ಜುಲೈ, ಡಿಸೆಂಬರ್ 18: ಭಾರತದಲ್ಲಿ ಸಾಮಾಜಿಕ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರ ಕ್ರಾಂತಿಕಾರಿ ಎನಿಸಿದ ಡಿಬಿಟಿ ಸ್ಕೀಮ್ ಅಥವಾ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಸಿಸ್ಟಂ ಜಾರಿಗೆ ತಂದಿದೆ. ಪಿಎಂ ಕಿಸಾನ್ ಯೋಜನೆ ಇತ್ಯಾದಿಗಳಲ್ಲಿ ಕೋಟ್ಯಂತರ ಮಂದಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಸೌಲಭ್ಯಗಳಿಗೆ ಸಿಗದೇ ಹಣ ಪೋಲಾಗುತ್ತಿತ್ತೆಂದು ಹೇಳಲಾಗಿದೆ. ಡಿಬಿಟಿ ಬಂದ ಬಳಿಕ ಹಣ ವರ್ಗಾವಣೆಗೆ ಹೋಗುವುದು ತಪ್ಪಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತದ ಮಹಾಲೇಖಪಾಲರಾದ (CAG) ಸಂಜಯ್ ಮೂರ್ತಿ ಅವರು ಡಿಬಿಟಿ ಸಿಸ್ಟಂ ಬಗ್ಗೆ ಅಪಸ್ವರ ಎತ್ತಿದ್ದಾರೆ.
ರೋಗಿಗಳ ಅಕೌಂಟ್‌ಗಳನ್ನು ಸರಿಯಾಗಿ ಪರಿಶೀಲನೆ ನಡೆಸುತ್ತಿದೆಯೇ ಹಣ ಬಿಡುಗಡೆ ಮಾಡಲಾಗುತ್ತಿದೆ, ಇದರಿಂದ ಸಾವಿರಾರು ಕೋಟಿ ರೂ ಪೋಲಾಗುತ್ತಿದೆ ಎಂದು ಸಿಎಜಿ ಹೇಳಿದ್ದಾರೆ. ಮಹಾರಾಷ್ಟ್ರದ ನಾಗಪುರ್‌ನಲ್ಲಿನ ಅಕಾಡೆಮಿ ಆಫ್ ಡೈರೆಕ್ಟ್ ಟ್ಯಾಕ್ಸಸ್ ಸಂಸ್ಥೆಯಲ್ಲಿ ಮೊದಲ ಬ್ಯಾಚ್‌ನ ಐಆರ್‌ಎಸ್ (ಕಂದಾಯ) ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಡಿಬಿಟಿ ಸಿಸ್ಟಂನಲ್ಲಿ ದೋಷಗಳನ್ನು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಭಾರತೀಯ ಕಂಪನಿಗಳಿಗೆ ಐಫೋನ್ ಚಿಪ್ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತಾ ಆಯಪಲ್?
ಡಿಬಿಟಿಯಲ್ಲಿ ಏನಿದೆ ಲೋಪದೋಷ?
ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಸಿಸ್ಟಂ ಅನ್ನು ನೇರವಾಗಿ ಹಣ ತಲುಪಿಸುವ ಉದ್ದೇಶದೊಂದಿಗೆ ರೂಪಿಸಲಾಗಿದೆ. ಇದನ್ನು ಜಾರಿಗೊಳಿಸಲು ಸಮರ್ಪಕ ತಂತ್ರಜ್ಞಾನವನ್ನು ಬಳಸಬೇಕು. ಡಾಟಾಬೇಸ್ ಕರಾರುವಾಕ್ ಆಗಿರಬೇಕು, ಅಪ್ಟುಡೇಟ್ ಆಗಿರಬೇಕು. ಸಿಎಜಿ ಸಂಜಯ್ ಮೂರ್ತಿ ಅವರು ಹೇಳುವ ಪ್ರಕಾರ, ಡಿಬಿಟಿ ಸ್ಕೀಮ್ನಲ್ಲಿ ಸದ್ಯ ಡಾಟಾಬೇಸ್ ಕರಾರುವಾಕ್ ಆಗಿಲ್ಲ. ಸರ್ಕಾರಿ ಕಚೇರಿಗಳ ನಡುವೆ ತಾಳಮೇಳ ಇಲ್ಲ.
‘ಸರ್ಕಾರಿ ಇಲಾಖೆಗಳು ಪರಸ್ಪರ ಹೊಂದಾಣಿಕೆ ಇಲ್ಲದೇ ಪ್ರತ್ಯೇಕವೆಂಬಂತಹ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಒಂದೇ ಇಲಾಖೆಯಲ್ಲಿರುವ ವಿವಿಧ ಜಂಟಿ ಕಾರ್ಯದರ್ಶಿಗಳೂ ಒಂದೇ ಡಾಟಾಬೇಸ್ ಅನ್ನು ಬಳಸೋದಿಲ್ಲ. ಜನ್ ಧನ್ ಅಕೌಂಟ್, ಆಧಾರ್ ಮತ್ತು ಮೊಬೈಲ್ ಅನ್ನು ಲಿಂಕ್ ಮಾಡಲು ಒತ್ತು ಕೊಡಲಾಗುತ್ತಿದೆ ಅಥವಾ ಡಾಟಾಬೇಸ್ ನಿಯೋಜನೆ ಸಮರ್ಪಕವಾಗಿ ಇಲ್ಲ. ಕ್ರಾಸ್ ಪರಿಶೀಲನೆ ಆಗುತ್ತಿಲ್ಲ. ಡೂಪ್ಲಿಕೇಶನ್ ನಿವಾರಿಸುವ ಕೆಲಸ ಆಗುತ್ತಿಲ್ಲ. ಸರಿಯಾಗಿ ಪರಿಶೀಲನೆಯಾಗದೇ ಇರುವ ಕಾರಣಕ್ಕೆ ಸಾವಿರಾರು ಕೋಟಿ ರೂ ಪೋಲಾಗಿ ಹೋಗುತ್ತಿದೆ’ ಎಂದು ಮಹಾಲೇಖಪಾಲರು, ಡಿಬಿಟಿ ಸಿಸ್ಟಂನಲ್ಲಿ ಹಣ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?
ತೆರಿಗೆ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಲು ಸಾಧ್ಯವಾಗುವಂತೆ ತಮ್ಮ ಇಲಾಖೆಯು ಪೂರಕವಾದ ಮಾಹಿತಿಯನ್ನು ಸಿಎಜಿ, ರಸ್ತೆ ಸಾರಿಗೆ ಸಚಿವಅಲಯ, ಜಿಎಸ್ ಟಿ ನೆಟ್‌ವರ್ಕ್ ಮತ್ತು ರಾಜ್ಯ ಹಣಕಾಸು ನಿರ್ವಹಣೆ ಸಿಸ್ಟಂಗಳು ಹೊಂದಿರುವ ಡಾಕ್ಟರೇಟ್‌ಗಳು ಆಡಿಟರ್‌ಗಳಿಗೆ ಬಹಳ ದೊಡ್ಡ ಮಾಹಿತಿಯ ಗಣಿಯಾಗಿದೆ ಎಂದು ಹೇಳಿದರು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ