Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 19ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 19ರ ದಿನಭವಿಷ್ಯ


ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಬಹಳ ಚಟುವಟಿಕೆಯಿಂದ ಈ ದಿನ ಕಳೆದು ಹೋಗುತ್ತದೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳಿಗೆ, ಮಾರಾಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ, ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚು ಆಗುವಂಥ ಯೋಗ ಇದೆ. ನಿಮಗೆ ಹೊಸದಾಗಿ ಪರಿಚಯ ಆಗುವ ವ್ಯಕ್ತಿಗಳ ಮೂಲಕ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಆಗಲಿದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಕೈ ಸೇರಬೇಕಾದ ದೊಡ್ಡ ಮೊತ್ತ ಬರುವಂಥ ಯೋಗ ಇದೆ. ದೂರದ ಪ್ರದೇಶ ಅಥವಾ ದೂರದ ದೇಶದ ವಾಸ ಮಾಡುತ್ತಾ ಇರುವ ಮೂಲಕ ಸಂತೋಷದ ಸುದ್ದಿ ಬರುವ ಸಾಧ್ಯತೆ ಇದೆ. ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಸಂಪೂರ್ಣವಾಗಿ ವಿವರ ನೀಡುವ ತನಕ ಅಭಿಪ್ರಾಯವನ್ನು ಹೇಳಲು ಹೋಗಬೇಡಿ. ನೀರು ಸರಿಯಾದ ಪ್ರಮಾಣದಲ್ಲಿ ಸೇವಿಸುವುದಕ್ಕೆ ಆದ್ಯತೆ ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನವ ವಿವಾಹಿತರಿಗೆ ಸಂತೋಷವಾಗಿ ಕಳೆಯುವಂಥ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿವಾಹಿತರು ಇದ್ದಲ್ಲಿ ಸಂಗಾತಿಯ ಮೂಲಕ ಹಣಕಾಸಿನ ನೆರವು ದೊರೆಯಲಿದೆ. ಕಲೆ, ಫ್ಯಾಷನ್, ಸೌಂದರ್ಯ, ಈ ವಿನ್ಯಾಸ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭ ಫಲ ಸಿಗುತ್ತದೆ. ಇಷ್ಟು ಸಮಯ ಸಾಧಿಸಲು ಸಾಧ್ಯವಾಗಿಲ್ಲ ಎಂದಾಗಿದ್ದಲ್ಲಿ ಹಣಕಾಸಿನಲ್ಲಿ ಸ್ಥಿರತೆ ಕಂಡುಬರುತ್ತದೆ. ಮನೆಗೆ ತಿಂಗಳ ತಿಂಗಳು ಆಗುವ ದಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ನಿಮಗೆ ಬಹಳ ಇಷ್ಟ ಪಡುವ ವ್ಯಕ್ತಿಗಳ ಜೊತೆಗೆ ಜಾಸ್ತಿ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಚರ್ಮ ಅಥವಾ ಕಣ್ಣುಗಳಿಗೆ ತೊಂದರೆ ಕಾಣಿಸಬಹುದು. ಈ ರೀತಿ ಆದಲ್ಲಿ ಅಲಕ್ಷ್ಯ ಬೇಡ. ಧಾರ್ಮಿಕ ಕಾರ್ಯಗಳು ಅಥವಾ ದಾನ ಮನಸ್ಸಿಗೆ ತೃಪ್ತಿ. ಒಟ್ಟಾರೆ ಈ ದಿನವು ಉದ್ಯೋಗ- ಜೀವನ ಸಮತೋಲನದಿಂದ ಸಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸರಿ- ತಪ್ಪುಗಳ ಬಗ್ಗೆ ಆತ್ಮವಿಶ್ಲೇಷಣೆ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ದಿನ ಇದಾಗಿದೆ. ಗಂಭೀರವಾದ ಸಂಗತಿಗಳ ಬಗ್ಗೆ ಪ್ಲಾನಿಂಗ್-ಬಜೆಟ್ ಸಿದ್ಧ ಮಾಡಿಕೊಳ್ಳಲು ನೀವು ಒಬ್ಬರೇ ದೂರದ ಪ್ರದೇಶಗಳಿಗೆ ಏಕಾಂಗಿಯಾಗಿ ಹೋಗುವುದಕ್ಕೆ ನಿರ್ಧಾರ ತೆಗೆದುಕೊಳ್ಳಬೇಕು. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಹೀಗಳೆಯುವುದು ಮಾತನಾಡುವುದರಿಂದ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ. ತುಂಬ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ ಅಂತಾ ದಿನದಿಂದ ಅದನ್ನು ಮುಂದೂಡುವುದು ಕ್ಷೇಮ. ನೀವು ದೊಡ್ಡ ಪ್ರಮಾಣದಲ್ಲಿ ಲಾಭ ಬರಬಹುದು ಎಂದುಕೊಂಡಿದ್ದು ದೊಡ್ಡ ಮಟ್ಟಕ್ಕೆ ಬಾರದಂತೆ ಆಗಲಿದೆ. ಅಥವಾ ಇಷ್ಟರಲ್ಲಾಗಲೇ ನಿಮ್ಮ ಕೈ ಸೇರಬೇಕಾಗಿದ್ದ ಲಾಭದ ಮೊತ್ತವೂ ನಿಧಾನವಾಗುತ್ತದೆ ಎಂಬ ಮಾಹಿತಿ ದೊರೆಯಲಿದೆ. ಗಂಟಲಿನ ನೋವು ಕಾಡಲಿದೆ. ಜನರ ಮಧ್ಯೆ ಇರುವುದು ಕಿರಿಕಿರಿ ಉಂಟು ಮಾಡಲಿದೆ, ಸಾಮಾಜಿಕವಾಗಿ ಹೆಚ್ಚು ಸಕ್ರಿಯವಾಗಲು ಮನಸ್ಸು ಇರುವುದಿಲ್ಲ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಎಲ್ಲ ಸನ್ನಿವೇಶದಲ್ಲಿ ಹಾಕಿದ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ನಿರೀಕ್ಷೆ ಹೆಚ್ಚಾದಷ್ಟೂ ಬೇಸರ ಸಹ ಪಡುವಂತೆ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸುವಂತೆ ಆಗಲಿದೆ. ಚಿನ್ನ- ಬೆಳ್ಳಿ ಅಥವಾ ವಜ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡುವ ಯೋಗ ಇದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದಲ್ಲಿ ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸರ್ಕಾರದಿಂದ ಆಗಬೇಕಾದ ಪೋಡಿ, ಸರ್ವೇ, ಖಾತಾ- ಸ್ಥಾನದ ಕೆಲಸಗಳಿಗೆ ಪದೇ ಪದೇ ಅಲೆದಾಡುವಂತೆ ಆಗಲಿದೆ. ಮುಖ್ಯವಾದ ಎಲ್ಲ ದಾಖಲೆಗಳನ್ನು ಒಮ್ಮೆಗೇ ತೆಗೆದುಕೊಂಡರೆ ಒಳ್ಳೆಯದು. ನೀವು ಯಾರಿಗಾದರೂ ಹಣ ನೀಡುವುದಾಗಿ ಮಾತು ನೀಡಿದ್ದಲ್ಲಿ ಅದರ ಕಡೆಗೆ ಗಮನ ಕೊಡಲಾಗಿದೆ. ದೇಹದ ತೂಕ ಹೆಚ್ಚಾಗಲಿದೆ ಅಂತಾ ನಿಯಮಿತವಾದ ವ್ಯಾಯಾಮ ಮಾಡಲು ಆರಂಭಿಸಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೇನೋ ಅತಿ ಉತ್ಸಾಹ ಇರುತ್ತದೆ. ಆದರೆ ಸುತ್ತಮುತ್ತಲಿನವರ ಪರಿಸ್ಥಿತಿ, ಸ್ಥಿತಿಯನ್ನು ಸಹ ಅರ್ಥ ಮಾಡಿಕೊಂಡು ಮಾತುಕತೆ ನಡೆಸುವುದು ಒಳ್ಳೆಯದು. ಹಣಕಾಸಿನ ವಿಚಾರ ಮಾತನಾಡುತ್ತೀರಿ ಅಂತಾದಲ್ಲಿ ಸಾಧ್ಯಾಸಾಧ್ಯತೆಯ ಬಗ್ಗೆ ಸ್ಪಷ್ಟ ಚಿತ್ರಣ ಇರಬೇಕು. ಮನೆ ನಿರ್ಮಾಣ, ಆಸ್ತಿ ಖರೀದಿಯ ಮಾತುಕತೆಗೆ ತೆರಳುತ್ತಿದ್ದೀರಿ ಅಂತಾ ಮನೆ ದೇವರನ್ನು ಮನಸ್ಸಿನಲ್ಲಿಟ್ಟುಕೊಂಡು ನೆನಪಿಸಿಕೊಳ್ಳಿ. ಹಳೇ ಸ್ನೇಹಿತೆ ಮತ್ತೆ ಈ ದಿನ ಭೇಟಿ ಆಗುವ ಮೂಲಕ ಒಂದು ಬಗೆಯ ಸಂತೋಷದಿಂದ ನಿಮ್ಮದಾಗುತ್ತದೆ. ಜಿಮ್, ಯೋಗ ತರಬೇತಿ ತರಗತಿಗಳನ್ನು ನಡೆಸುತ್ತಾ ಇರುವವರು ಆದಾಯಕ್ಕೆ ಹೆಚ್ಚುವರಿ ಮೂಲಗಳನ್ನು ಮಾಡಿಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಿದರು. ಕೃಷಿಕರ ಕುಟುಂಬದ ಆಸ್ತಿ ವ್ಯಾಜ್ಯಗಳನ್ನು ಬಗೆಹರಿಸಲು ಆದ್ಯತೆಯನ್ನು ನೀಡಿದ್ದೇನೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಶ್ರಮ ಹಾಗೂ ಶಿಸ್ತಿನ ಜೀವನಕ್ಕೆ ಪ್ರಾಮುಖ್ಯ ನೀಡುವ ದಿನ ಇದಾಗಿದೆ. ನೀವು ಕೈಗೆತ್ತಿಕೊಂಡಿರುವ ಕೆಲಸ- ಕಾರ್ಯಗಳು ನಿಧಾನವಾಗಿ ಮುಂದಕ್ಕೆ ಸಾಗಿದರೂ ದೃಢವಾಗಿ ಗುರಿಯತ್ತ ತಲುಪುವ ಸೂಚನೆ ದೊರೆಯುತ್ತದೆ. ಸರ್ಕಾರಿ ಕೆಲಸಗಳು ಮತ್ತು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಆದರೆ ತಾಳ್ಮೆ- ಸಂಯಮದಿಂದ ಮುಂದುವರಿದಲ್ಲಿ ಯಶಸ್ವಿಯಾಗಿ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಸಂಬಂಧಗಳಲ್ಲಿ ಸಹನೆ ಕಾಯ್ದುಕೊಳ್ಳುವುದು ಮುಖ್ಯ. ಅನಿರೀಕ್ಷಿತ ಖರ್ಚುಗಳಿಂದ ಕಂಗಾಲು ಆಗುವಂತೆ ಆಗಲಿದೆ. ಕುಟುಂಬಕ್ಕೆ ಆಗುವ ಖರ್ಚಿನ ಪ್ರಮಾಣದಲ್ಲಿ ದೊಡ್ಡ ಏರಿಕೆ ಆಗುವುದರಿಂದ ಸ್ವಲ್ಪ ಮಟ್ಟಿಗೆ ಸಾಲ, ಅಥವಾ ಕ್ರೆಡಿಟ್ ಕಾರ್ಡ್ ಬಳಸುವ ಅನಿವಾರ್ಯ ಸೃಷ್ಟಿ ಆಗಲಿದೆ. ದ್ವಿಚಕ್ರ ವಾಹನ ಹೆಚ್ಚು ಬಳಸುತ್ತೀರಿ ಅಂತಾದಲ್ಲಿ ದೇಹಾಯಾಸ, ಬೆನ್ನು ನೋವು ಕಾಡಬಹುದು. ನಿಮ್ಮ ಶ್ರಮಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರಲಿವೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಡಿಸೆಂಬರ್ 14 ರಿಂದ 20 ರ ವಾರಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಬುದ್ಧಿಶಕ್ತಿ ಪ್ರಖರವಾಗಿ ಇರುತ್ತದೆ. ಇನ್ನು ನಿಮ್ಮ ಸಂವಹನ ಕೌಶಲವು ಬಹಳ ಚುರುಕಾಗಿ ಇರುತ್ತದೆ. ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಬಹಳಷ್ಟು ಆಗಲಿದೆ. ಶಿಕ್ಷಣ, ತರಬೇತಿ, ಬರವಣಿಗೆಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಫಲ ಸಿಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಬಡ್ತಿ, ವೇತನದ ಬಗ್ಗೆ ಇತರರ ಮೂಲಕ ಸುಳಿವು ದೊರೆಯಲಿದೆ. ಹಣಕಾಸಿನ ವಿಷಯದಲ್ಲಿ ಲಾಭದ ಅವಕಾಶ ಯಾವುದಾದರೂ ಮಾಡುವ ಪ್ರಯತ್ನದಲ್ಲಿ ಖರ್ಚು ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಬಗ್ಗೆ ಮಾತುಕತೆ ನಿಮಗೆ ಹೊಸ ಆಲೋಚನೆಗಳನ್ನು ನೀಡಿದೆ. ಆರೋಗ್ಯದ ವಿಷಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಆಹಾರದಲ್ಲಿ ನಿಯಮ ಪಾಲಿಸುವುದು ಅವಶ್ಯ. ದಿನದ ಅಂತ್ಯಕ್ಕೆ ಆತ್ಮತೃಪ್ತಿ ದೊರೆಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಭಾವನಾತ್ಮಕ ದೃಷ್ಟಿಯಿಂದ ಏಳುಪೇರಿನಿಂದ ಕೂಡಿರುವ ದಿನ ಇದಾಗಿದೆ. ಸಣ್ಣ- ಪುಟ್ಟ ವಿಚಾರಗಳಿಗೆ ಮನಸ್ಸು ತೀವ್ರವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಈ ನಿರ್ಧಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿನ ಕೆಲವು ಗೊಂದಲಗಳನ್ನು ಮಾತುಕತೆ ಮೂಲಕ ಪರಿಹರಿಸಬಹುದು. ನೀವು ಉದ್ಯೋಗಸ್ಥರಲ್ಲಿ ಸವಾಲಿನಿಂದ ಕೂಡಿದ ಪ್ರಾಜೆಕ್ಟ್ ಮುನ್ನಡೆಸುತ್ತಾ ಇದ್ದೀರಿ ಅಂತಾ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ನಿಮಗೇ ಅನುಭವ ಆಗುವ ರೀತಿಯಲ್ಲಿ ಹಣಕಾಸಿನಲ್ಲಿ ನಿಧಾನವಾದ ಪ್ರಗತಿ ಕಂಡುಬರುತ್ತದೆ. ಒಂದು ಕೆಲಸ ಮಾಡಿದೆ, ಬಹಳ ಸಮಯದಿಂದ ಬರಬೇಕಾದ ಹಣ ಬಂದಿಲ್ಲ ಎಂದಾದಲ್ಲಿ ಹಳೆಯ ಬಾಕಿ ಹಣ ವಸೂಲಿ ಆಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಕುಡಿಯುವುದು ಅಗತ್ಯ. ನಿದ್ದೆಯ ಕೊರತೆ ಕಾಡಬಹುದು. ಸಂಗೀತ, ಪ್ರಾರ್ಥನೆ ಅಥವಾ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಈ ದಿನ ನಿಮ್ಮಲ್ಲಿನ ನಾಯಕತ್ವ ಗುಣವು ಹೆಚ್ಚು ಪ್ರಚಾರಕ್ಕೆ ಬರುತ್ತವೆ. ಉದ್ಯೋಗ ಸ್ಥಳದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರಿಗೆ ಮಾರ್ಗದರ್ಶನ ಆಗಲಿದೆ. ಮೇಲಧಿಕಾರಿಗಳ ಗಮನ ನಿಮ್ಮತ್ತ ಸೆಳೆಯುವ ಸಾಧ್ಯತೆಯಿದೆ. ಹೊಸ ಜವಾಬ್ದಾರಿಗಳನ್ನು ನಿಮಗೆ ವಹಿಸಬಹುದು. ನೀವು ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದರೂ ಹಣಕಾಸಿನ ವಿಷಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಆ ಅನಗತ್ಯವಾಗಿ ಖರ್ಚಿನ ವಸ್ತು ಹೆಚ್ಚು ಮಾಡಿಕೊಳ್ಳಬೇಡಿ. ಕುಟುಂಬದ ಹಿರಿಯರ ಸಲಹೆ ಕೌಟುಂಬಿಕ ಹಣಕಾಸಿನ ನಿರ್ಧಾರವು ಉಪಯುಕ್ತವಾಗುತ್ತದೆ. ಆರೋಗ್ಯದ ವಿಷಯದಲ್ಲಿ ಮಿಶ್ರ ಫಲವನ್ನು ಪಡೆಯಲಾಗಿದೆ. ನಿಮ್ಮಲ್ಲಿ ಕೆಲವರಿಗೆ ತಲೆನೋವು ಅಥವಾ ಒತ್ತಡ ಕಾಡಬಹುದು. ಸ್ವಲ್ಪ ವಿಶ್ರಾಂತಿ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ಶಾಂತಿ ದೊರೆಯುತ್ತದೆ. ಆತುರದ ಮಾತುಗಳಿಂದ ಅವಕಾಶ ಕಳೆದುಕೊಳ್ಳುವಂತೆ ಆಗಲಿದೆ, ಎಚ್ಚರಿಕೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *