ಹಾಸನ, (ಡಿಸೆಂಬರ್ 21): ಜಿಲ್ಲೆಯ ಹೊಳೆನರಸೀಪುರದಲ್ಲಿ ಪಟ್ಟಣದಲ್ಲಿ ವೃದ್ಧರ ಮದುವೆ ಸಂಘರ್ಷ ನಡೆದಿದ್ದು, ಇಳಿ ವಯಸ್ಸಿನಲ್ಲಿ ಮದುವೆಯಾದ ತಂದೆ ವಿರುದ್ಧ ಮಕ್ಕಳ ಆಕ್ರೋಶ ವ್ಯಕ್ತವಾಗಿದೆ. ಮೊದಲ ಪತ್ನಿ ಕಾರ್ಯಕ್ರಮಗಳಲ್ಲಿ 68 ವರ್ಷದ ರಾಜಣ್ಣ ಎಂಬವರು ಪತಿಯಿಂದ ದೂರವಾಗಿರುವ 58 ವರ್ಷದ ಗೀತಾ ಅವರನ್ನು ಎರಡನೇ ಮದುವೆಯಾಗಿದ್ದಾರೆ. ಆದರೆ, ಈಗ ಈ ವಯಸ್ಸಿಯಲ್ಲೇ ತಂದೆ ಮದುವೆಯಾಗಿದ್ದಕ್ಕೆ ಮಕ್ಕಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಂದೆ ರಾಜಣ್ಣ ಅವರು ಮಕ್ಕಳ ವಿರುದ್ಧ ದೂರು ನೀಡಿದ್ದಾರೆ. ಆಸ್ತಿಗಾಗಿ ಮಕ್ಕಳಿಂದಲೇ ಜೀವ ಬೆದರಿಕೆ ಇದೆ. ಇಬ್ಬರು ಹೆಣ್ಣುಮಕ್ಕಳು, ಪುತ್ರನಿಗೆ ಮದುವೆ ಮಾಡಿ ಆಸ್ತಿ ನೀಡಿದ್ದೇನೆ. ನನ್ನ ಬಳಿ ಒಂದು ಮನೆಯಿದ್ದು ಅದನ್ನು ತಮಗೆ ನೀಡುವಂತೆ ನನ್ನ ಮಕ್ಕಳು ನನಗೆ ಹಲ್ಲೆ. ನನ್ನ ಕಷ್ಟ-ಸುಖಕ್ಕೆ ನೆರವಾಗಲಿ ಎಂದು ಎರಡನೇ ವಿವಾಹ ಆಗಿದ್ದೇನೆ. ಸೂಕ್ತ ರಕ್ಷಣೆ ನೀಡುವಂತೆ ರಾಜಣ್ಣ-ಗೀತಾ ದಂಪತಿ ಮನವಿ ಪೊಲೀಸರಿಗೆ ಮನವಿ ಮಾಡಿದ್ದಾರೆ.