90 ರ ಇತ್ತೀಚೆಗೆ ಅನೇಕ ಸಿನಿಮಾಗಳು ಮೂರು ಗಂಟೆಗಳು ಇದ್ದ ಉದಾಹರಣೆ ಇದೆ. ಆದರೆ, ಕಳೆದ ಒಂದು ಇತ್ತೀಚಿನ ಸಿನಿಮಾ ನೋಡಿದರೆ ಚಿತ್ರಗಳ ಸಮಯ ಎರಡು ಗಂಟೆಯಿಂದ ಎರಡೂವರೆ ಗಂಟೆ ಇದೆ. ಇದು ಸ್ಟ್ಯಾಂಡರ್ಡ್ ಎನಿಸಿಬಿಟ್ಟಿದೆ. ಆದರೆ, ಈ ವರ್ಷವು ಇದನ್ನು ಬದಲಿಸೋ ಸೂಚನೆ ಕೊಟ್ಟಿದೆ. ‘ಡೆವಿಲ್’, ‘ಧುರಂಧರ’ ಸೇರಿದಂತೆ ಹಲವು ಸಿನಿಮಾಗಳು ಈ ನಿಯಮವನ್ನು ಮುರಿದಿವೆ.
ಈಗಿನ ಕಾಲದಲ್ಲಿ ಮನರಂಜನೆಗೆ ನಾನಾ ಆಯ್ಕೆಗಳಿವೆ. ಹೀಗಾಗಿ, ಸಿನಿಮಾ ನೋಡಿಯೇ ಮನರಂಜನೆ ಪಡೆಯಬೇಕು ಎಂಬುದು ಯಾರಿಗೂ ಇಲ್ಲ. ಮೊದಲಿನಷ್ಟು ತಾಳ್ಮೆಯೂ ಜನರಿಗೆ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಕಾರಣದ ಸಿನಿಮಾದ ಅವಧಿಯನ್ನು ಎರಡು ಗಂಟೆಯಿಂದ ಎರಡೂವರೆ ಗಂಟೆಗೆ ಸೀಮಿತಗೊಳಿಸಲಾಗಿದೆ. ಆದರೆ, ಕೆಲವು ನಿರ್ದೇಶಕರು ಧೈರ್ಯ ಮಾಡಿ ಈ ನಿಯಮವನ್ನು ಮುರಿಯುವ ಪ್ರಯತ್ನದಲ್ಲಿದ್ದಾರೆ.
ಕಳೆದ ವರ್ಷಾಂತ್ಯಕ್ಕೆ ಬಂದ ‘ಪುಷ್ಪ 2’ ಸಿನಿಮಾ 3 ಗಂಟೆ 21 ನಿಮಿಷ ಇತ್ತು. ಈ ವರ್ಷ ಬಂದು ಸೂಪರ್ ಹಿಟ್ ಆದ ‘ಧುರಂಧರ’ ಚಿತ್ರದ ಅವಧಿ 3 ಗಂಟೆ 36 ನಿಮಿಷ. ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ರನ್ ಟೈಮ್ ಮೂರು ಗಂಟೆಗೆ (2 ಗಂಟೆ 49 ನಿಮಿಷ) ಸನಿಹವಾಗಿದೆ.
ಇದನ್ನೂ ಓದಿ:ಬಾಲಿವುಡ್ ಗೆ ಎಂಟ್ರಿ ಕೊಡಲಿರುವ ರುಕ್ಮಿಣಿ ವಸಂತ್, ನಟಿ ಹೇಳಿದ್ದೇನು?
‘ಧುರಂಧರ’ ಸಿನಿಮಾದ ರನ್ ಚಿತ್ರಕ್ಕೆ ಮುಳು ಎನ್ನಬಹುದು. ಆದರೆ, ಈ ಸಿನಿಮಾ 400+ ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಸಾವಿರ ಕೋಟಿ ರೂಪಾಯಿ ಸಮೀಪಿಸುತ್ತಿದೆ. ಹೀಗಾಗಿ, ರನ್ ಟೈಮ್ ಮುಖ್ಯವಾಗೋದಿಲ್ಲ.
‘ರಾಜ ಸಾಬ್’ ಹಾಗೂ ‘ಜನ ನಾಯಕ’ ಅವಧಿ ಕೂಡ ಮೂರು ಗಂಟೆ ಮೀರಿದೆ. ‘ರಾಜಾ ಸಾಬ್ ‘ 3 ಗಂಟೆ 10 ನಿಮಿಷ ಹಾಗೂ ಜನ ನಾಯಕನ್ 3 ಗಂಟೆ 5 ನಿಮಿಷ ಇದೆ. ಹೀಗಾಗಿ, ರನ್ ಟೈಮ್ ಮುಖ್ಯವಾಗುವುದಿಲ್ಲ ಎಂದು ಜನರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಈ ಬದಲಾವಣೆ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ