Headlines

ಶಕ್ತಿ ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ನಗುತ್ತಾ ಕೊಟ್ಟ ಸಂದೇಶ

ಶಕ್ತಿ ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ನಗುತ್ತಾ ಕೊಟ್ಟ ಸಂದೇಶ


ಕಾರವಾರ, (ಡಿಸೆಂಬರ್ 19): ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕಾಳಗ ದಿನೇ ತಾರಕಕ್ಕೇರಿದೆ. ಸಿಎಂ ಸಿದ್ದರಾಮಯ್ಯ ಬಾಣ ತಂತ್ರ ಹೆಣೆಯುತ್ತಾದ್ರೆ, ಡಿಕೆ ಬಣ ಕೂಡ ಪ್ರತಿತಂತ್ರ ರೂಪಿಸಿದೆ. ನಾಯಕರು ಒಂದ್ಕಡೆ ಡಿನ್ನರ್ ಮೀಟಿಂಗ್ ಮಾಡಿದ್ರೆ, ಮತ್ತೊಂದ್ಕಡೆ ಟೆಂಪಲ್ ರನ್ ಮಾಡ್ತಿದ್ದಾರೆ.. ಡಿಸಿಎಂ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಇವತ್ತು ಉತ್ತರ ಕನ್ನಡ ಜಿಲ್ಲೆ ಶಕ್ತಿಕೇಂದ್ರಗಳಿಗೆ ಭೇಟಿ ನೀಡಿದ್ರು. ಅಂಕೋಲಾ ತಾಲೂಕಿನ ಶಕ್ತಿ ಆಂಡ್ಲೆಯಲ್ಲಿರೋ ಕರಾವಳಿದೇವಿ ಜಗದೀಶ್ವರಿ ಸನ್ನಿಧದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಾನು ಯಾವತ್ತೂ ಅವರಿಗೆ 5 ವರ್ಷ ಇರಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರವಾಗಿಲ್ಲವೆಂದು ಕೂಡ ನಾನು ಹೇಳಿಲ್ಲ. ಅವರ ಪರವಾಗಿ ಹೈಕಮಾಂಡ್ ಇರುವುದಕ್ಕೆ ಸಿಎಂ ಆಗಿರೋದು. ನಾನು ಅವರು ಇಬ್ಬರು ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಹೈಕಮಾಂಡ್ ಕೂಡ ಒಂದು ಒಪ್ಪಂದಕ್ಕೆ ತಂದಿದೆ ಎಂದು ಸ್ಫೋಟಕ ಹೇಳಿಕೆ ತಿಳಿಸಿದೆ. ಡಿಕೆಶಿ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಹಾಗಾದ್ರೆ, ಹೈಕಮಾಂಡ್ ತಂದಿರುವ ಒಪ್ಪಂದ ಏನು ಎನ್ನುವುದೇ ನಿಗೂಢವಾಗಿದೆ, ಕಾಂಗ್ರೆಸ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ.



Source link

Leave a Reply

Your email address will not be published. Required fields are marked *