ದೇವನಹಳ್ಳಿ, ಡಿಸೆಂಬರ್ 19: ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತು ಒಂದಿದೆ. ಈ ಗಾದೆ ಮಾತು ಇದೀಗ ನಗರದ ಹೊರವಲಯದ ಗ್ರಾಮಸ್ಥರಿಗೆ ಅನ್ವಯವಾಗುತ್ತಿದೆ. ನೋಡುವ ಕನಸು ನನಸಾಯಿತು ಅಂತ ಖುಷಿ ಪಡುವಷ್ಟರಲ್ಲೇ ಹೆಚ್ಚುವರಿ ಇಲಾಖೆ ಅಧಿಕಾರಿಗಳು (ಕಂದಾಯ ಇಲಾಖೆ ಅಧಿಕಾರಿಗಳು) ಮಾಡಿರುವ ಅದೊಂದು ಎಡವಟ್ಟಿನಿಂದ ಇದೀಗ ಗ್ರಾಮಸ್ಥರು ಪರದಾಡುವ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲ್ಲು ಕ್ವಾರಿಯಲ್ಲಿ ಜಮೀನು ಮಂಜೂರು
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮಾರಗೊಂಡನಹಳ್ಳಿ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಸರ್ಕಾರದಿಂದ ನಿವೇಶನ ಪಡೆಯಲು ಕಾದು ಕುಳಿತಿದ್ದರು. ಜೊತೆಗೆ ಜನರ ಮನವಿಗೆ ಪ್ರತಿಕ್ರಿಯಿಸಿದ ಸ್ಥಳದ ಶಾಸಕರು ಹಾಗೂ ಸಚಿವ ಕೆಹೆಚ್ ಮುನಿಯಪ್ಪ ಪಂಚಾಯತಿಗಳಲ್ಲಿ ಭೂಮಿ ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ನೀಡಲಾಗಿದೆ. ಅದರಂತೆ ನಿವೇಶನಗಳಿಗೆ ಸೂಕ್ತವಾದ ಜಾಗ ನೀಡಬೇಕಾದ ಅಧಿಕಾರಿಗಳು ಇದೀಗ ಪಕ್ಕದಲ್ಲೇ ಸಮತಟ್ಟಾದ ಭೂಮಿ ಇಬ್ಬರು ಕಲ್ಲು ಕ್ವಾರಿಯ ಜಮೀನು ಮಂಜೂರು ಮಾಡಿದ್ದಾರೆ.
ಇದನ್ನೂ ಓದಿ: ಅಕ್ರಮ ಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಶಾಕ್ ಕೊಟ್ಟ ಸರ್ಕಾರ: 3 ತಿಂಗಳಿನಲ್ಲಿ ರದ್ದಾದ ಪಡಿತರ ಚೀಟಿಗಳೆಷ್ಟು?
ಹೀಗಿರುವಾಗ ಕಲ್ಲು ಕ್ವಾರಿಯ ಜಮೀನಿನಲ್ಲಿ ಯಾವ ರೀತಿ ಮನೆ ಕಟ್ಟಲು ಆಗುತ್ತೆ ಅಂತ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದು, ಕಲ್ಲು ಕ್ವಾರಿ ಜಮೀನು ಮಂಜೂರು ಮಾಡಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರಿಗೆ ಅನುಕೂಲವಾಗುವಂತೆ ಈ ರೀತಿ ಉತ್ತಮ ಜಾಗ ಬಿಟ್ಟು ಕಲ್ಲುಗಳಿರುವ ಜಾಗವಿದೆ ಎಂದು ಪಿಡಿಒ ಸೇರಿದಂತೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರಾದ ಗೋವಿಂದರಾಜು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆಶ್ರಯ ಯೋಜನೆಯಲ್ಲಿ ಬಡ ಜನರಿಗೆ ನಿವೇಶನ ನೀಡಲು ಕಲ್ಲು ಕ್ವಾರಿ ಜಾಗ ಗುರುತಿಸಿರುವುದು ಯಾವ ಸ್ಥಳದಲ್ಲಿದೆ ಅಂತ ಇಓ ಮತ್ತು ತಹದಾರ್‌ಗೆ ಗ್ರಾಮಸ್ಥರು ದೂರು ನೀಡಿದ್ದು, ಕಲ್ಲು ಬಂಡೆ ಜಮೀನು ಹಿಂಪಡೆಯಲು ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.
ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಹೇಳಿದ್ದಾರೆ
ಇನ್ನು ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಮಾತನಾಡಿದ್ದು, ಹೆಚ್ಚುವರಿ ಇಲಾಖೆ ನಮ್ಮ ಆಶ್ರಯ ಯೋಜನೆಗೆ ಜಮೀನು ಮಂಜೂರು ಮಾಡಿದ್ದು, ನಾವು ಆ ಜಮೀನು ಕೊಡುವಂತೆ ಕೇಳಿಲ್ಲ. ಈಗ ಅದು ನಿವೇಶನಗಳಿಗೆ ಯೋಗ್ಯವಾಗದ ಕಾರಣ ಆ ಜಮೀನನ್ನು ವಾಪಸ್ ಪಡೆಯುವಂತೆ ಡಿಸಿ ಅವರಿಗೆ ಪತ್ರ ಬರೆದಿದ್ದು, ಬದಲಿಯಾಗಿ ಯೋಗ್ಯವಾದ ಜಮೀನುಗಳಿಗೆ ನೀಡುವಂತೆ ಕೇಳಿದ್ದೇವೆ.
ಇದನ್ನೂ ಓದಿ: ಮುಡಾ ಕೇಸ್ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ಪ್ರತಿವಾದ ಹೇಗಿತ್ತು?
ಒಟ್ಟಿನಲ್ಲಿ ಏರ್ಪೋಟ್ ಬಳಿ ಭೂಮಿ ಬೆಲೆ ಗಗನಕ್ಕೇರಿದಾಗ ಒಂದಿಚ್ಚು ಭೂಮಿ ಬಂಗಾರದ ಬೆಲೆಬಾಳುತ್ತಿದೆ. ಈ ನಡುವೆ ಸರ್ಕಾರದಿಂದ ನಿವೇಶನ ಪಡೆಯುವ ನಿರೀಕ್ಷೆ ಅಧಿಕಾರಿಗಳಿಗೆ ಎಡವಟ್ಟಿನಿಂದ ಆತಂಕವಾಗಿದೆ. ಸದ್ಯ ಮಧ್ಯ ಪ್ರವೇಶಿಸಿ ಆಶ್ರಯಕ್ಕೆ ಸೂಕ್ತ ಭೂಮಿ ನೀಡುವ ಕೆಲಸ ಮಾಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.