ಹಾಸನ, (ಡಿಸೆಂಬರ್ 19): ಮಕ್ಕಳು ಓದಲು ಶಾಲೆಗೆ ಹೋಗುತ್ತಾರೆ. ಇನ್ನು ಮುಂದೆ ಸಹ ನಾಲ್ಕು ರೂಪಾಯಿ ಫೀ ಕಟ್ಟಿ ತಮ್ಮ ಮಕ್ಕಳು ಅಕ್ಷರ ಕಲಿತು ವಿದ್ಯಾವಂತರಾಗಲಿ ಎಂದು ಶಾಲೆಗೆ ಕಳುಹಿಸುತ್ತಾರೆ. ಆದರೆ, ಶಿಕ್ಷಕರೇ ಮಕ್ಕಳ ಕಟ್ಟಡ ಕಾರ್ಮಿಕರನ್ನು ದುಡಿಸಿಕೊಂಡಿರುವ ಪ್ರಕರಣವೊಂದು ಹಾಸನ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಹೌದು…ಶಿಕ್ಷಕರು ಮುಂದೆ ನಿಂತು ಮಕ್ಕಳಿಂದ ಶಾಲೆ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸ್ವರ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ರೆಡಿಯಾಗಿ ಶಾಲೆಗೆ ಬಂದ ಮಕ್ಕಳಿಂದ ಗಾರೆ ಕೆಲಸ ಮಾಡಲಾಗಿದೆ. ವಿದ್ಯಾರ್ಥಿಗಳ ಸಿಮೆಂಟ್ ಮತ್ತು ಇಟ್ಟಿಗೆ ಹೊತ್ತೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ.
ಇನ್ನು ಪುಟ್ಟ ಮಕ್ಕಳಿಂದ ಸಿಮೆಂಟ್ ಇಟ್ಟಿಗೆ ಸಾಗಿಸುವ ವಿಡಿಯೋ ನೋಡಿ ಸ್ಥಳೀಯರು ಆಕ್ರೋಶಗೊಂಡಿದ್ದು, ಮಕ್ಕಳಿಗೆ ಶಾಲೆಗೆ ಕಳುಹಿಸಿದ್ದು ವಿದ್ಯಾವಂತರಾಗಲೆಂದು. ನಾವೇ ಮಕ್ಕಳಿಗೆ ಈ ರೀತಿಯ ಕೆಲಸ ಮಾಡಬೇಡಿ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ಫೀ ಕಟ್ಟಿಸಿಕೊಂಡು ವಿದ್ಯಾ ಕಲಿಸುವ ಬದಲು ಗಾರೆ ಕೆಲಸ ಮಾಡುತ್ತಿರುವುದು ಎಷ್ಟು ಸರಿ?.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ