ರಕ್ಷಿತಾ- ಧ್ರುವಂತ್​ ಫೋಟೋ ಶೇರ್​ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ: ನಿಮ್ಮ ಉತ್ತರವೇನು?

ರಕ್ಷಿತಾ- ಧ್ರುವಂತ್​ ಫೋಟೋ ಶೇರ್​ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ: ನಿಮ್ಮ ಉತ್ತರವೇನು?

ರಕ್ಷಿತಾ- ಧ್ರುವಂತ್​ ಫೋಟೋ ಶೇರ್​ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ: ನಿಮ್ಮ ಉತ್ತರವೇನು?
ಬಿಗ್ ಬಾಸ್ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್, ನೀಡಿದ ಟಾಸ್ಕ್ ಒಂದರಲ್ಲಿ ರಕ್ಷಿತಾ ನಡೆದುಕೊಂಡ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿವಾದದ ನಡುವೆಯೇ, ಇವರಿಬ್ಬರು ಮನೆಗೆ ಮರಳುತ್ತಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಬಿಗ್​ಬಾಸ್​ನಲ್ಲಿ (Bigg Boss 12) ಕಳೆದ ಕೆಲವು ದಿನಗಳಿಂದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್​ ಸೀಕ್ರೆಟ್ ರೂಮ್​ನಲ್ಲಿ ಇದ್ದಾರೆ. ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಹೋಗ್ತಾರೆ ಎನ್ನಲಾಗಿತ್ತು. ಆದರ ಅವರನ್ನು ಸೀಕ್ರೆಟ್ ಕೋಣೆಯಲ್ಲಿ ಇರಿಸಿರುವ ಕಾರಣದಿಂದ ಅವರು ಪುನಃ ಮನೆಯೊಳಗೆ ಪ್ರವೇಶ ಮಾಡುವ ನಿರೀಕ್ಷೆಯಲ್ಲಿ ವೀಕ್ಷಕರು ಇದ್ದಾರೆ.

ಆದರೆ ನಿನ್ನೆ ಅಂದರೆ ಡಿ.19ರಂದು ನೀಡಿರುವ ಟಾಸ್ಕ್​ ಒಂದರಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ನಡೆದುಕೊಂಡಿರುವ ರೀತಿ ಹಲವು ವೀಕ್ಷಕರನ್ನು ಅಸಮಾಧಾನಕ್ಕೆ ತಳ್ಳಿದೆ. ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಿಂದ ಬಿಗ್ ಬಾಸ್ ಮನೆ ಒಳಗೆ ತೆರಳಿ ಕಸ ಹರಡಿ ಬರಬೇಕು ಎಂದು ಹೇಳಲಾಗಿತ್ತು.

ಟಾಸ್ಕ್​ ರೀತಿಯಲ್ಲಿ ಇದನ್ನು ಆಡುವ ಬದಲು ರಕ್ಷಿತಾ ಅವರು, ಥರ್ಮಕೋಲ್ ಚೂರು, ಪೇಪರ್ ಕಸದ ಜೊತೆ ಜೊತೆಗೇನೇ ತಮ್ಮ ಸಹ ಸ್ಪರ್ಧಿಗಳ ಮೇಕಪ್ ಬ್ರಶ್​​ಗಳನ್ನು ನೆಲಕ್ಕೆ ಹರಡಿ ಹಾಳು ಮಾಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲಿಯೂ ಅವುಗಳಲ್ಲಿ ಹೆಚ್ಚಿನವರು ರಾಶಿಕಾ ಅವರದ್ದಾಗಿತ್ತು. ಅವೆಲ್ಲ ನನ್ನ ಬ್ರಶ್​​ಗಳು. ಇದನ್ನು ಹೇಗೆ ಮರು ಜೋಡಿಸೋದು ಎಂದು ರಾಶಿಕಾ ಚಿಂತೆ ಮಾಡಿದರು.

ಇದರ ನಡುವೆಯೇ, ಇದೀಗ ವಾಹಿನಿಯು ಒಂದು ಫೋಟೋ ಶೇರ್ ಮಾಡಿದೆ. ಅದರಲ್ಲಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್​ ಫೋಟೋ ಹಾಕಿ, ವೀಕ್ಷಕರಿಗೆ ಒಂದು ಪ್ರಶ್ನೆ ಕೇಳಿದೆ.

ಅದೇನೆಂದರೆ, ಮನೆಯೊಳಗೆ ಕಮ್​ಬ್ಯಾಕ್​ ಆಗ್ತಾರಾ ರಕ್ಷಿತಾ ಮತ್ತು ಧ್ರುವಂತ್​ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಬಹುತೇಕ ಮಂದಿ ಇಬ್ಬರೂ ಬರುತ್ತಾರೆ ಎಂದಿದ್ದರೆ, ಕೆಲವರು ಧ್ರುವಂತ್​ ಹೆಸರು ಮಾತ್ರ ಹೇಳಿದ್ದಾರೆ, ಮತ್ತೆ ಕೆಲವರು ರಕ್ಷಿತಾ ಹೆಸರು ಹೇಳಿದ್ದಾರೆ. ಇನ್ನು ಕೆಲವರು ಮೇಲಿನ ಟಾಸ್ಕ್​ ವಿಷಯದಲ್ಲಿ ರಕ್ಷಿತಾ ಮಾಡಿರುವುದು ಸರಿಯಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ಇದೀಗ ಇವರಿಬ್ಬರಲ್ಲಿ ಯಾರು ಒಳಗೆ ಹೋಗ್ತಾರೆ, ಯಾರು ಹೊರಗೆ ಹೋಗ್ತಾರೆ ಅಥವಾ ಇಬ್ಬರೂ ಮನೆಯೊಳಕ್ಕೆ ಬರ್ತಾರೋ ಎನ್ನುವುದು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *