Things to Do With Partner: ನಿಮ್ಮ ವಯಸ್ಸು 50 ಆಗುವುದಕ್ಕೂ ಮುನ್ನ ನೀವು ನಿಮ್ಮ ಸಂಗಾತಿ ಜೊತೆ ಈ ತಾಣಗಳಿಗೆಲ್ಲಾ ಟ್ರಾವೆಲ್ ಮಾಡಬೇಕು. ಇದು ನಿಮ್ಮ ಸಂಬಂಧವನ್ನು ಗಟ್ಟಿ ಮಾಡುತ್ತದೆ, ಜೊತೆಗೆ ಜೀವನದ ಸುಂದರ ಅನುಭವವನ್ನು ನಿಮಗೆ ನೀಡುತ್ತೆ.

ಹೊಸ ಹೊಸ ವರ್ಷ ಬರುತ್ತಿದ್ದಂತೆ ನಿಮ್ಮ ವಯಸ್ಸು ಕೂಡ ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ ನಿಮಗೆ ವಯಸ್ಸು 50 ಆಗುವ ಮೊದಲು ನೀವು ನಿಮ್ಮ ಸಂಗಾತಿ ಜೊತೆ ಈ ಎಲ್ಲಾ ತಾಣಗಳಿಗೆ ಭೇಟಿ ನೀಡಿ. ಇದು ನಿಮ್ಮ ನಡುವಿನ ಪ್ರೀತಿಯನ್ನು ಹೆಚ್ಚಿಸುವುದರ ಜೊತೆಗೆ ಜೀವನದ ಅನುಭವವನ್ನು ಸಹ ನೀಡುತ್ತದೆ.

ಕಾರ್ ತೆಗೆದುಕೊಂಡು, ಸಂಗಾತಿ ಜೊತೆ ಯಾವುದೋ ಗೊತ್ತಿಲ್ಲದ ಊರಿಗೆ ಟ್ರಾವೆಲ್ ಮಾಡಿ. ಗೂಗಲ್ ಮ್ಯಾಪ್ ಇಲ್ಲದೇ ಒಂದು ರೋಡ್ ಟ್ರಿಪ್ ಮಾಡಿ. ತುಂಬಾನೆ ಮಜವಾಗಿರುತ್ತೆ.

ಲಡಾಕ್ ನಲ್ಲಿರುವ ಹನ್ಲೆಯಲ್ಲಿ ನಕ್ಷತ್ರಗಳನ್ನು ನೋಡುತ್ತಾ ಸಮಯ ಕಳೆಯಿರಿ. ಇದು ನಿಮಗೆ ಜೀವನದ ಅತ್ಯಂತ ಅದ್ಭುತ ಕ್ಷಣಗಳನ್ನು ನೀಡುತ್ತೆ.

ಕೇದಾರನಾಥಕ್ಕೆ ಟ್ರೆಕ್ ಮಾಡೋದು ಸುಲಭದ ವಿಷಯ ಅಲ್ವೇ ಅಲ್ಲ, ಆದರೆ ಸಂಗಾತಿ ಜೊತೆ ಶಿವನ ಮೇಲಿನ ಭಕ್ತಿಯಿಂದ ಕೇದಾರನಾಥಕ್ಕೆ ಟ್ರೆಕ್ ಮಾಡಿ, ದರ್ಶನ ಪಡೆದರೆ, ಅದಕ್ಕಿಂತ ಅದ್ಭುತ ಅನುಭವ ಬೇರೊಂದಿಲ್ಲ.

ಲಡಾಕ್ ನ ಸುಂದರ ರಸ್ತೆಯಲ್ಲಿ ಸಂಗಾತಿ ಜೊತೆ ಬೈಕ್ ರೈಡ್ ಮಾಡೋದಕ್ಕಿಂತ ಬೆಸ್ಟ್ ವಿಷ್ಯ ಏನಿದೆ ಹೇಳಿ. ಆ ತಂಪಾದ ವಾತಾವರಣ, ಸುಂದರವಾದ ಲ್ಯಾಂಡ್ ಸ್ಕೇಪ್, ಚಳಿ ಎಲ್ಲವೂ ಸೇರಿ ಜರ್ನಿಯನ್ನು ಅದ್ಭುತವಾಗಿಸುತ್ತದೆ.

ಜೈಸಲ್ಮೇರ್ ಸುಂದರವಾದ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನೀವು ನಕ್ಷತ್ರಗಳು ತುಂಬಿದ ಆಕಾಶದ ಕೆಳಗೆ ಕ್ಯಾಂಪಿಂಗ್ ಮಾಡಬಹುದು. ಇದರ ಅನುಭವವೇ ಸುಂದರವಾಗಿರುತ್ತೆ. ಮರಳುಗಾಡಿನಲ್ಲಿ ಕ್ಯಾಂಪಿಂಗ್ ಮಾಡೋದೆ ಚೆಂದ.

ನಿಮ್ಮ ಸಂಗಾತಿ ಜೊತೆ ಪ್ರಣಯ ನಗರಿ ಪ್ಯಾರಿಸ್ ಗೆ ತೆರಳಿ ಐಫೆಲ್ ಟವ್ರ್ ನೋಡದೇ ಇದ್ದರೆ ಹೇಗೆ, ಅಲ್ಲಿನ ಲೈಟಿಂಗ್ಸ್, ಫೈರ್ ವರ್ಕ್ ಎಲ್ಲವನ್ನೂ ನೋಡುವುದೇ ಚೆಂದ.

ಆರ್ಟಿಕ್ ಮತ್ತು ಅಂಟಾರ್ಟಿಕ್ ನಲ್ಲಿ ಕಂಡುಬರುವಂತಹ ನಾರ್ಥನ್ ಲೈಟ್ಸ್ ನಿಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಹಾಗಾಗಿ, ಸಾಧ್ಯವಾದರೆ ನಿಮ್ಮ ಸಂಗಾತಿ ಜೊತೆ ಅಲ್ಲಿಗೂ ಭೇಟಿ ನೀಡಿ.

ಯುರೋಪ್ ನಿಧಾನ ಜೀವನಕ್ಕೆ ಬೆಸ್ಟ್ ತಾಣವಾಗಿದೆ. ಇಲ್ಲಿನ ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕ ಸ್ಲೋ ಟ್ರಾವೆಲ್ ನೀವು ಎಂಜಾಯ್ ಮಾಡಬಹುದು.

ಬನಾರಸ್ ನಲ್ಲಿ ಗಂಗಾರತಿ ನೋಡುತ್ತಾ ಆಧ್ಯಾತ್ಮಿಕ ಕ್ಷಣಗಳಲ್ಲಿ ಕಳೆದು ಹೋಗಿ. ಇದು ನಿಜಕ್ಕೂ ದೈವೀಕ ಅನುಭವವನ್ನು ಕೊಡುತ್ತದೆ. ಅದರಲ್ಲೂ ಸಂಗಾತಿ ಜೊತೆ ಇದನ್ನೆಲ್ಲಾ ನೋಡೋದೆ ಚಂದ ಅನುಭವ.

ಜೀವ ಮಾನದಲ್ಲಿ ಒಂದು ಬಾರಿಯಾದರೂ ಸಂಗಾತಿ ಜೊತೆ ಸ್ಕ್ಯೂಬಾ ಡೈವಿಂಗ್ ಮಾಡಲೇಬೇಕು. ಅದರಲ್ಲೂ ಮಾಲ್ಡೀವ್ಸ್ ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುವಂತಹ ಮಜವೇ ಬೇರೆ.

Source link
ವರ್ಷ50 ಆಗ್ತಿದೆಯಾ? ಸಂಗಾತಿಯೊಂದಿಗೆ ಇವನ್ನೆಲ್ಲ ಮಾಡಿಲ್ಲವೆಂದರೆ ನೀವು ವೇಸ್ಟ್