ಯಾರನ್ನ ನೋಡಿದರೂ ಸಾಲ, ಎಲ್ಲಿ ನೋಡಿದರೂ ಬೆಲೆ ಏರಿಕೆ, ಇದು ದುಬಾರಿ ದುನಿಯಾ ಅನಿಸುತ್ತದೆ. ಸರ್ಕಾರಕ್ಕೆ ಬೇಕಾದಷ್ಟು ನೋಟುಗಳನ್ನು ಮುದ್ರಿಸಿ ಬೇಕಾದವರಿಗೆ ಹಂಚಬಹುದಲ್ಲ, ಸರ್ಕಾರದ ಸಾಲವನ್ನೂ ತೀರಿಸಬಹುದಲ್ಲ ಎಂದು ಕೆಲವರಿಗಾದರೂ ಅನಿಸಿರಬಹುದು. ವಾಸ್ತವದಲ್ಲಿ, ಹಾಗೆ ಮಾಡಲು ಸಾಧ್ಯ ಇಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ತನ್ನ ಕುತ್ತಿಗೆ ತಾನೇ ಕುಯ್ದುಕೊಂಡಂತೆ. ವೆನಿಜುವೆಲಾ, ಜಿಂಬಾಬ್ವೆ ಇತ್ಯಾದಿ ಕೆಲವಾರು ದೇಶಗಳು ಹೀಗೆ ಮಾಡಲು ಹೋಗಿ ಒದ್ದಾಡುತ್ತಿವೆ. ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನ (ಪಾಕಿಸ್ತಾನ), ಶ್ರೀಲಂಕಾದಂತಹ ದೇಶಗಳು ಈ ದುಸ್ಸಾಹಸಕ್ಕೆ ಕೈಹಾಕಿಲ್ಲ. ಹೀಗೆ ಕರೆನ್ಸಿ ನೋಟುಗಳನ್ನು ಮನಬಂದಂತೆ ಪ್ರಿಂಟ್ ಮಾಡಲು ಆಗುವುದಿಲ್ಲ. ಅದಕ್ಕೆ ಒಂದು ಕ್ರಮ, ನೀತಿ, ನಿಯಮ, ಕಟ್ಟುಪಾಡುಗಳು ಇರುತ್ತವೆ.
ಹೆಚ್ಚು ನೋಟುಗಳನ್ನು ಮುದ್ರಿಸಿದರೆ ಏನಾಗುತ್ತದೆ?
ಯಾವುದೇ ಅರ್ಥವ್ಯವಸ್ಥೆಯಲ್ಲಿ ಹಣದ ಹರಿವು ಸಮರ್ಪಕವಾಗಿದೆ. ತೀರಾ ಹೆಚ್ಚಿರಬಾರದು, ತೀರಾ ಕಡಿಮೆ ಇರಬಾರದು. ಸರಕುಗಳ ಉತ್ಪಾದನೆಯ ಮೌಲ್ಯ ಅಥವಾ ಜಿಡಿಪಿಗೆ ಅನುಗುಣವಾಗಿ ಹಣದ ಸರಬರಾಜು ಇರುತ್ತದೆ. ಇದರಲ್ಲಿ ಏರುಪೇರಾದರೆ ಆಗ ಸರಕುಗಳ ಮೌಲ್ಯದಲ್ಲಿ ವೈಪರೀತ್ಯಗಳು ಕಾಣಿಸುತ್ತವೆ. ಹೆಚ್ಚು ಹಣವನ್ನು ಅರ್ಥವ್ಯವಸ್ಥೆಗೆ ತೂರಿಬಿಟ್ಟಾಗ ಸರಕುಗಳ ಬೆಲೆ ಹೆಚ್ಚಾಗುತ್ತದೆ. ಇದರಿಂದ ಹಣದುಬ್ಬರ ಅಧಿಕವಾಗಿರುತ್ತದೆ.
ಉದಾಹರಣೆಗೆ, ಒಂದು ದೇಶದಲ್ಲಿ 100 ತೆಂಗಿನಕಾಯಿ ಸರಕುಗಳ ಉತ್ಪಾದನೆ ಆಗುತ್ತಿದೆ ಎಂದಿಟ್ಟುಕೊಳ್ಳಿ. ಅದನ್ನು ಖರೀದಿಸಲು 100 ರೂಪಾಯಿ ಚಲಾವಣೆಯಲ್ಲಿರುತ್ತದೆ ಎಂದು ಭಾವಿಸೋಣ. ಒಂದು ಕಾಯಿಗೆ ಒಂದು ರೂ ಬೆಲೆ ಇರುತ್ತದೆ. ಈಗ ನೀವೇನಾದರೂ 200 ರೂ ಅನ್ನು ವ್ಯವಸ್ಥೆಗೆ ಸೇರಿಸಿದಾಗ ಒಂದು ಕಾಯಿಗೆ ಹೆಚ್ಚು ಹಣ ಕೊಡಲು ಸಿದ್ಧರಿರುತ್ತೀರಿ. ಆಗ ಕಾಯಿ ಬೆಲೆ.
ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್‌ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ
ವೆನಿಜುವೆಲಾ, ಜಿಂಬಾಬ್ವೆ ಮೊದಲಾದ ಅನೇಕ ದೇಶಗಳು ಇಂಥ ಪ್ರಯೋಗಕ್ಕೆ ಕೈಹಾಕಿ ಸುತ್ತಿಕೊಂಡಿವೆ. ಅಲ್ಲಿ ಒಂದು ರೊಟ್ಟಿ ಖರೀದಿಸಬೇಕೆಂದರೆ ಸಾವಿರಾರು ರೂಪಾಯಿ ಕೊಡಬೇಕು. ಅಷ್ಟರಮಟ್ಟಿಗೆ ಹಣದ ಮೌಲ್ಯ ಕಡಿಮೆಯಾಗಿದೆ.
ಆರ್ಥಿಕವಾಗಿ ಬೆಳೆದಾಗ ಹೆಚ್ಚಿನ ಹಣ ಬಿಡುಗಡೆ ಆಗಬೇಕು…
ಆರ್ಥಿಕತೆ ಬೆಳೆದಂತೆ ಚಲಾವಣೆಯ ಹಣವನ್ನೂ ಹೆಚ್ಚಿಸಬೇಕು. ಇಲ್ಲದಿದ್ದರೆ ಹಣ ಕುಸಿತ ಅಥವಾ ಡೀಫ್ಲೇಶನ್ ಸ್ಥಿತಿ ನಿರ್ಮಾಣವಾಗುತ್ತದೆ. ಉದಾಹರಣೆಗೆ, ಒಂದು ದೇಶದ ಜಿಡಿಪಿ ಹೆಚ್ಚು ಇರುತ್ತದೆ. ಅಂದರೆ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ. ಆರ್ಥಿಕತೆಗೆ ಒಂದಿಷ್ಟು ಹಣದುಬ್ಬರವೂ ಬೇಕು. ಬ್ಯೂಸಿನೆಸ್ ಅಥವಾ ಉದ್ದಿಮೆಗಳು ತಮ್ಮ ಉತ್ಪನ್ನವನ್ನು ಮಾರಿ ಲಾಭ ಗಳಿಸಬೇಕೆಂದರೆ ಹಣದುಬ್ಬರ ಅಥವಾ ಬೆಲೆ ಏರಿಕೆಯಾಗಬೇಕು. ಆದರೆ ಅದು ಮಿತಿಯಲ್ಲಿರಬೇಕು. ಹೀಗಾಗಿ, ಸರ್ಕಾರವು ಹಣದುಬ್ಬರಕ್ಕೆ ಟಾರ್ಗೆಟ್ ಫಿಕ್ಸ್ ಮಾಡುತ್ತದೆ. ಭಾರತ ಸರ್ಕಾರ ಸದ್ಯ ಶೇ. 4ರ ಹಣದುಬ್ಬರವನ್ನು ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ. ಅಷ್ಟಿದ್ದರೆ ಆರ್ಥಿಕತೆಯು ಸಮತೋಲನದಿಂದ ಸಾಗುತ್ತದೆ ಎಂಬುದು ಭಾವನೆ. ಇದನ್ನು ಇರುವ ಸಮಿತಿಗಳು ನಿರ್ಧರಿಸುತ್ತವೆ.
ಈಗ ಜಿಡಿಪಿ ಬೆಳೆದಾಗ ಅದರ ಜೊತೆಗೆ ಹಣದುಬ್ಬರವನ್ನೂ ಸೇರಿಸಿದಾಗ ಉತ್ಪನ್ನಗಳು ಮತ್ತು ಅದರ ಬೆಲೆ ಏರುತ್ತದೆ. ಅದಕ್ಕೆ ತಕ್ಕಂತೆ ಹಣವೂ ಚಲಾವಣೆಯಲ್ಲಿ ಇರಬೇಕು. ಆಗ ಸರ್ಕಾರವು ಹೊಸ ಹಣದ ಹರಿವನ್ನು ಸೇರಿಸಬೇಕು. ಅದೂ ಜಿಡಿಪಿ ಒಟ್ಟು, ಹಣದುಬ್ಬರ ಎಲ್ಲವನ್ನೂ ಲೆಕ್ಕಾಚಾರ ಮಾಡಿಯೇ ಹೆಚ್ಚುವರಿ ಹಣ ಬಿಡುಗಡೆ.
ಇದನ್ನೂ ಓದಿ: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು?
ಹಣ ಹೆಚ್ಚಿಸಬೇಕಾದರೆ ನೋಟು ಪ್ರಿಂಟ್ ಮಾಡಬೇಕೆಂದಿಲ್ಲ…
ಒಂದು ದೇಶದಲ್ಲಿರುವ ಹಣವೆಲ್ಲವೂ ಕರೆನ್ಸಿ ರೂಪದಲ್ಲೇ ಇರಬೇಕೆಂದಿಲ್ಲ. ರೂಪದಲ್ಲಿಯೂ ಇರುತ್ತದೆ. ಜನರ ಕ್ಯಾಶ್ ವಹಿವಾಟಿಗೆ ಅನುಕೂಲವಾಗುವಂತೆ ನೋಟುಗಳನ್ನು ಪ್ರಿಂಟ್ ಮಾಡಲಾಗಿದೆ. ಅರ್ಥ ವ್ಯವಸ್ಥೆಗೆ ಹೆಚ್ಚು ಹಣದ ಅಗತ್ಯ ಇದ್ದಾಗ ಸರ್ಕಾರ (ಆರ್ಬಿಐ) ಬೇರೆ ಬೇರೆ ವಿಧಾನಗಳಲ್ಲಿ ಹಣವನ್ನು ಹರಿಸುತ್ತದೆ. ಅದರಲ್ಲಿ ಒಂದು ಆರ್ಬಿಐನ ಓಪನ್ ಮಾರ್ಕೆಟ್ ಅಪರೇಷನ್ಸ್. ಈ ವಿಧಾನದಲ್ಲಿ ಸರ್ಕಾರಿ ಬಾಂಡ್‌ಗಳನ್ನು ಆರ್ಬಿಐ ಖರೀದಿಸುವ ಮೂಲಕ ಹಣವನ್ನು ಬಿಡುಗಡೆ ಮಾಡುತ್ತದೆ. ಇದು ಡಿಜಿಟಲ್ ಹಣವೇ ಆಗಿರುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ