ಬೆಳಗಾವಿ, (ಡಿಸೆಂಬರ್ 18): ಕರ್ನಾಟಕ ಕಾಂಗ್ರೆಸ್ ನಲ್ಲಿನ (ಕರ್ನಾಟಕ ಕಾಂಗ್ರೆಸ್) ಬಣ ರಾಜಕೀಯ ಬ್ರೇಕ್ ಫಾಸ್ಟ್ ನಿಂದ ಡಿನ್ನರ್ ವರೆಗೂ (ಭೋಜನ ಸಭೆ) ಬಂದು ನಿಂತಿದೆ. ಹೌದು.. ಸಿಎಂ ಕುರ್ಚಿಗಾಗಿ ಸಿಎಂ -ಡಿಸಿಎಂ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಬಣದ ಡಿನ್ನರ್ ಪಾಲಿಟಿಕ್ಸ್ ಮುಂದುವರೆದಿದೆ. ಬೆಳಗಾವಿ ಅಧಿವೇಶದ ಸಂದರ್ಭದಲ್ಲೂ ಸಹ ಜಿದ್ದಿಗೆ ಬಿದ್ದವರಂತೆ ಉಭಯ ನಾಯಕರ ಬಣದಿಂದ ಒಬ್ಬರಾದ ಮೇಲೆ ಒಬ್ಬರಿಂದ ಡಿನ್ನರ್ ಮೀಟಿಂಗ್ ಆಯೋಜನೆಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಂದು (ಡಿಸೆಂಬರ್ 18) ಸಚಿವ ಸತೀಶ್ ಜಾರಕಿಹೊಳಿ (ಸತೀಶ್ ಜಾರಕಿಹೊಳಿ) ತಮ್ಮ ಬೆಳಗಾವಿ ನಿವಾಸದಲ್ಲಿ ಸಿಎಂ ಸೇರಿದಂತೆ ತಮ್ಮ ಬಣದ ನಾಯಕರಿಗೆ ಔತಣಕೂಟ ಏರ್ಪಡಿಸಲಾಗಿತ್ತು, ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಜೊತೆಗೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಎಂ.ಸಿ.ಸುಧಾಕರ್ ಆಗಮಿಸಿ ಡಿನ್ನರ್‌ನಲ್ಲಿ ಭಾಗವಹಿಸಿದ್ದಾರೆ. ಇನ್ನು ಡಿನ್ನರ್ ಗೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದೆ. ಸೇರಿದಂತೆ ಉತ್ತರ ಕರ್ನಾಟಕದ ಶೈಲಿ ಸಹ ಒಳಗೊಂಡಿದೆ.
ಅನಾರೋಗ್ಯದ ನಡುವೆ ಸಿಎಂ ಆಪ್ತನ ಔತಣಕೂಟಕ್ಕೆ ಆಗಮಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರಿಗೆ ಹೊಟ್ಟೆ ಸರಿ ಇಲ್ಲದಿದ್ದರೂ ಅವರು ನಾನ್ ವೆಜ್ ಊಟ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ಸದ್ಯಕ್ಕಂತೂ ಈ ಡಿನ್ನರ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದು, ಆಪ್ತ ಸಚಿವರಿಗೆ ಕಂಪನಿ ಕೊಡುತ್ತಿದ್ದಾರೆ.