Headlines

ನೂರಾರು ಎಕರೆಯ ಧಾರವಾಡ ಕರ್ನಾಟಕ ವಿವಿ ಜಮೀನು ರಕ್ಷಣೆಗೆ ದಿಟ್ಟ ಹೆಜ್ಜೆ: ಕುಲಪತಿ ನಡೆಗೆ ಮೆಚ್ಚುಗೆ

ನೂರಾರು ಎಕರೆಯ ಧಾರವಾಡ ಕರ್ನಾಟಕ ವಿವಿ ಜಮೀನು ರಕ್ಷಣೆಗೆ ದಿಟ್ಟ ಹೆಜ್ಜೆ: ಕುಲಪತಿ ನಡೆಗೆ ಮೆಚ್ಚುಗೆ


ಧಾರವಾಡ ಕರ್ನಾಟಕ ವಿವಿ, ಕುಲಪತಿ ಪ್ರೊ. ಎ.ಎಂ. ಖಾನ್

ಧಾರವಾಡ, ಡಿಸೆಂಬರ್ 18: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೇಲಿಂದ ಧಾರವಾಡ ಕರ್ನಾಟಕ ವಿವಿ (ಕರ್ನಾಟಕ ವಿಶ್ವವಿದ್ಯಾಲಯ) ಕೂಡ ಒಂದು. ಈ ವಿಶ್ವವಿದ್ಯಾಲಯಕ್ಕೆ ಸೇರಿರುವ ನೂರಾರು ಜಮೀನಿದೆ (ಭೂಮಿ). ಆದರೆ ಇತ್ತೀಚಿನ ದಿನಗಳಲ್ಲಿ ಅದರ ನಿರ್ವಹಣೆ ಮಾಡಲಾಗದೆ ಅನೇಕರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಅತಿಕ್ರಮಣ ತೆರವು ಮಾಡಲು ಹೋದರೆ ಸಾಕಷ್ಟು ಸಮಸ್ಯೆಯಾಗುತ್ತಲೇ ಇದೆ. ಆದಾಗ್ಯೂ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ವಿವಿಯ ಕುಲಪತಿ ಹೊಸ ರೀತಿಯ ಸರ್ವೆ ಮಾಡಿಸಿ, ತಮ್ಮ ಅವಧಿಯಲ್ಲಿ ಬೇಲಿ ಹಾಕಿ ರಕ್ಷಣೆ ಮಾಡಲು ಮುಂದಾಗಿದ್ದಾರೆ.

ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯ. ಹಸಿರಿನಿಂದ ಕಂಗೊಳಿಸುವ ಈ ವಿಶ್ವವಿದ್ಯಾಲಯಕ್ಕೆ ಒಟ್ಟು 880 ಡಾಲರ್ ಜಮೀನಿದೆ. ಆದರೆ ಆ ಜಮೀನಿನ ರಕ್ಷಣೆಯೇ ವಿಶ್ವವಿದ್ಯಾಲಯಕ್ಕೆ ದೊಡ್ಡ ಸವಾಲಾಗಿದೆ. ಅನೇಕ ಕಡೆಗಳಲ್ಲಿ ವಿವಿಯ ಜಮೀನಿನ ಅತಿಕ್ರಮಣವಾಗಿ, ಅಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಂತಹ ಜಾಗವನ್ನು ಮರಳಿ ಪಡೆಯಲು ವಿವಿಯ ಅಧಿಕಾರಿಗಳು ಹೋದರೆ ಸಾಕಷ್ಟು ಗಲಾಟೆಗಳು ನಡೆದಿವೆ.

ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಉದ್ಯೋಗಗಳು: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?

ಹೀಗಾಗಿ ಯಾವೊಬ್ಬ ಕುಲಪತಿಯೂ ಇದರ ತಂಟೆಗೆ ಹೋಗದೇ, ತಾವಾಯಿತು ತಮ್ಮ ಅಧಿಕಾರವಾಯಿತು ಅಂತಾ ಇದ್ದುಬಿಟ್ಟಿದ್ದರು. ಆದರೆ ಇತ್ತೀಚಿಗೆ ಅಧಿಕಾರ ಸ್ವೀಕರಿಸಿರುವ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ವಿಶ್ವವಿದ್ಯಾಲಯದ ಎಲ್ಲ ಆಸ್ತಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಮೂಲತಃ ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಪ್ರೊ. ಖಾನ್, ತಮ್ಮ ಈ ಕೆಲಸವನ್ನು ಮಾಡಿಯೇ ತೀರಬೇಕು ಅಂತಾ ನಿರ್ಧರಿಸಿದ್ದಾರೆ. ಹೊಸ ಬಗೆಯ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ.

ಧಾರವಾಡ ನಗರದ ಅನೇಕ ಕಡೆಗಳಲ್ಲಿ ಈ ವಿಶ್ವವಿದ್ಯಾಲಯದ ಆಸ್ತಿ ವಿಸ್ತರಿಸಿದೆ. ಒಂದೇ ಕಡೆ ಜಮೀನು ಇದ್ದರೆ ರಕ್ಷಣೆ ಹಾಗೂ ನಿರ್ವಹಣೆ ತುಂಬಾನೇ ಸರಳ. ಆದರೆ ಅನೇಕ ಕಡೆಗಳಲ್ಲಿ ಆಸ್ತಿ ಗುರುತಿಸಿ, ಅವುಗಳ ಗಡಿ ಗುರುತಿಸಿ ಬೇಲಿಯನ್ನು ಅಳವಡಿಸುವುದು ತುಂಬಾ ಕಷ್ಟ. ಆದಾಗಲೇ ಸ್ಥಳೀಯರು ಅದನ್ನು ಅತಿಕ್ರಮಣ ಮಾಡಿಕೊಂಡರು ಅವನನ್ನು ಅಲ್ಲಿಂದ ಒಕ್ಕಲೆಬ್ಬಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಇದೀಗ ಡ್ರೋನ್ ಮೂಲಕ ವಿಶ್ವವಿದ್ಯಾಲಯದ ಸರ್ವೆ ನಡೆಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಸರ್ವೆ ಇಲಾಖೆಯೊಂದಿಗೆ ಸಂವಹನ ನಡೆಸಿ, ಪ್ರಸ್ತುತವಾದ ಸರ್ವೆ ಮಾಡಿಸಲು ನಿರ್ಧರಿಸಲಾಗಿದೆ. ಅತಿಕ್ರಮಣ ಮಾಡಿದವರು ಕೂಡ ಹೆಚ್ಚಿಗೆ ಮಾತನಾಡಲು ಬರುವುದಿಲ್ಲ ಇದರ ಹಿಂದಿರುವ ಉದ್ದೇಶ. ನಗರದ ಹೃದಯ ಭಾಗದಲ್ಲಿಯೂ ವಿಶ್ವವಿದ್ಯಾಲಯದ ಸಾಕಷ್ಟು ಆಸ್ತಿ ಇವೆ. ಸಣ್ಣ ಜಮೀನಿಗೆ ಅದಾಗಲೇ ಕಾಂಪೌಂಡ್ ಇಲ್ಲವೇ ತಂತಿ ಬೇಲಿಯ ರಕ್ಷಣೆ ಇದೆ. ಆದರೆ ದೊಡ್ಡ ಜಮೀನಿಗೆ ಈ ರಕ್ಷಣೆ ನೀಡಲು ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅಂಥ ಜಮೀನುಗಳು ಅತಿಕ್ರಮಣಗೊಂಡಿವೆ. ಇನ್ನು ನೂತನ ಕುಲಪತಿಗಳ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ವಿಶ್ವವಿದ್ಯಾಲಯಕ್ಕೆ ಎಷ್ಟು ಜಮೀನಿದ್ದರೂ ಕಡಿಮೆಯೇ. ಅದು ನಿರಂತರವಾಗಿ ವಿಸ್ತರಣೆಯಾಗುತ್ತಾ ಹೋಗುವ ಜ್ಞಾನ ಕೇಂದ್ರ. ಹೀಗಾಗಿ ಇರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಯಾರಿಗೂ ಬಿಟ್ಟುಕೊಡಬಾರದು ಅನ್ನೋದು ಸ್ಥಳೀಯರ ಅಭಿಪ್ರಾಯ.

ಇದನ್ನೂ ಓದಿ: ಮಹಾನಗರ ಪಾಲಿಕೆಗಳಲ್ಲಿ ಇನ್ನು ಇರಲ್ಲ ಆರೋಗ್ಯಾಧಿಕಾರಿ ಹುದ್ದೆ: ಕಾರಣ ಇಲ್ಲಿದೆ

ವಿವಿ ಭೂಮಿಯ ಅತಿಕ್ರಮಣದ ಅನೇಕ ಪ್ರಕರಣಗಳು ಅದಾಗಲೇ ನ್ಯಾಯಾಲಯದ ಮೆಟ್ಟಿಲೇರಿವೆ. ಇದಕ್ಕೆ ಕಾರಣ ಹಿಂದೆ ಕಾರ್ಯನಿರ್ವಹಿಸಿದ ವಿವಿ ಕುಲಪತಿಗಳು ಹಾಗೂ ಸಿಬ್ಬಂದಿ. ಅತಿಕ್ರಮಣ ತೆರವು ವೇಳೆ ರಾಜಕೀಯ ನಾಯಕರು ಕೂಡ ಪ್ರಭಾವ ಬೀರುತ್ತಾರೆ. ಹೀಗಾಗಿ ಅಧಿಕಾರಿಗಳಿಗೆ ಕೂಡ ಇದನ್ನು ತಡೆಯುವುದು ತುಂಬಾನೇ ಕಷ್ಟ. ಆದರೆ ಇದೀಗ ನೂತನ ಕುಲಪತಿಗಳ ಗಟ್ಟಿ ನಿರ್ಧಾರದಿಂದಾಗಿ ಕೈಬಿಟ್ಟು ಹೋಗಿರುವ ಮರಳಿ ಬರುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *