Video: ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

Video: ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ


ಪುಟಾಣಿ (ಚಿಕ್ಕ ಮಕ್ಕಳು) ಮಕ್ಕಳ ತೊದಲು ನುಡಿಗಳನ್ನು ಕೇಳುವುದೇ ಚಂದ. ಪುಟ್ಟ ಕಂದಮ್ಮಗಳು ಬೆಳೆಯಲು ಹೆತ್ತವರು ಒಂದೊಂದೇ ಪದಗಳನ್ನು ಹೇಳಲು ಕಲಿಸಿ ಕೊಡುತ್ತಾರೆ. ಈ ವಿಡಿಯೋದಲ್ಲಿ ಹೆತ್ತವರು ಅಮ್ಮ ಹೇಳಲು ಕಲಿಸುತ್ತಿದ್ದಾರೆ. ಕಂದಮ್ಮ ಅಮ್ಮ ಹೇಳಲು ಹರಸಾಹಸ ಪಡುತ್ತಿದ್ದುದನ್ನು ನೋಡಿದ ಮನೆಯ ಮುದ್ದಿನ ಶ್ವಾನವು (ನಾಯಿ) ಕ್ಯೂಟ್ ರಿಯಾಕ್ಷನ್ ನೀಡಿದೆ. ಈ ಶ್ವಾನದ ಬುದ್ಧಿವಂತ ನೆಟ್ಟಿಗರು ಫಿದಾ ಆಗಿದ್ದಾರೆ.

ಎಕ್ಸಟ್ ಡೈಲಿ (Excitdaily) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ವೀಡಿಯೊದಲ್ಲಿ, ಪುಟ್ಟ ಮಗು ಮತ್ತು ಸಾಕು ನಾಯಿ ಒಟ್ಟಿಗೆ ಕುಳಿತಿರುವುದು ಕಂಡುಬರುತ್ತದೆ. ಪೋಷಕರು ತಮ್ಮ ಮಗುವಿಗೆ “ಅಮ್ಮ” ಎಂದು ಹೇಳಲು ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಆಹಾರದಲ್ಲಿ ಹಿಡಿದುಕೊಂಡು ಹೆತ್ತವರು ಮಗುವು ಅಮ್ಮ ಹೇಳಿದ ತಕ್ಷಣ ತಿನ್ನಲು ಕಾಯುತ್ತಿದ್ದಾರೆ. ಆದರೆ ಅಲ್ಲೇ ಪಕ್ಕ ಕುಳಿತ ಸಾಕು ನಾಯಿಯೂ ಮೊದಲು ಅಮ್ಮ ಎಂದು ಹೇಳಿದೆ. ಅಷ್ಟೇ ನನಗೆ ಆಹಾರ ಕೊಡಿ ಎನ್ನುವಂತೆ ರಿಯಾಕ್ಷನ್ ಕೊಟ್ಟಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಎಮ್ಮೆಯ ಕರುವಿನ ಹಲ್ಲುಜ್ಜಲು ಪುಟಾಣಿಯ ಪರದಾಟ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ 12 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಮಗುವಿಗಿಂತ ಈ ಶ್ವಾನವೇ ಹೆಚ್ಚು ಚುರುಕಾಗಿದೆ. ಇತರರು, ಡಾಂಗೇಶ್ ಬಾಯ್ ಕೊನೆಗೂ ಯಶಸ್ವಿಯಾದರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಮುದ್ದಾಗಿದೆ ಈ ದೃಶ್ಯ, ಶ್ವಾನ ಎಲ್ಲರ ಗಮನ ಸೆಳೆದಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *