ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ನಿಧಿ ಸರ್‌ಪ್ರೈಸ್ ಕೊಟ್ರೆ, ಕರ್ಣನಿಗಾಗಿ ನಿತ್ಯಾ ಹುಡುಕಾಟ!

ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ನಿಧಿ ಸರ್‌ಪ್ರೈಸ್ ಕೊಟ್ರೆ, ಕರ್ಣನಿಗಾಗಿ ನಿತ್ಯಾ ಹುಡುಕಾಟ!

ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ನಿಧಿ ಸರ್‌ಪ್ರೈಸ್ ಕೊಟ್ರೆ, ಕರ್ಣನಿಗಾಗಿ ನಿತ್ಯಾ ಹುಡುಕಾಟ!

Karna serial latest update: ತೇಜಸ್‌-ನಿತ್ಯಾ ಭೇಟಿಯಾಗ್ತಾರೆ ಎನ್ನುವುದಷ್ಟೇ ತೋರಿಸಿರುವ ನಿರ್ದೇಶಕರು ಮುಂದೇನಾಗುತ್ತೆ ಎಂದು ತೋರಿಸಿಲ್ಲ. ಏತನ್ಮಧ್ಯೆ ನಿಧಿ ಕರ್ಣನನ್ನ ಸರ್‌ಪ್ರೈಸ್‌ ಆಗಿ ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟಿದ್ದಾಳೆ.

’ಕರ್ಣ’ ಧಾರಾವಾಹಿಯಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡ್ತಾ ಇದ್ದಾರೆ ನಿರ್ದೇಶಕರು. ತೇಜಸ್‌- ನಿತ್ಯಾ ಒಂದಾದ ಮೇಲೆ ಮುಂದೇನು ಕಾದಿದೆಯೋ ಎನ್ನುವಷ್ಟರಲೇ ಕರ್ಣ-ನಿಧಿ ಜಾಲಿ ರೈಡ್ ಹೊರಟಿದ್ದಾರೆ. ಇದನ್ನು ನೋಡಿದ ಕರ್ಣ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ.

ಹೌದು. ತೇಜಸ್‌-ನಿತ್ಯಾ ಭೇಟಿಯಾಗ್ತಾರೆ ಎನ್ನುವುದಷ್ಟೇ ತೋರಿಸಿರುವ ನಿರ್ದೇಶಕರು ಮುಂದೇನಾಗುತ್ತೆ ಎಂದು ತೋರಿಸಿಲ್ಲ. ಏತನ್ಮಧ್ಯೆ ನಿಧಿ ಕರ್ಣನನ್ನ ಸರ್‌ಪ್ರೈಸ್‌ ಆಗಿ ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟಿದ್ದಾಳೆ.

ನಿಧಿ-ಕರ್ಣ ಸುತ್ತಾಡಲು ಅವಕಾಶ ಮಾಡಿಕೊಟ್ಟಿರುವುದೇ ಕರ್ಣನ ಅಮ್ಮ. ಕರ್ಣನನ್ನು ಯಾರಿಗೂ ಗೊತ್ತಾಗದ ಹಾಗೆ ಕರೆದುಕೊಂಡು ಹೊರಟಿದ್ದಾಳೆ ನಿಧಿ. ಸ್ವತಃ ಕರ್ಣನಿಗೂ ಈ ವಿಷಯ ಗೊತ್ತಿಲ್ಲ. ನಿಧಿ ಹೆಲ್ಮೆಟ್ ತೆಗೆದ ನಂತರವೇ ಅದು ನಿಧಿ ಎಂದು ಗೊತ್ತಾಗುವುದು.

ಇತ್ತ ಕಡೆ ನಿಧಿ ಹೀಗೆ ಕರ್ಣನನ್ನು ಕೂರಿಸಿಕೊಂಡು ಹೊರಟರೆ, ಮನೆಯಲ್ಲಿ ನಿತ್ಯಾ ಕರ್ಣನನ್ನು ಹುಡುಕುತ್ತಾ ಇದ್ದಾಳೆ. ಬಹುಶಃ ಅಕ್ಕನಿಗೆ ಭಾವ ಸಿಕ್ಕ ಖುಷಿಗೆ, ಇನ್ಮೇಲೆ ಎಲ್ಲಾ ಸರಿ ಹೋಗುತ್ತೆ ಎನ್ನುವ ಭರವಸೆಯಲ್ಲಿ ಹೀಗೆ ನಿಧಿ-ಕರ್ಣ ಖುಷಿ ಖುಷಿಯಾಗಿ ಆಚೆ ಹೋಗುವುದನ್ನು ತೋರಿಸಲಾಗಿದೆಯೇ ಗೊತ್ತಿಲ್ಲ.

ಒಟ್ಟಿನಲ್ಲಿ ವೀಕ್ಷಕರು ಮುಂದೇನಾಗುತ್ತದೆ ಎಂಬ ಕುತೂಹದಿಂದ ಕಾಯುವಂತೆ ನೋಡಿಕೊಳ್ಳುತ್ತಿದ್ದಾರೆ ನಿರ್ದೇಶಕರು. ಅಷ್ಟೇ ಅಲ್ಲ, ಸ್ವಲ್ಪ ಮಟ್ಟಿಗೆ ಕರ್ಣನ ಅಭಿಮಾನಿಗಳು ನಿರಾಳವಾಗಿರುವಂತೆ ನೋಡಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕರ್ಣನನ್ನು ಬರೀ ಸಂಕಷ್ಟಕ್ಕೆ ಸಿಲುಕಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಇಲ್ಲವೇ ನಿತ್ಯಾ, ನಿಧಿ ಅಜ್ಜಿ ಗೋಳಾಡುವುದನ್ನ ತೋರಿಸಲಾಗುತ್ತಿತ್ತು ಆದರೀಗ ಸಂಜಯ್, ರಮೇಶ್ ಏನೇ ಮಾಡಿದರೂ ಪ್ಲಾನ್ ಉಲ್ಟಾ ಹೊಡೆಯುತ್ತಿರುವುದು ವೀಕ್ಷಕರಿಗಂತೂ ಭಾರೀ ಖುಷಿ ತಂದಿರುವುದು ಸೋಶಿಯಲ್ ಮೀಡಿಯಾ ಕಾಮೆಂಟ್‌ನಲ್ಲಿ ಕಾಣಬಹುದು.

Source link

Leave a Reply

Your email address will not be published. Required fields are marked *