‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವಿರುದ್ಧ ನ್ಯಾಯಾಲಯ ಆದೇಶ ನೀಡಿದೆ. ತಂದೆ ಬಾಲಕೃಷ್ಣ ನಾಯ್ಕ್ ಅವರು ಚೈತ್ರಾ ಮೇಲೆ ಕೇಸ್ ಹಾಕಿದ್ದರು. ಕೋರ್ಟ್ ಆದೇಶದ ಬಳಿಕ ಬಾಲಕೃಷ್ಣ ನಾಯ್ಕ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚೈತ್ರಾ (ಚೈತ್ರ ಕುಂದಾಪುರ) ಅವರ ಇತಿಹಾಸವನ್ನು ಅವರು ತೆರೆದಿಟ್ಟಿದ್ದಾರೆ. ‘ನನಗೆ ನ್ಯಾಯಾಲಯದ ರಕ್ಷಣೆ ಸಿಕ್ಕಿದ್ದು ತುಂಬ ಅನುಕೂಲವಾಗಿದೆ. ಇನ್ಮುಂದೆ ನನಗೆ ಮಕ್ಕಳಿಂದ, ಹೆಂಡತಿಯಿಂದ ತೊಂದರೆ ಆಗಬಾರದು. ವಿದ್ಯಾಭ್ಯಾಸ ಮಾಡುವಾಗಲೇ ಚೈತ್ರಾ ಪೋಕರಿ ಕೆಲಸ ಮಾಡುತ್ತಿದ್ದಳು. ಪ್ರಥಮ ವರ್ಷ ಪಿಯುಸಿ ಓದುವಾಗಲೇ ಡಿಬಾರ್ ಆಗಿದ್ದಳು. ನನ್ನ ಬುದ್ಧಿವಾದ ಕೇಳು’ ಎಂದು ಬಾಲಕೃಷ್ಣ ನಾಯ್ಕ್ (ಬಾಲಕೃಷ್ಣ ನಾಯ್ಕ್) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.