Headlines

ಡಿಕೆಶಿಗೆ ಸತೀಶ್​​ ಸೆಡ್ಡು: ಡಿನ್ನರ್​​ ಮೀಟಿಂಗ್​​ ನೆಪದಲ್ಲಿ ಸಿಎಂ ಬಣದಿಂದಲೂ ಶಕ್ತಿ ಪ್ರದರ್ಶನ

ಡಿಕೆಶಿಗೆ ಸತೀಶ್​​ ಸೆಡ್ಡು: ಡಿನ್ನರ್​​ ಮೀಟಿಂಗ್​​ ನೆಪದಲ್ಲಿ ಸಿಎಂ ಬಣದಿಂದಲೂ ಶಕ್ತಿ ಪ್ರದರ್ಶನ


ಖಾಸಗಿ ಹೋಟೆಲ್ ಡಿನ್ನರ್ ಮೀಟಿಂಗ್

ಬೆಳಗಾವಿ, ಡಿಸೆಂಬರ್ 18: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ನಡುವೆ ಅಧಿಕಾರ ಹಂಚಿಕೆ ವಿವಾದ ಹೈಕಮಾಂಡ್ ಅಂಗಳ ತಲುಪಿದ ಬೆನ್ನಲ್ಲೇ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ವಾಗ್ಯುದ್ಧಕ್ಕೆ ಕೊಂಚ ಬ್ರೇಕ್ ಬಿದ್ದಿತ್ತು. ಆದರೆ ಬೆಳಗಾವಿ ಅಧಿವೇಶನದ ಹೊತ್ತಲ್ಲೇ ಡಿಸಿಎಂ ಡಿಕೆಶಿ ನಡೆಸಿದ್ದ ಡಿನ್ನರ್ ಸಭೆ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಬಣ ಬಡಿದಾಟ ಆರಂಭವಾಗಿದೆ. ಡಿಕೆಶಿಗೆ ಕೌಂಟರ್ ಎಂಬಂತೆ ಸಿದ್ದರಾಮಯ್ಯ ಆಪ್ತ ಬಣದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಏರ್ಪಡಿಸಿದ್ದ ಡಿನ್ನರ್ ಮೀಟಿಂಗೆ ಸಿಎಂ ಸಾಕ್ಷಿ.

ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮತ್ತೊಂದು ಡಿನ್ನರ್ ಸಭೆ ನಡೆಯಿತು. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಊಟದ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಬಗ್ಗೆ ಶಾಸಕರು ಒಟ್ಟಿಗೆ ಸೇರಿದ್ದಾರೆ. ಸುಮಾರು 36 ಮಂದಿ ಶಾಸಕರು ಡಿನ್ನರ್ ಸಭೆಯಲ್ಲಿ ಪಾಲ್ಗೊಂಡಿದ್ದು, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕೂಡ ಇದರಲ್ಲಿ ಭಾಗವಹಿಸಿರೋದು ವಿಶೇಷವಾಗಿತ್ತು. ನಮ್ಮ ಜೊತೆ ಶಾಸಕರ ಬಲ ಇದೆ ಎಂದು ತೋರಿಸಲು ಡಿನ್ನರ್ ನಡೆದಿದ್ದ ಡಿ.ಕೆ. ಶಿವಕುಮಾರ್ ಗೆ ಕೌಂಟರ್ ಎಂಬಂತೆ ಸತೀಶ್ ಜಾರಕಿಹೊಳಿ ನೇತೃತ್ವದ ಮತ್ತೊಂದು ಬಣ ಒಟ್ಟಾಗಿರೋದು ಬೇರೆಯದ್ದೇ ಸಂದೇಶ ರವಾನಿಸಿದೆ. ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಕಾಂಗ್ರೆಸ್ ವರಿಷ್ಠರು ಕೂಡ ಚರ್ಚೆ ನಡೆಸುತ್ತಿದ್ದಾರೆ, ಸಾಧಕ ಮತ್ತು ಬಾಧಕಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು, ಹೈಕಮಾಂಡ್‌ಗೆ ಸಂದೇಶ ರವಾನಿಸುವ ನಾಯಕರ ಯತ್ನ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ಡಿಕೆಶಿ ಬಣಕ್ಕೆ ಮತ್ತೆ ರಾಜಣ್ಣ ಟಾಂಗ್

ಡಿನ್ನರ್ ಮೀಟಿಂಗ್ ನಲ್ಲಿ ಯಾರೆಲ್ಲ ಭಾಗಿ?

ಬಾಬಾ ಸಾಹೇಬ್ ಪಾಟೀಲ್, ಅಪ್ಪಾಜಿ ಸಿಎಸ್ ನಾಡಗೌಡ, ಕೆಎನ್ ರಾಜಣ್ಣ, ಯತೀಂದ್ರ ಸಿದ್ದರಾಮಯ್ಯ, ಬಿ.ಆರ್ ಪಾಟೀಲ್, ಯಾಸಿರ್ ಖಾನ್ ಪಠಾಣ್, ಎಂ.ಆರ್ ಪಾಟೀಲ್, ಶ್ರೀನಿವಾಸ್ ಮಾನೆ, ಮಂಥರ್ ಗೌಡ, ವಿಶ್ವಾಸ್ ವೈದ್ಯ, ಬಸವಂತಪ್ಪ, ದರ್ಶನ್, ಆಸೀಫ್ ಸೇಠ್, ಪಾವಗಡ ವೆಂಕಟೇಶ್, ಕಂಪ್ಲಿ ಗಣೇಶ್, ಎನ್. ದೃವನಾರಾಯಣ್, ನಾರಾ ಭರತ್ ರೆಡ್ಡಿ, ಮಹಾಂತೇಶ್ ಕೌಜಲಗಿ, ಭೀಮಣ್ಣ ನಾಯ್ಕ, ಬಿಬಿ ಚಿಮ್ಮನಕಟ್ಟಿ, ಯುಬಿ ಬಣಕಾರ್, ಬಸವರಾಜ್ ಶಿವಣ್ಣನವರ್, ರಾಜು ಕಾಗೆ, ಕೋನರೆಡ್ಡ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಪುಟ್ಟರಂಗಶೆಟ್ಟಿ, ರಾಜಾ ನರಸಿಂಹ ನಾಯ್ಕ್, ರವಿ ಬೋಸರಾಜು, ಗಣೇಶ್, ಗಣೇಶ್ ಪ್ರಭು ಪಾಟೀಲ್, ಜಿ. ಸಭೆಯಲ್ಲಿ ಭಾಗವಹಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 11:46 am, ಗುರು, 18 ಡಿಸೆಂಬರ್ 25



Source link

Leave a Reply

Your email address will not be published. Required fields are marked *