Headlines

‘ಡೆವಿಲ್’ ಸಿನಿಮಾ ಕಲೆಕ್ಷನ್ ಮತ್ತಷ್ಟು ಕುಸಿತ; ಬಚಾವ್ ಆಗಲು ಇದೆ ಒಂದು ಆಯ್ಕೆ

‘ಡೆವಿಲ್’ ಸಿನಿಮಾ ಕಲೆಕ್ಷನ್ ಮತ್ತಷ್ಟು ಕುಸಿತ; ಬಚಾವ್ ಆಗಲು ಇದೆ ಒಂದು ಆಯ್ಕೆ


‘ಡೆವಿಲ್’ ಸಿನಿಮಾ (ದೆವ್ವದ ಚಲನಚಿತ್ರ) ಕಲೆಕ್ಷನ್ ದಿನ ಕಳೆದಂತೆ ಕುಸಿತ ಕಾಣುತ್ತಿದೆ. ಸಿನಿಮಾಗೆ ಮೊದಲ ವಾರ ಕೊಡಲಾದ ಶೋಗಳ ಸಂಖ್ಯೆ ಎರಡನೇ ವಾರಕ್ಕೆ ಇಳಿಕೆಯಾಗಿದೆ . ಇದು ಚಿತ್ರದ ಕಲೆಕ್ಷನ್ ಕುಗ್ಗಲು ಪ್ರಮುಖ ಕಾರಣ. ಅಂದುಕೊಂಡ ರೀತಿಯಲ್ಲಿ ಸಿನಿಮಾ ಸಾಗುತ್ತಿಲ್ಲ. ಇದರ ಜೊತೆಗೆ ಪೈರಸಿ ಕಾಟ. ಇದು ತಂಡದ ಚಿಂತೆಗೆ ಕಾರಣವಾಗಿದೆ. ನಷ್ಟದಿಂದ ತಪ್ಪಿಸಿಕೊಳ್ಳಲು ನಿರ್ಮಾಪಕರ ಬಳಿ ಒಂದು ಆಯ್ಕೆ ಇದೆ. ಈ ಆಯ್ಕೆಯನ್ನು ಪ್ರಯೋಗಿಸಿದರೆ ಕೊಂಚ ಲಾಭ ಕಾಣುತ್ತದೆ.

‘ಡೆವಿಲ್’ ಸಿನಿಮಾದ ಗಳಿಕೆ 25 ಕೋಟಿ ರೂಪಾಯಿ ಆಸುಪಾಸಿನಲ್ಲೇ ಸುತ್ತುತ್ತಿದೆ. ಇಂದು ಸಿನಿಮಾದ ಗಳಿಗೆ 26 ಕೋಟಿ ರೂಪಾಯಿ ದಾಟಬಹುದು ಎಂದು ಲೆಕ್ಕ ಹಾಕಲಾಗಿದೆ. ವಾರದ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಲಕ್ಷಗಳಲ್ಲಿ ಆಗುತ್ತಿದೆ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡುತ್ತಿದೆ. ‘ಡೆವಿಲ್’ ಚಿತ್ರದ ಒಟ್ಟಾರೆ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿ ಎಂಬುದು ಅಭಿಮಾನಿಗಳ ಬಯಕೆ.

ಡಿಸೆಂಬರ್ 19ರಂದು ‘ಡೆವಿಲ್’ ಸಿನಿಮಾ 47 ಲಕ್ಷ ಕಲೆಕ್ಷನ್ ಮಾಡಿದೆ. ಡಿಸೆಂಬರ್ 18 ರಂದು 55-60 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಇತ್ತು. ಸಿನಿಮಾದ ಒಟ್ಟು ಕಲೆಕ್ಷನ್ 25.58 ಕೋಟಿ ರೂಪಾಯಿ. ಇಂದು (ಡಿಸೆಂಬರ್ 20) ಹಾಗೂ ನಾಳೆ (ಡಿಸೆಂಬರ್ 21) ಸಿನಿಮಾ ಎಷ್ಟು ಗಳಿಕೆ ಮಾಡಿದರೆ ಅದು ತುಂಬಾ ಮುಖ್ಯವಾಗುತ್ತದೆ.

ಇದನ್ನೂ ಓದಿ: ಅದೇ ಖದರ್, ಅದೇ ಹೈಟ್, ಅದೇ ಲುಕ್; ದರ್ಶನ್ ರೀತಿಯೇ ಕಾಣ್ತಾರೆ ವಿನೀಶ್

ಮುಂದಿನ ವಾರ ಸುದೀಪ್ ನಟನೆಯ ‘ಮಾರ್ಕ್’ ಹಾಗೂ ಮಲ್ಟಿ ಸ್ಟಾರರ್ ಸಿನಿಮಾ ’45’ ರಿಲೀಸ್ ಆಗುತ್ತಿದೆ. ಈ ವೇಳೆ ‘ಡೆವಿಲ್’ ಸಿಗೋ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಕಡಿಮೆ ಆಗಬಹುದು. ಹೀಗಾಗಿ, ಚಿತ್ರತಂಡದವರು ಒಟಿಟಿ ಸಂಸ್ಥೆ ಜೊತೆ ಮಾತನಾಡಿ ಸಿನಿಮಾನ ಮೊದಲೇ ಒಟಿಟಗೆ ತರಬಹುದು. ಆಗ ಒಟಿಟಿ ಕಡೆಯಿಂದ ಹೆಚ್ಚಿನ ಹಣ ನಿರ್ಮಾಪಕರಿಗೆ ಸಿಗೋ ಸಾಧ್ಯತೆ ಇರುತ್ತದೆ. ಅನೇಕ ಸಿನಿಮಾಗಳು ಇದೇ ರೀತಿ ಮಾಡಿ ನಷ್ಟದಿಂದ ಬಚಾವ್ ಆದ ಉದಾಹರಣೆ ಇದೆ. ‘ಡೆವಿಲ್’ ಕೂಡ ಇದೆ ಹಾದಿ ಹಿಡಿಯುತ್ತದೆಯೇ ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *