ ಬ್ರೇಕ್ ಹಾಕಿದ್ದಾನೆ. ಹಿಂದೆ ವೇಗವಾಗಿ ಬರುತ್ತಿದ್ದ ತಬ್ರೇಜ್ ಎಂಬ ಬೈಕ್ ಸವಾರ ಅಪಘಾತ ತಪ್ಪಿಸಲು ಹೋಗಿ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ತಬ್ರೇಜ್‌ಗೆ ಗಂಭೀರ ಗಾಯನ ಸಂಗೀತ. ತಬ್ರೇಜ್ ಇಸ್ಲಾಂಪುರದ ನಿವಾಸಿ ಎಂದು ಹೇಳಲಾಗಿದೆ. ಇದೀಗ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ತಬ್ರೇಜ್ ಗಂಭೀರ ಗಾಯದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸುಭಾಷ್ ನಗರದ ಬಜಾಜ್ ಶೋ ರೂಮ್ ಬಳಿ ಪೈಪ್ ಲೈನ್ ಮಾಡಲು ತೆಗೆದ ಗುಂಡಿ ಸಂಪೂರ್ಣವಾಗಿ ಮುಚ್ಚಿದಾಗ ಈ ಅಪಘಾತ ಸಂಭವಿಸಿದೆ. ಇದೀಗ ಈ ಘಟನೆಯ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ