ವಿಜಯಪುರ, (ಡಿಸೆಂಬರ್ 21): ನೀವು ಎಂಎಲ್ ಸಿ ಎನ್ನುವುದನ್ನು ಏನು ಗ್ಯಾರಂಟಿ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ (ಬಿಜೆಪಿ ಎಂಎಲ್ಸಿ ಕೇಶವ ಪ್ರಸಾದ್) ಅವರನ್ನು ಟೋಲ್ ಸಿಬ್ಬಂದಿ ಪ್ರಶ್ನಿಸಿದ್ದು, ಬರೋಬ್ಬರಿ 1 ಗಂಟೆಗಳ ಕಾಲ ತಡೆ ನಿಲ್ಲಿಸಿದ್ದಾನೆ. ವಿಜಯಪುರ (ವಿಜಯಪುರ) ಹೊರವಲಯದಲ್ಲಿರುವ ಟೋಲ್ ನಲ್ಲಿ ಈ ಘಟನೆ ನಡೆದಿದೆ. ನಾಳೆ ಕೆಡಿಪಿ ಸಭೆಗೆ ಕೇಶವಪ್ರಸಾದ್ ಅವರು ಇಂದು (ಡಿಸೆಂಬರ್ 21) ವಿಜಯಪುರಕ್ಕೆ ಹೊರಟ್ಟಿದ್ದರು. ಮಾರ್ಗಮಧ್ಯೆ ಟೋಲ್ ಸಿಬ್ಬಂದಿ ಕಾರು ಬಿಡದೇ ನಿಲ್ಲಿಸಿದ್ದಾನೆ. ನೀವು ಎಂಎಲ್ ಸಿ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಈ ಕಾರು ಚಾಲಕ ವಿಡಿಯೋ ವಿಡಿಯೋ ಮಾಡಲು ಮುಂದಾಗಿದ್ದ ವೇಳೆ ಮೊಬೈಲ್ ಕಿತ್ತುಕೊಂಡಿದ್ದಾನೆ. ಇದರಿಂದ ಕೆಂಡಾಮಂಡಲರಾದ ಕೇಶವ ಪ್ರಸಾದ್ ಕೂಡಲೇ ವಿಜಯಪುರ ಎಸ್ಪಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಸಿಪಿಐ, ಡಿವೈಎಸ್ ಪಿ ದೌಡಾಯಿಸಿದ್ದಾರೆ. ಆಗ ಟೋಲ್ ಸಿಬ್ಬಂದಿ ಕೇಶವ ಪ್ರಸಾದ್ ಅವರ ಕಾರು ಬಿಟ್ಟಿದ್ದಾನೆ.