ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಇದೆ ಎಂಬುದನ್ನು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ: ಪಾವತಿ ಬಗ್ಗೆ ಹೇಳಿದ್ದೇನು?

ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಇದೆ ಎಂಬುದನ್ನು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ: ಪಾವತಿ ಬಗ್ಗೆ ಹೇಳಿದ್ದೇನು?


ಬೆಳಗಾವಿ, ಡಿಸೆಂಬರ್ 18: ಶಕ್ತಿ ಯೋಜನೆಗೆ 4000 ಕೋಟಿ ರೂಪಾಯಿ ಬಾಕಿ ಹಣದ ಬಗ್ಗೆ ವಿಪಕ್ಷಗಳ ಟೀಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. 2023ರಲ್ಲಿ ಅಧಿಕಾರ ಹಸ್ತಾಂತರಿಸಿದಾಗ 80,000 ಕೋಟಿ ರೂಪಾಯಿ ಬಿಲ್ ಬಾಕಿ ಇಟ್ಟುಹೋಗಿದ್ದರು ಮತ್ತು ಬಜೆಟ್‌ನಲ್ಲಿ ಇಲ್ಲದಿದ್ದರೂ 4 ಲಕ್ಷ ಕೋಟಿ ರೂಪಾಯಿ ಅನುಮೋದಿಸಿದ್ದರು ಎಂದು ರೆಡ್ಡಿ ಪ್ರಕಟಿಸಿದರು.

ಶಕ್ತಿ ಯೋಜನೆಯು 1,748 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ, ಇನ್ನು 400 ಕೋಟಿ ರೂಪಾಯಿಗಳು ಬಿಡುಗಡೆಯಾಗಲಿದೆ ಎಂದು ಭರವಸೆ ನೀಡುತ್ತದೆ. ಜೊತೆಗೆ, ಹಿಂದಿನ ಬಿಜೆಪಿ ಸರ್ಕಾರಎಸ್‌ಆರ್‌ಟಿಸಿಗೆ 4000 ಕೋಟಿ ರೂಪಾಯಿ ಸಾಲ ಇಟ್ಟು ಹೋಗಿತ್ತು ಮತ್ತು ನೌಕರರಿಗೆ 38 ತಿಂಗಳ ವೇತನ ಬಾಕಿ ಉಳಿಸಿಕೊಂಡಿತ್ತು ಎಂದು ದೂರಿದ್ದಾರೆ. ಕೇಂದ್ರ ಸರ್ಕಾರದಿಂದಲೂ ಜಲ ಜೀವನ್ ಮಿಷನ್, ನರೇಗಾ, ಭದ್ರಾ ಮೇಲ್ದಂಡೆ ಯೋಜನೆ ಮತ್ತು ವಿಶೇಷ ಅನುದಾನ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ರಾಜ್ಯಕ್ಕೆ ಬರಬೇಕಿದೆ. ಬಿಜೆಪಿಯವರು ಮೊದಲು ಅದರ ಬಗ್ಗೆ ಮಾನಾಡಲಿ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *