ರಾಜ್ ಬಿ. ಶೆಟ್ಟಿ, ಉಪೇಂದ್ರ (ಉಪೇಂದ್ರ), ಶಿವರಾಜ್‌ಕುಮಾರ್ ಅವರು ’45’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿದೆ. ಈಗ ಪ್ರಚಾರದ ಭಾಗವಾಗಿ ರಾಜ್, ಉಪೇಂದ್ರ ಹಾಗೂ ಸಿನಿಮಾ ನಿರ್ದೇಶಕ ಅರ್ಜುನ್ ಜನ್ಯ ಅವರು ಸಂದರ್ಶನ ನೀಡಿದ್ದಾರೆ.ಈ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಇವರು ಹಂಚಿಕೊಂಡಿದ್ದಾರೆ. ಅದರಲ್ಲೂ ರಾಜ್ ಹೇಳಿದ ಒಂದು ಮಾತು ಗಮನ ಸೆಳೆಯಿತು.
ಟಿವಿ9 ಕನ್ನಡಕ್ಕೆ ಉಪೇಂದ್ರ, ರಾಜ್ ಹಾಗೂ ಅರ್ಜುನ್ ಸಂದರ್ಶನ ಮತ್ತು ಈ ಸಂದರ್ಶನ ಉಪೇಂದ್ರ ಮನೆಯಲ್ಲೇ ನಡೆಯಿತು ಅನ್ನೋದು ವಿಶೇಷ. ಉಪೇಂದ್ರ ಅವರ ಮೈನಸ್ ಪಾಯಿಂಟ್ ಏನು ಹೇಳೋದು ತುಂಬಾನೇ ಕಷ್ಟ. ಆದರೆ, ರಾಜ್ ಅವರು ಇದನ್ನು ಕಂಡು ಹಿಡಿದಿದ್ದಾರೆ. ಇತ್ತೀಚೆಗೆ ಆ ವಿಷಯ ಗೊತ್ತಾಗಿದೆಯಂತೆ.
ರಾಜ್ ಅವರ ಬಗ್ಗೆ ಉಪೇಂದ್ರ ಬಗ್ಗೆ. ‘ರಾಜ್ ಅವರು ಪ್ರತಿ ವಿಷಯವನ್ನು ಪದರ ಪದರವಾಗಿ ನೋಡುತ್ತಾರೆ. ತುಂಬಾನೇ ಆಳವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನೀವು ಇದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಉಪೇಂದ್ರ ಅವರು ಹೇಳಿದರು. ಇದನ್ನು ರಾಜ್ ಅವರು ಒಪ್ಪಲು ಸಿದ್ಧರೇ ಇರಲಿಲ್ಲ. ‘ನೀವು ತುಂಬಾ ಜನರಿಗೆ ಸ್ಫೂರ್ತಿ ನೀಡಿದ್ದೀರಾ’ ಎಂದು ಉಪೇಂದ್ರ ಹೇಳಿದರು. ಆ ರಾಜ್ ಒಂದು ಅಚ್ಚರಿಯ ವಿಷಯ ಹೇಳಿದರು.
ಇದನ್ನೂ ಓದಿ:ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
‘ನಾನು ಇತ್ತೀಚೆಗೆ ಉಪೇಂದ್ರ ಅವರ ಒಬ್ಬ ಮೈನಸ್ ಪಾಯಿಂಟ್ ಕಂಡು ಹಿಡಿದಿದ್ದೇನೆ. ಅವರನ್ನು ಹೊಗಳಿದರೆ ಅವರಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡೋಕೆ ಆಗಲ್ಲ. ಆದ್ದರಿಂದ ನಡೆಯುತ್ತಿದೆ’ ಎಂದು ರಾಜ್. ‘ನೀವು ಹಾಗೆ ಮಾಡ್ತೀರಾ’ ಎಂದರು ಉಪೇಂದ್ರ. ಈ ವಿಷಯವನ್ನು ರಾಜ್ ಒಪ್ಪಿದರು.
ಸಾಮಾನ್ಯವಾಗಿ ಯಾರಾದರೂ ಹೊಗಳಿದರೆ ಆ ಬಗ್ಗೆ ಖುಷಿಯಾಗುತ್ತದೆ. ಆದರೆ, ಇಲ್ಲಿ ಉಪೇಂದ್ರ ಹಾಗೂ ರಾಜ್ ಮಾತ್ರ ಭಿನ್ನ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ