Headlines

Video: ರೆಸ್ಟೋರೆಂಟ್ ಬಿಲ್ ನೋಡಿ ಶಾಕ್ ಆದ ಬಾಲಕ ಅನಿವಾಸಿ ಭಾರತೀಯ, ಕಾರಣ ಇದೇ ನೋಡಿ

Video: ರೆಸ್ಟೋರೆಂಟ್ ಬಿಲ್ ನೋಡಿ ಶಾಕ್ ಆದ ಬಾಲಕ ಅನಿವಾಸಿ ಭಾರತೀಯ, ಕಾರಣ ಇದೇ ನೋಡಿ


ಚೆನೈ, ಡಿಸೆಂಬರ್ 18: ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗುವ ಮುನ್ನ ಸಾವಿರ ಸಲ ಯೋಚನೆ ಮಾಡ್ತೇನೆ. ಮೊದಲು ನಮ್ಮ ಬಳಿ ಎಷ್ಟು ಹಣ ಇದೆ ಎಂದು ನೋಡಿ ಕೊಳ್ಳುತ್ತೇವೆ. ಇಲ್ಲೊಬ್ಬ ಅನಿವಾಸಿ ಭಾರತೀಯ ಬಾಲಕನು (ಎನ್ ಆರ್ ಐ ಹುಡುಗ) ಚೆನ್ನೈನ ರೆಸ್ಟೋರೆಂಟ್‌ವೊಂದಕ್ಕೆ (ಚೆನ್ನೈ ರೆಸ್ಟೋರೆಂಟ್) ತೆರಳಿ, ಒಂದಲ್ಲ ಆರೇಳು ಐಟಂ ಆರ್ಡರ್ ಮಾಡಿ ಹೊಟ್ಟೆ ತುಂಬಾ ತಿಂದಿದ್ದಾನೆ. ಬಿಲ್ ತಂದು ಟೇಬಲ್ ಮೇಲೆ ಇಟ್ಟಾಗ ಬಿಲ್ ನೋಡಿ ಶಾಕ್ ಆಗಿದ್ದಾನೆ. ಈ ಕುರಿತಾದ ಸ್ಟೋರಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

deepaimsi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಾಲಕನ ರಿಯಾಕ್ಷನ್ ವಿಡಿಯೋವನ್ನು ಈತನ ತಾಯಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 7 ರಂದು ಗೀತಮ್ ರೆಸ್ಟೋರೆಂಟ್‌ನ ಬಿಲ್ ನೋಡಿ ಅನಿವಾಸಿ ಭಾರತೀಯ ಹುಡುಗನಿಗೆ ಶಾಕ್ ಆಗಿರುವುದನ್ನು ನೋಡಬಹುದು. ಈ ಪುಟ್ಟ ಹುಡುಗನು ತನ್ನ ತಾಯಿಯೊಂದಿಗೆ ರೆಸ್ಟೋರೆಂಟ್‌ನಿಂದ ಹೊರ ಬಂದ ಬಳಿಕ ಬಿಲ್‌ ನೋಡಿದ್ದಾನೆ. ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ಹಲವು ಫುಡ್‌ಗಳ ಹೆಸರನ್ನು ಹೇಳುತ್ತಾ ಹೋಗುತ್ತಾನೆ. ಈ ಬಿಲ್‌ನಲ್ಲಿ ಬೇಬಿ ಕಾರ್ನ್ ಮಂಚೂರಿಯನ್, ಬೋಂಡಾ, ದಹಿ ಪಾಪ್ಡಿ, ವಿಶೇಷ ಫಲೂಡಾ, ಇಡ್ಲಿ, ಪನೀರ್ ಮಸಾಲಾ ದೋಸೆ, ವೆಜ್ ನೂಡಲ್ಸ್ ಹೀಗೆ ಖಾದ್ಯಗಳು ಸೇರುತ್ತವೆ. ಈ ಎಲ್ಲಾ ವಸ್ತುಗಳ ಬೆಲೆಯನ್ನು ಹೇಳುತ್ತಾ, ಕೊನೆಗೆ ಒಟ್ಟು ಮೊತ್ತ 30 ನ್ಯೂಜಿಲೆಂಡ್ ಡಾಲರ್ (1,502 ರೂ.) ಎಂದು ತಿಳಿದು ಶಾಕ್ ಆಗಿದ್ದಾನೆ. ನ್ಯೂಜಿಲೆಂಡ್ ಕೇವಲ 2-3 ಐಟಂಗಳಿಗೆ 200 ಡಾಲರ್ ಇರುತ್ತದೆ. ಆದರೆ ಭಾರತದಲ್ಲಿ ಆಹಾರದ ಮೇಲಿನ ದರಗಳು ಕಡಿಮೆಯಾಗಿವೆ ಎಂದು ಹೇಳಲಾಗುತ್ತದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ಸವಿದ ಕೊರಿಯನ್ ಪುಟಾಣಿಗಳು

ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಬಿಲ್ ನೋಡಿದ ಬಳಿಕ ಈತನ ಮುಖದಲ್ಲಿನ ಖುಷಿ ನೋಡಿ. ಮತ್ತೊಬ್ಬರು, ಇವನು ಮತ್ತೆಂದೂ ವಿದೇಶಕ್ಕೆ ಹೋಗಲ್ಲ ಎಂದು ಅನಿಸ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಪುಟ್ಟ ಬಾಲಕನಿಗೆ ಭಾರತೀಯ ಸ್ಯಾಲರಿ ಸ್ಲಿಪ್ ಅನ್ನು ತೋರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *