Headlines

ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್

ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್


ರವಿಚಂದ್ರನ್ ಅವರು ‘ಪ್ಯಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಮನೆಯ ರಾಶಿಕಾ ಶೆಟ್ಟಿ ಕೂಡ ನಟಿಸಿದ್ದಾರೆ. ಇಬ್ಬರದ್ದೂ ತಂದೆ-ಮಗಳ ಪಾತ್ರ. ಈ ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ. ಈ ಹಾಡು ಡಿಸೆಂಬರ್ 18 ರಂದು ರಿಲೀಸ್ ಆಗಿದೆ. ಈ ಸಿನಿಮಾ ಪ್ರಚಾರಕ್ಕಾಗಿ ಬಿಗ್ ಬಾಸ್ (ಬಿಗ್ ಬಾಸ್) ಮನೆಗೆ ಬಂದಿದ್ದಾರೆ ರವಿಚಂದ್ರನ್. ಈ ವೇಳೆ ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾದ ಹೆಸರೇ ಹೇಳುವಂತೆ ‘ಪ್ಯಾರ್’ ಇದೊಂದು ಪಕ್ಕಾ ಲವ್ ಸ್ಟೋರಿ ಹೊಂದಿರೋ ಸಿನಿಮಾ. ಈ ಚಿತ್ರ ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲೇ ತೆರೆಗೆ ಬರುತ್ತಿದೆ. ರಾಶಿಕಾ ಶೆಟ್ಟಿ ಕೂಡ ಸಿನಿಮಾದಲ್ಲಿ ನಟಿಸದೆ ಚಿತ್ರಕ್ಕೆ ಮೈಲೇಜ್ ಸಿಕ್ಕಿದೆ. ಸಿನಿಮಾದ ಟೈಟಲ್‌ಗೆ ತಕ್ಕಂತೆ ಚಟುವಟಿಕೆ ಒಂದನ್ನು ನೀಡಲಾಯಿತು.

ಈ ಚಟುವಟಿಕೆಯ ಅನುಸಾರ ಎಲ್ಲರೂ ತಮ್ಮ ಲವ್ ಸ್ಟೋರಿನ ಸ್ಪರ್ಧಿಗಳ ಎದುರು ಹೇಳಬೇಕಿತ್ತು. ರವಿಚಂದ್ರನ್ ಅವರ ಮೊದಲ ಪ್ರೇಮಕಥೆ ತುಂಬಾನೇ ಸುಂದರವಾಗಿತ್ತು. ನಂತರ ಎಲ್ಲರೂ ತಮ್ಮ ಪ್ರೇಮಕಥೆಯನ್ನು ಹೇಳಿದರು. ಈ ಸಂದರ್ಭದಲ್ಲಿ ಗಿಲ್ಲಿ ಅವರು ಸುಳ್ಳು ಹೇಳಿ ರವಿಚಂದ್ರನ್ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಭಾರೀ ಫೈಟ್; ಗಿಲ್ಲಿನ ಪ್ರಶ್ನೆ ಮಾಡಿದ ಕಾವ್ಯ

ಗಿಲ್ಲಿ ಕಾಲೇಜು ಸಮಯದ ಲವ್ ಸ್ಟೋರಿ ಹೇಳಿದ್ದಾರೆ. ಬಸ್ ಅಲ್ಲಿ ಹೋಗುವಾಗ ಹುಡುಗಿ ಮೇಲೆ ಲವ್ ಆಗಿದ್ದು, ಅವರ ಹಿಂದೆ ಸುತ್ತಿದ್ದು, ಮಾತನಾಡಿಸಲು ಪ್ರಯತ್ನಿಸಿದ್ದು, ಬಳಿಕ ಆಕೆ ಅಣ್ಣ ಹೇಳಿದ್ದು ಎಲ್ಲವನ್ನೂ ವಿವರಿಸಿದ್ದಾರೆ. ಆದರೆ, ಇದು ಸೇಮ್ ಟು ಸೇಮ್ ‘ರಾಜಾಹುಲಿ’ಯಲ್ಲಿ ಬರುವ ಲವ್ ಸ್ಟೋರಿ ಹೇಗಿತ್ತು. ಇದನ್ನು ರವಿಚಂದ್ರನ್ ಸುಲಭವಾಗಿ ಕಂಡು ಹಿಡಿದರು. ಗಿಲ್ಲಿ ನಟ ಅವರು ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದಾರೆ. ಅವರು ಸಿನಿಮಾದ ಕಥೆಯನ್ನು ಸಿಚ್ಯುವೇಷನ್‌ಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *