ಈ ರೀತಿ ಜಗಳ ನೀವೆಲ್ಲಾದ್ರೂ ನೋಡಿದೀರಾ? ನೋ ವೇ ಚಾನ್ಸೆ ಇಲ್ಲ

ಈ ರೀತಿ ಜಗಳ ನೀವೆಲ್ಲಾದ್ರೂ ನೋಡಿದೀರಾ? ನೋ ವೇ ಚಾನ್ಸೆ ಇಲ್ಲ


ಸಾಮಾನ್ಯವಾಗಿ ಗಂಡಸರು ಜಗಳ (ಜಗಳ)ವಾಡ್ತಾರೆ ಎಂದ್ರೆ ಮಾತಿಗಿಂತ ಕೈಗಳೇ ಮುಂದಿರುತ್ತೆ. ಆದರೆ ಕೆಲವು ದಿನಗಳ ಹಿಂದೆ ಚೀನಾದಲ್ಲಿ ನಡೆದ ಸಾಮಾಜಿಕ ಘಟನೆಯ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅದು ಜಗಳವೋ ಚುಂಬನವೋ ಒಂದು ಗೊತ್ತಾಗುತ್ತಿಲ್ಲ. ಸಾಮಾನ್ಯವಾಗಿ ವೈರಲ್ ಆಗುವ ವಿಡಿಯೋಗಳು ಮನಸ್ಸಿಗೆ ಘಾಸಿ ಮಾಡುತ್ತವೆ ಆದರೆ ಈ ವಿಡಿಯೋ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಸಾರ್ವಜನಿಕ ರೈಲಿನೊಳಗೆ ಇಬ್ಬರು ಚೀನೀ ವ್ಯಕ್ತಿಗಳ ನಡುವೆ ಆರಂಭವಾದ ವಾಗ್ವಾದ ಈ ಹಂತಕ್ಕೆ ತಲುಪಿತ್ತು. ಆದರೆ ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ಪರಸ್ಪರ ಹೊಡೆದಾಡಿಕೊಳ್ಳುವ ಅಥವಾ ಕೂಗಾಡುವ ಬದಲು ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಬೆದರಿಸುವ ಪ್ರಯತ್ನದಲ್ಲಿ ಒಬ್ಬರಿಗೊಬ್ಬರು ಎಂಜಿಲು ಉಗುಳುತ್ತಾರೆ. ವಾದ ಉಲ್ಬಣಗೊಳ್ಳುತ್ತಿರುವಾಗ, ಅವರು ಮತ್ತಷ್ಟು ಹತ್ತಿರಕ್ಕೆ ಹೋಗುತ್ತಾರೆ. ಹತ್ತಿರದಿಂದ ಉಗುಳಲು ಯತ್ನಿಸುತ್ತಿರುವುದು ಚುಂಬಿಸುತ್ತಿರುವಂತೆ ತೋರುತ್ತಿದೆ. ಉದ್ದೇಶಪೂರ್ವಕವಲ್ಲದ ಹಾಸ್ಯಮಯ ಕ್ಷಣವಾಗಿ ಪರಿವರ್ತನೆಗೊಂಡಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದು ಸಿಂಗಾಪುರ್ ಎಂಆರ್‌ಟಿ ರೈಲಿನಲ್ಲಿ ನಡೆದ ಘಟನೆ, ಇಬ್ಬರು ಪುರುಷರು ಬಿಸಿಯಾದ ವಾದದಲ್ಲಿ ತೊಡಗಿಕೊಂಡು ಪರಸ್ಪರ ಉಗುಳುವವರೆಗೆ ಹೋಗುತ್ತಾರೆ. ಡು ಪರಸ್ಪರ ಹೋರಾಡಲು ಹೊಸ ಮಾರ್ಗ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ ಮತ್ತೊಬ್ಬರು ಅವರಿಗೆ ತಿಳಿದಿರುವ ಒಂದೇ ಒಂದು ಹೋರಾಟ ಅದು ಕರಾಟೆ ಎಂದುಕೊಂಡಿದ್ದೆ ಆದರೆ ಇದೇನಿದು ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *