ಚಪ್ಪಲಿ ಹೊರಗಡೆ ಬಿಡಿ ಅಂದಿದಷ್ಟೇ: ತಂದೆ-ಮಗನಿಂದ ವೈದ್ಯನ ಮೇಲೆ ಮನಸೋ ಇಚ್ಛೆ ಹಲ್ಲೆ

ಚಪ್ಪಲಿ ಹೊರಗಡೆ ಬಿಡಿ ಅಂದಿದಷ್ಟೇ: ತಂದೆ-ಮಗನಿಂದ ವೈದ್ಯನ ಮೇಲೆ ಮನಸೋ ಇಚ್ಛೆ ಹಲ್ಲೆ


ಮೈಸೂರು, ಡಿಸೆಂಬರ್ 19: ಕ್ಷುಲ್ಲಕ ಕಾರಣಕ್ಕೆ ವೈದ್ಯನ ಮೇಲೆ ಅಪ್ಪ, ಮಗ ಹಲ್ಲೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ನಡೆದ ಘಟನೆ. ಕ್ಲಿನಿಕ್ ಹೊರಭಾಗ ಚಪ್ಪಲಿ ಬಿಟ್ಟು ಬನ್ನಿ ಅಂತಾ ಹೇಳಿದ ಶಿಶು ಆಸ್ಪತ್ರೆಯ ವೈದ್ಯ ಡಾ.ಅನೂಪ್ ಮೇಲೆ ಹಲ್ಲೆ ನಡೆಸಲಾಗಿದೆ. ರುಬಿಯಾಜ್ ಷರೀಫ್, ಆತನ ತಂದೆ ಹಲ್ಲೆಗೊಳಗಾದ ಆರೋಪಿಗಳಾಗಿದ್ದಾರೆ. ರುಬಿಯಾಜ್ ಷರೀಫ್ರ 3 ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಅವರು ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಚಪ್ಪಲಿ ಧರಿಸಿಯೇ ಒಳಬಂದ ಹಿನ್ನೆಲೆಯಿಂದ ಹೊರಗೆ ಬಿಡುವಂತೆ ವೈದ್ಯ ಅನೂಪ್ ಮನವಿ ಮಾಡಿದ್ದೇನೆ. ಚಪ್ಪಲಿ ಹೊರಗೆ ಬಿಡುವುದಿಲ್ಲ ಅಂತಾ ಗಲಾಟೆ ಮಾಡಿ ಹಲ್ಲೆ ನಡೆಸಲಾಗಿದೆ. ವೈದ್ಯ ಅನೂಪ್ ಮೇಲಿನ ಹಲ್ಲೆ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *