ಬಿಗ್ ಬಾಸ್ ಕ್ಯಾಪ್ಟನ್ ಆದ ಕಾವ್ಯಾ; ಗಿಲ್ಲಿ ಬಿಟ್ಟು ಆಡಲು ಇದು ಅಗ್ನಿ ಪರೀಕ್ಷೆ

ಬಿಗ್ ಬಾಸ್ ಕ್ಯಾಪ್ಟನ್ ಆದ ಕಾವ್ಯಾ; ಗಿಲ್ಲಿ ಬಿಟ್ಟು ಆಡಲು ಇದು ಅಗ್ನಿ ಪರೀಕ್ಷೆ


‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯ ಆಗಲಿದೆ. ಈ ಸೀಸನ್ ಆರಂಭವಾಗಿ ಗಿಲ್ಲಿ ನಟ (ಗಿಲ್ಲಿ ನಟ) ಮತ್ತು ಕಾವ್ಯ ಶೈವ ಅವರು ಜೊತೆಯಾಗಿಯೇ ಇದ್ದಾರೆ. ಅವರಿಬ್ಬರ ನಡುವೆ ಜಗಳ ಬಂದಿದ್ದು ಕಡಿಮೆ. ಇದೇ ಕಾರಣಕ್ಕೆ ಅವರಿಬ್ಬರನ್ನು ಟೀಕೆ ಮಾಡಿದ್ದು ಕೂಡ ಇದೆ. ಕಾವ್ಯಾ ಅವರು ಯಾವಾಗಲೂ ಗಿಲ್ಲಿಯ ನೆರಳಲ್ಲಿ ಇರುತ್ತಾರೆ ಎಂಬುದು ಅನೇಕರ ಅಭಿಪ್ರಾಯ. ಆದರೆ ಈ ವಾರ ಕಾವ್ಯ ಶೈವ (ಕಾವ್ಯ ಶೈವ) ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅವರು ಗಿಲ್ಲಿಯ ನೆರಳಲ್ಲೇ ಇರುತ್ತಾರಾ ಅಥವಾ ಸಂಪೂರ್ಣ ಸ್ವತಂತ್ರವಾಗಿ ಆಟ ಆಡುತ್ತಾರಾ ಎಂಬ ಅಗ್ನಿಪರೀಕ್ಷೆ ಎದುರಾಗಲಿದೆ.

ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ಆಟಕ್ಕೆ ಅಂತಿಮವಾಗಿ ಸೂರಜ್ ಸಿಂಗ್ ಮತ್ತು ಕಾವ್ಯ ಶೈವ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿಗ್ ಬಾಸ್ ಮನೆಯ ಸದಸ್ಯರ ಮತದಾನದ ಆಧಾರದ ಮೇಲೆ ಕ್ಯಾಪ್ಟನ್ ಯಾರು ಎಂದು ಆಯ್ಕೆಮಾಡಲಾಗಿದೆ. ಸೂರಜ್ ಸಿಂಗ್ ಪರವಾಗಿ ಅಶ್ವಿನಿ ಗೌಡ ಮತ್ತು ರಾಶಿಕಾ ಶೆಟ್ಟಿ ಅವರು ಮಾತ್ರ ವೋಟ್ ಮಾಡಿದರು.

ಕಾವ್ಯ ಶೈವ ಪರವಾಗಿ ಗಿಲ್ಲಿ ನಟ, ರಜತ್, ಮಾಳು ನಿಪನಾಳ, ಮ್ಯೂಟೆಂಟ್ ರಘು, ಸ್ಪಂದನಾ, ಚೈತ್ರಾ ಕುಂದಾಪುರ, ಧನುಶ್ ಅವರು ವೋಟ್ ಮಾಡಿದ್ದಾರೆ. ಈ ವಾರ ಕಾವ್ಯ ಅವರ ಆಟ ಆಡಿದ ರೀತಿಗೆ ಇಷ್ಟವಾಗುತ್ತದೆ. ಅವರಿಗೆ ಕ್ಯಾಪ್ಟನ್ಸಿ ಹೇಗಿರುತ್ತೆ ಎಂಬುದನ್ನು ನೋಡಬೇಕಾಗಿದೆ. ಅವರಿಗೆ ಕ್ಯಾಪ್ಟನ್ ಆಗುವ ಅವಕಾಶವನ್ನು ನೀಡಲಾಯಿತು.

ಕ್ಯಾಪ್ಟನ್ ಆದಾಗ ಹೆಚ್ಚು ಜವಾಬ್ದಾರಿ ಇರುತ್ತದೆ. ಕಾವ್ಯ ಅವರು ತಮ್ಮ ಸ್ವಂತಿಕೆಯನ್ನು ತೋರಿಸಲು ಇದು ಉತ್ತಮ ಅವಕಾಶವಾಗಿದೆ. ಈಗ ಅವರು ಗಿಲ್ಲಿಯ ಹಂಗು ಇಲ್ಲದೇ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾಗಿದೆ. ಅವರ ಮೇಲೆ ನಂಬಿಕೆ ಇಟ್ಟುಕೊಂಡು ವೋಟ್ ಮಾಡಿದ್ದಾರೆ. ಒಂದು ವೇಳೆ ಅವರು ಈ ನಂತರವೂ ಗಿಲ್ಲಿಯ ಜೊತೆಯೇ ಹೆಚ್ಚು ಕಾಲ ಕಳೆದರೆ ಸಿಕ್ಕ ಅವಕಾಶ ಕೈಚೆಲ್ಲಿದಂತೆ ಆಗುತ್ತದೆ. ಗಿಲ್ಲಿಯನ್ನು ಸಂಪೂರ್ಣ ಬಿಟ್ಟರೆ ಬಣ್ಣ ಬದಲಿಸಿದಂತೆ ಆಗುತ್ತದೆ. ಇದು ಕಾವ್ಯ ಪಾಲಿಗೆ ಅಗ್ನಿಪರೀಕ್ಷೆಯಂತಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು ಗೊತ್ತಾ?

ಇನ್ನು, ಈ ವಾರದ ಕಳಪೆ ಪಟ್ಟ ಚೈತ್ರಾ ಕುಂದಾಪುರ ಅವರಿಗೆ ನೀಡಲಾಗುತ್ತದೆ. ಟಾಸ್ಕ್ ವೇಳೆ ಚೈತ್ರಾ ಕುಂದಾಪುರ ಅವರು ಅತಿರೇಕದಿಂದ ವರ್ತಿಸಿದ್ದಾರೆ 9 ಜನ ಸದಸ್ಯರಿಗೆ ಸರಿಯಾಗಿಲ್ಲ. ಆರಂಭದಲ್ಲಿ ಟಾಸ್ಕ್ ಆಡಿ ಕ್ಯಾಪ್ಟನ್ ಆಗಿದ್ದ ಚೈತ್ರಾ ಅವರು ಈ ವಾರ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಮನೆಯವರ ಆಯ್ಕೆಯ ಪ್ರಕಾರ ಕಾವ್ಯ ಶೈವ ಅವರು ಉತ್ತಮ ಪಟ್ಟ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *