ಸಿನಿಮಾಕ್ಕೆ ವಿಶ್ವದ ಅತ್ಯುತ್ತಮ ಪ್ರಶಸ್ತಿ ಎಂದು ಆಸ್ಕರ್ (ಆಸ್ಕರ್) ಪರಿಗಣಿಸಲಾಗಿದೆ. ಆಸ್ಕರ್‌ನ ಒಳರಾಜಕೀಯಗಳ ಬಗ್ಗೆ ಆಗೊಮ್ಮೆ-ಈಗೊಮ್ಮೆ ಸುದ್ದಿ ಆಗುತ್ತಿರುತ್ತದೆಯಾದರೂ ಆಸ್ಕರ್ ಗೌರವ ಸಿನಿಮಾಕ್ಕೆ ಶ್ರೇಷ್ಠ ಪ್ರಶಸ್ತಿ ಎಂಬುದಕ್ಕೆ ಸಂಬಂಧಿಸಿದೆ. ಭಾರತದ ಕೆಲವಾರು ಕಲಾವಿದರಿಗೆ ಆಸ್ಕರ್ ದೊರೆತಿದೆ. ಆದರೆ ಯಾವೊಂದು ಸಿನಿಮಾಕ್ಕೂ ಸಹ ಆಸ್ಕರ್ ಭಾರತದಲ್ಲಿ ಸಿಕ್ಕಿಲ್ಲ. ಪ್ರತಿ ವರ್ಷವೂ ಭಾರತದಿಂದ ಕೆಲವಾರು ಸಿನಿಮಾಗಳು ಆಸ್ಕರ್‌ಗೆ ಹೋಗುತ್ತವೆ ಆದರೆ ನಿರಾಸೆ ಅನುಭವಿಸಿ ವಾಪಸ್ಸಾಗುತ್ತವೆ. ಈ ಬಾರಿ ‘ಹೋಮ್‌ಬೌಂಡ್’ ಸಿನಿಮಾವನ್ನು ಆಸ್ಕರ್‌ಗೆ ಕಳಿಸಲಾಯಿತು. ಈ ಸಿನಿಮಾ ಆಸ್ಕರ್ ನಲ್ಲಿ ಶಾರ್ಟ್ ಲಿಸ್ಟ್ ಆಗಿ ನಿರೀಕ್ಷೆ ಮೂಡಿಸಿದೆ.
ಈ ಬಾರಿ ಆಸ್ಕರ್‌ಗೆ ಅಧಿಕೃತ ಆಯ್ಕೆಯಾಗಿ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾವನ್ನು ಆಸ್ಕರ್‌ಗೆ ಕಳಿಸಲಾಗಿದೆ. ಸಿನಿಮಾದಲ್ಲಿ ಇಶಾನ್ ಕಟ್ಟರ್, ವಿಶಾಲ್ ಜೇಟ್ವಾ ಮತ್ತು ಜಾನ್ಹವಿ ಕಪೂರ್ ಅವರು ನಟಿಸಿದ್ದಾರೆ. ಈ ಸಿನಿಮಾ ಭಾರತದ ಜಾತಿ ಪದ್ಧತಿ, ಧರ್ಮ ವೈರುಧ್ಯಗಳ ಬಗ್ಗೆ ಮಾತನಾಡುತ್ತದೆ. ಸಿನಿಮಾ ಕೆಲವಾರು ಸಿನಿಮಾೋತ್ಸವಗಳಲ್ಲಿ ಭಾಗವಹಿಸಿ ಪ್ರಶಂಸೆ ಗಳಿಸಿಕೊಂಡಿದೆ. ಇದೀಗ ಆಸ್ಕರ್ ರೇಸಿನಲ್ಲಿ ಶಾರ್ಟ್ ಲಿಸ್ಟ್ ಆಗುವ ಮೂಲಕ ಗಮನ ಸೆಳೆದಿದೆ.
ಆಸ್ಕರ್‌ನ ಅತ್ಯುತ್ತಮ ವಿದೇಶಿ ಸಿನಿಮಾ ‘ಹೋಮ್‌ಬೌಂಡ್’ ಸ್ಪರ್ಧೆಯಲ್ಲಿದ್ದು, ಇದೀಗ ಅಂತಿಮ 15 ಸಿನಿಮಾಗಳಲ್ಲಿ ಆಯ್ಕೆಯಾಗಿದೆ. ಆಸ್ಕರ್ ನ ಎಲ್ಲ ವಿಭಾಗದ ಸದಸ್ಯರು ಇದೀಗ ಈ 15 ಸಿನಿಮಾಗಳನ್ನು ವೀಕ್ಷಿಸಿ ಮತ ಚಲಾಯಿಸುವ ಮೂಲಕ ಅಂತಿಮ ಐದು ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಆ ಐದು ಸಿನಿಮಾಗಳು ‘ಆಸ್ಕರ್ ನಾಮನಿರ್ದೇಶನ’ ಎನಿಸಿಕೊಳ್ಳಲಿವೆ. ಆ ಐದರಲ್ಲಿ ಒಂದು ಸಿನಿಮಾ ಆಸ್ಕರ್ ಗೆಲ್ಲಲಿದೆ.
ಇದನ್ನೂ ಓದಿ:98ನೇ ಸಾಲಿನ ಆಸ್ಕರ್ ಸ್ಪರ್ಧೆಗೆ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾ ಅಧಿಕೃತ ಆಯ್ಕೆಯಾಗಿದೆ
‘ಹೋಮ್‌ಬೌಂಡ್’ ಸಿನಿಮಾ ಶಾರ್ಟ್ ಲಿಸ್ಟ್ ಏನೋ ಆಗಿದೆ. ಆದರೆ ಸಿನಿಮಾಕ್ಕೆ ಕೆಲವು ಪ್ರಬಲ ಪ್ರತಿಸ್ಪರ್ಧಿ ಸಿನಿಮಾಗಳಿವೆ. ಇರಾಖ್‌ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೇನಿನ ‘ಪ್ಯಾಲೆಸ್ತೇನ್ 36’, ‘ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಸಿನಿಮಾಗಳು ಕಠಿಣ ಸ್ಪರ್ಧೆ ಒಡ್ಡಲಿವೆ. ‘ಹೋಂಬೌಂಡ್’ ಸಿನಿಮಾಕ್ಕೆ ಮುಂದಿನ ಹಾದಿ ಕ್ರಮಿಸಲು ದೊಡ್ಡ ಮಟ್ಟದ ಪ್ರಚಾರದ ಅವಶ್ಯಕತೆಯೂ ಇದೆ.
ಆಸ್ಕರ್ ಪರವಾಗಿ ಕ್ಯಾಂಪೇನ್ ಗೆಲ್ಲಲು ಸಿನಿಮಾ. ಈ ಕ್ಯಾಂಪೇನ್‌ಗೆ ಭಾರಿ ಮೊತ್ತದ ಹಣ ಖರ್ಚಾಗುತ್ತದೆ. ‘ಹೋಮ್‌ಬೌಂಡ್’ ಸಿನಿಮಾವನ್ನು ಸುಮಾರು 30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಸಿನಿಮಾದ ಆಸ್ಕರ್ ಪ್ರಚಾರಕ್ಕೆ ಇದರ ದುಪ್ಪಟ್ಟು ಅಥವಾ ಮೂರು ಪಟ್ಟು ಹಣವನ್ನು ಖರ್ಚು ಮಾಡಿದೆ. ಸಿನಿಮಾದ ನಿರ್ಮಾಪಕರಾದ ಕರಣ್ ಜೋಹರ್, ಮೆಹ್ತಾ ಇನ್ನೂ ಕೆಲವು ಖರ್ಚು ಮಾಡಲು ಮುಂದಾಗುವರೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ