ಗೌತಮ್ ಮತ್ತು ಭೂಮಿಕಾ ಒಂದಾಗುವುದರೊಂದಿಗೆ ‘ಅಮೃತಧಾರೆ’ ಸೀರಿಯಲ್ ಮುಕ್ತಾಯದ ಹಂತದಲ್ಲಿದೆ ಎಂದು ಭಾವಿಸಲಾಗಿತ್ತು. ಆದರೆ, ಜೈದೇವ್ ಮನೆಗೆ ಹೊಸ ಯುವಕನೊಬ್ಬನ ಆಗಮನವಾಗಿದ್ದು, ಆತ ಜೈದೇವ್‌ಗೇ ಚಳ್ಳೆಹಣ್ಣು ತಿನ್ನಿಸಿ ಕಥೆಯಲ್ಲಿ ಹೊಸ ಕುತೂಹಲ ಮೂಡಿಸಿದ್ದಾನೆ.
ಅಮೃತಧಾರೆ (Amruthadhaare) ಸೀರಿಯಲ್ ಇನ್ನೇನು ಮುಗಿಯುವ ಹಂತದಲ್ಲಿ ಇದೆ ಎಂದೇ ಅಂದುಕೊಳ್ಳಲಾಗಿತ್ತು. ಗೌತಮ್ನ ಅಜ್ಜಿಯ ದಿಸೆಯಿಂದಾಗಿ ಇದೀಗ ಎಲ್ಲವೂ ಒಂದಾಗಿದ್ದಾರೆ.

ಸಾಯುವ ಹಂತದಲ್ಲಿ ಇದ್ದೇನೆ ಎಂದು ಸುಳ್ಳು ಹೇಳಿ ಗೌತಮ್ ಮತ್ತು ಭೂಮಿಕಾ ಹಾಗೂ ಮಕ್ಕಳನ್ನು ಕರೆಸಿಕೊಂಡಿರೋ ಅಜ್ಜಿ, ಎಲ್ಲರನ್ನೂ ಒಂದು ಮಾಡಿದ್ದಾಳೆ. ಸತ್ಯ ಮೊದಲೇ ಮಕ್ಕಳಿಗೆ ತಿಳಿದ ಹಿನ್ನೆಲೆಯಲ್ಲಿ, ಅವರಿಗೂ ಇದೇನೂ ಅಚ್ಚರಿಯಾಗಿಲ್ಲ.

ಇಷ್ಟು ಆಗುತ್ತಿದ್ದಂತೆಯೇ ಇನ್ನೇನು ಜೈದೇವ್ ಮತ್ತು ಶಕುಂತಲಾಗೆ ಬುದ್ಧಿ ಕಲಿಸಿದ್ರೆ ಅಲ್ಲಿಗೆ ಸೀರಿಯಲ್ ಮುಗಿಯತ್ತೆ ಎಂದುಕೊಳ್ಳುವಷ್ಟರಲ್ಲಿಯೇ ಹೊಸ ಎಂಟ್ರಿಯಾಗಿದೆ!

ಜೈದೇವನ ಮನೆಯಲ್ಲಿ ಹೊಸ ಯುವಕನ ಎಂಟ್ರಿಯಾಗಿದೆ. ಅವರು ಜೈದೇವನ ಪ್ರೊಫೈಲ್ನಲ್ಲೇ ಯಾಮಾರಿಸಿ ತಮ್ಮ ಫೋಟೋ ಹಾಕಿಕೊಂಡು ಒಂದಿಷ್ಟು ಯುವಕರಿಗೆ ಸಂದರ್ಶನ ಮಾಡಿದ್ದಾನೆ.

ಜೈದೇವ್ಗೆ ಬೇಕಾಗುವ ಒಂದು ಪೋಸ್ಟ್ಗೆ ಸಂದರ್ಶನಕ್ಕೆ ಬಂದಿರುವ ಯುವಕರಿಗೆ ತಾನೇ ಮ್ಯಾನೇಜರ್ ಎನ್ನುವಂತೆ ಪೋಸ್ ಕೊಟ್ಟು, ಅವರ ಎಕ್ಸ್ಪೀರಿಯೆನ್ಸ್ ಎಲ್ಲಾ ಸರಿ ಇಲ್ಲ ಎಂದು ಹೇಳಿ ಬಂದಿರುವವರನ್ನು ವಾಪಸ್ ಕಳಿಸಿದ್ದಾನೆ.

ಕೊನೆಗೆ ಈಗ ನನಗೆ ಕೆಲಸ ಗ್ಯಾರೆಂಟಿ ಎಂದುಕೊಂಡು ಕುಣಿಯುವಷ್ಟರಲ್ಲಿ ಜೈದೇವ್ ಬಂದು ಆತನ ಮೇಲೆ ಕೈ ಮಾಡಿದ್ದಾನೆ. ನನ್ನ ಪ್ರೊಫೈಲ್ ಎಲ್ಲಾ ಮಿಸ್ಯೂಸ್ ಮಾಡಿಕೊಂಡಿದ್ದಿ ಎಂದು ಬೈದಿದ್ದಾನೆ.

ನೀವೇ ನನ್ನ ಗುರುಗಳು ಸರ್, ನಾನು ಅದನ್ನು ಒಪ್ಪಿಕೊಂಡಾಗಿದೆ ಎಂದಿದ್ದಾನೆ ಯುವಕ. ಹಾಗಿದ್ರೆ ಈತ ಯಾರು ಎನ್ನುವ ಕುತೂಹಲ ಸದ್ಯಕ್ಕಿದೆ.

ಯುಟ್ಯೂಬರ್ ಆಗಿರುವ ಯಶು ಅವರೇ ಈ ಪಾತ್ರಕ್ಕೆ ಬಂದಿರುವುದಾಗಿ ಅವರ ಅಭಿಮಾನಿಗಳು ಖುಷಿಯಿಂದ ಕುಣಿದಾಡುತ್ತಿದ್ದಾರೆ. ಹಾಗಿದ್ದರೆ ಈ ಪಾತ್ರ ಯಾರದ್ದು? ಕೆಡಿ ಜೈದೇವ್‌ಗೇ ಚಳ್ಳೆಹಣ್ಣು ತಿನ್ನಿಸಿರುವ ಈ ಪಾತ್ರ ಯಾರದ್ದು?

Source link
Amruthadhaare ಭಾರಿ ಟ್ವಿಸ್ಟ್: ಕೇಡಿ ಜೈದೇವ್‌ಗೇ ಚಳ್ಳೆಹಣ್ಣು ತಿನ್ನಿಸಿ ಭರ್ಜರಿ ಹೊಸ ಎಂಟ್ರಿ ಕೊಟ್ಟವ ಯಾರೀತ?