ನಟಿ ರುಕ್ಮಿಣಿ ವಸಂತ (ರುಕ್ಮಿಣಿ ವಸಂತ್) ಅವರನ್ನು ಜನರು ಒಪ್ಪಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ‘ಕಾಂತಾರ: ಅಧ್ಯಾಯ 1’ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರೆ. ಈ ಪಾತ್ರ ಗಮನ ಸೆಳೆದಿದೆ. ಈ ಸಿನಿಮಾ ಬಳಿಕವೂ ಯಾರನ್ನೂ ಹೇಟ್ ಮಾಡಿಲ್ಲ. ಇದಕ್ಕೆ ಅವರು ಸಂತಸ ಹೊರಹಾಕಿದರು. ಬಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿಯರು ಕ್ಯೂಟ್ ಕ್ಯೂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಆದರೆ, ಹಾಗೆ ಕಾಣಿಸಲಿಲ್ಲ ಎಂದಾಗ ಕೆಲವೊಮ್ಮೆ ಫ್ಯಾನ್ಸ್‌ಗೆ ಬೇಸರ ಆಗೋದನ್ನು ನೀವ ಕಂಡೆ. ಅದರಲ್ಲೂ ವಿಲನ್ ಪಾತ್ರಗಳಲ್ಲಿ ನಟಿಸಿದರೆ ಫ್ಯಾನ್ಸ್ ಸಹಿಸುವುದೇ ಇಲ್ಲ. ಆದರೆ, ರುಕ್ಮಿಣಿ ವಿಷಯದಲ್ಲಿ ಆ ರೀತಿ ಆಗಿಲ್ಲ. ಈ ವಿಷಯದಲ್ಲಿ ಅವರಿಗೆ ಖುಷಿ ಇದೆ. ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾಲಿವುಡ್ ರಿಪೋರ್ಟರ್ ರೌಂಡ್ ಟೇಬಲ್ ನಲ್ಲಿ ಕನ್ನಡತಿ ರುಕ್ಮಿಣಿ ವಸಂತ
‘ಕಾಂತಾರ ಅಧ್ಯಾಯ 1′ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಈ ರೀತಿಯ ಪಾತ್ರ ಪ್ರಯೋಗವನ್ನು ವೃತ್ತಿಜೀವನದ ಆರಂಭದಲ್ಲಿ ಮಾಡುವುದು ಅಪಾಯಕಾರಿ. ಜನರು ನಾನು ನೆಗೆಟಿವ್ ಪಾತ್ರ ಮಾಡಿದರೂ ನನ್ನನ್ನು ಪ್ರೀತಿಸುತ್ತಿದ್ದಾರೆ. ಅವರು ದ್ವೇಷಿಸಲಿಲ್ಲ. ನನ್ನ ಪಾತ್ರ ವಿಲನ್ ಆಗುತ್ತದೆ ಎಂದು ಯಾರೂ ನೋಡಿರಲಿಲ್ಲ’ ಎಂದು ರುಕ್ಮಿಣಿ ಖುಷಿಯಿಂದ ಹೇಳಿದ್ದರು.
“ವಿರೋಧಿ ಪಾತ್ರವನ್ನು ನಿರ್ವಹಿಸುವುದು #ಕಾಂತಾರ ಅಧ್ಯಾಯ 1 ವೃತ್ತಿಜೀವನದ ಆರಂಭದಲ್ಲಿ ಪ್ರಯೋಗ ಮಾಡುವುದು ಅಪಾಯಕಾರಿ🤞. ಜನರು ದುಷ್ಟ ಪಾತ್ರದಲ್ಲಿ ನಟಿಸುವುದನ್ನು ಪ್ರೀತಿಸುತ್ತಿದ್ದರು, ದ್ವೇಷಿಸಲಿಲ್ಲ ಎಂದು ಹೇಳುತ್ತಿದ್ದಾರೆ. ನಾನು ವಿರೋಧಿಯಾಗಿ ಹೊರಹೊಮ್ಮುತ್ತೇನೆ ಎಂದು ಯಾರೂ ಊಹಿಸಿರಲಿಲ್ಲ🫰❤️🔥” – #ರುಕ್ಮಿಣಿ ವಸಂತ್pic.twitter.com/TlnSskjVdB
— AmuthaBharathi (@CinemaWithAB) ಡಿಸೆಂಬರ್ 17, 2025
ರುಕ್ಮಿ ವಸಂತ್ ಅವರು ತಮ್ಮ ವೃತ್ತಿ ಜೀವನದ ಉದ್ದಕ್ಕೂ ನಿರ್ವಹಿಸುವ ಪಾತ್ರಗಳಲ್ಲಿ ಒಂದು ಪ್ಯಾಟರ್ನ್ ಇದೆ. ಅವರು ಯಾವುದೇ ಸಿನಿಮಾ ಮಾಡಿದರೂ ಕಥಾ ನಾಯಕ ಅವರಿಗೆ ಸಿಗೋದಿಲ್ಲ. ಈ ಹಿಂದಿನ ಹಲವು ಸಿನಿಮಾಗಳಲ್ಲಿ ಅವರು ನಡೆದಿವೆ. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ಹಾಗೆಯೇ ಆಗಿದೆ. ಇದರಲ್ಲಿ ಕಥಾ ನಾಯಕನೇ ರುಕ್ಮಿಣಿಯನ್ನು ಸಾಯಿಸುತ್ತಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.