ಬೆಂಗಳೂರು, ಡಿಸೆಂಬರ್ 18: ನಮ್ಮ ಮೆಟ್ರೋದ ಎಲ್ಲೋ ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಡ್ರೈವರ್ಲೆಸ್ 7ನೇ ರೈಲು ಬೆಂಗಳೂರು ತಲುಪಿದ್ದು, ಈ ಮಾರ್ಗದಲ್ಲಿ ರೈಲುಗಳು ಓಡಾಟದ ಸಮಯ ಹೊಸ ವರ್ಷಕ್ಕೆ ಮತ್ತಷ್ಟು ಕಡಿಮೆ ಆಗಲಿದೆ. ಹೊಸ ರೈಲು ಹಳಿಗಿಳಿದ ಬೆನ್ನಲ್ಲೇ 8-10 ನಿಮಿಷಕ್ಕೆ ಒಂದರಂತೆ ಮೆಟ್ರೋ ಸಂಚರಿಸಲಿದೆ.
ಹೆಬ್ಬಗೋಡಿ ಡಿಪೋ ತಲುಪಿದ ರೈಲು
ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು
ಡಿಸೆಂಬರ್ 10 ರಂದು ಕೊಲ್ಕತ್ತಾದ ಟಿಟಾಗರ್ ನಿಂದ ಹೊರಟಿದ್ದ ಡ್ರೈವರ್ಲೆಸ್ 7ನೇ ರೈಲು ಇಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಇದು ಜನವರಿಯಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಿದೆ, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಯೆಲ್ಲೋ ಲೈನ್‌ನಲ್ಲಿ ಲಭ್ಯವಿದೆ. 19.15 ಕಿಮೀ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಸದ್ಯ 5 ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಆಗಸ್ಟ್ 10 ರಂದು ಯೆಲ್ಲೋ ಲೈನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಆಗಸ್ಟ್ 11 ರಿಂದ ವಾಣಿಜ್ಯ ಸಂಚಾರವನ್ನು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಆರಂಭಿಸಿತ್ತು.
ಇದನ್ನೂ ಓದಿ: ಹಳದಿ ಮಾರ್ಗದಲ್ಲಿನ ಮೆಟ್ರೋ ಸ್ಟೇಷನ್ ಸಮೀಪ ಬಿಎಂಟಿಸಿ ಬಸ್ ನಿಲ್ದಾಣಗಳ ವ್ಯವಸ್ಥೆ
ಮೇನಿಂದ ಪಿಂಕ್ ಲೈನ್ ಮೆಟ್ರೋ ಸಂಚಾರ ಸಾಧ್ಯತೆ
ನಮ್ಮ ಮೆಟ್ರೋದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಪಿಂಕ್ ಲೈನ್‌ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ರೈಲಿನ ಮಾದರಿಯನ್ನು ಬಿಐಎಂಎಲ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. 23 ಚಾಲಕರಹಿತ ರೈಲುಗಳಿಗೆ ಆರ್ಡರ್ ನೀಡುತ್ತಿದೆ, 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ಒಟ್ಟು 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL ಸಿದ್ಧತೆ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಬ್ಲ್ಯೂ ಲೈನ್ ಮತ್ತು ಪಿಂಕ್ ಲೈನ್ ಮೆಟ್ರೋಗಳಿಗಾಗಿ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು BEML ಪೂರೈಸಲಿದೆ. ಮೆಟ್ರೋ ಟ್ರೇನ್‌ಸೆಟ್‌ಗಳನ್ನು ಸಂಪೂರ್ಣವಾಗಿ ಬೆಂಗಳೂರಿನ BEML ನಲ್ಲಿ ವಿನ್ಯಾಸಗೊಳಿಸಲಾಗಿದೆ, ಇಂಜಿನಿಯರಿಂಗ್ ಮತ್ತು ನಿರ್ಮಾಣ ಎಲ್ಲವೂ ಇಲ್ಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.