ಅತ್ಯಧಿಕ ಹಣದ ಆಫರ್​ ಕೊಟ್ರೂ ಯುವತಿಯರ 'ಡ್ರೀಮ್​ ಬಾಯ್'​ ಮುಕೇಶ್​ ಗೌಡ Bigg Bossಗೆ ಹೋಗದ ಕಾರಣ ರಿವೀಲ್​

ಅತ್ಯಧಿಕ ಹಣದ ಆಫರ್​ ಕೊಟ್ರೂ ಯುವತಿಯರ 'ಡ್ರೀಮ್​ ಬಾಯ್'​ ಮುಕೇಶ್​ ಗೌಡ Bigg Bossಗೆ ಹೋಗದ ಕಾರಣ ರಿವೀಲ್​

ಅತ್ಯಧಿಕ ಹಣದ ಆಫರ್​ ಕೊಟ್ರೂ ಯುವತಿಯರ 'ಡ್ರೀಮ್​ ಬಾಯ್'​ ಮುಕೇಶ್​ ಗೌಡ Bigg Bossಗೆ ಹೋಗದ ಕಾರಣ ರಿವೀಲ್​
ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ನಟ ಮುಕೇಶ್ ಗೌಡ ಅವರಿಗೆ ಕನ್ನಡ ಮತ್ತು ತೆಲುಗು ಬಿಗ್‌ಬಾಸ್‌ನಿಂದ ಆಫರ್ ಬಂದಿತ್ತು. ಅಧಿಕ ಸಂಭಾವನೆ ನೀಡಿದರೂ, ಆಟದ ಪರಿಕಲ್ಪನೆ ಮತ್ತು ಗೆಲ್ಲುವ ತಂತ್ರ ಅರ್ಥವಾಗದ ಕಾರಣ ಅವರು ಈ ಆಫರ್‌ಗಳನ್ನು ತಿರಸ್ಕರಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಬಿಗ್​ಬಾಸ್​ಗೆ​ (Bigg Boss) ಜೀವನದಲ್ಲಿ ಒಮ್ಮೆಯಾದರೂ ಹೋಗುವ ಹಂಬಲ ಇರುವ ಜನರು ಲಕ್ಷಾಂತರ ಮಂದಿ. ಆದರೆ ಇದಕ್ಕೆ ಛಾನ್ಸ್​ ಸಿಗುವುದು ಸೆಲೆಬ್ರಿಟಿಗಳಿಗೆ ಮಾತ್ರ. ಹಾಗೆಂದು ಎಲ್ಲ ನಟ-ನಟಿಯರಿಗೂ ಈ ಛಾನ್ಸ್​ ಸಿಗುವುದಿಲ್ಲ. ಅವರಲ್ಲಿಯೂ ಹಲವರು ಇದಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ.

ಆದರೆ ಅತ್ಯಧಿಕ ಸಂಭಾವನೆ ಕೊಟ್ಟರೂ, ಬಿಗ್​ಬಾಸ್​ಗೆ ಹೋಗುವುದಿಲ್ಲ ಎಂದು ಹೇಳಿರುವವರು ಕೆಲವೇ ಜನರಿದ್ದಾರೆ. ಅವರಲ್ಲಿ ಒಬ್ಬರು ಸ್ಯಾಂಡಲ್​ವುಡ್​ ಹಾಗೂ ಕಿರುತೆರೆ ನಟ ಮುಕೇಶ್ ಗೌಡ (Mukesh Gowda). ಯುವತಿಯರ ಡ್ರೀಮ್​ ಬಾಯ್​ ಎಂದೇ ಫೇಮಸ್​ ಆಗಿರೋ ಮುಕೇಶ್​ ಗೌಡ ಅವರು, ತೆಲಗು ಮತ್ತು ಕನ್ನಡದ ಕಿರುತೆರೆ ಮತ್ತು ಸಿನಿಮಾದಲ್ಲಿ ಸಕ್ರಿಯರಾಗಿರುವ ಮುಕೇಶ್​ ಅವರಿಗೆ ಎರಡೂ ಭಾಷೆಗಳ ಬಿಗ್​ಬಾಸ್​ನಲ್ಲಿ ಆಫರ್​ ಬಂದರೂ ರಿಜೆಕ್ಟ್​ ಮಾಡಿದ್ದಾರೆ.

ಅದಕ್ಕೆ ಈಗ ಅವರು ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ. ಚಾಕಲೇಟ್ ಬಾಯ್ ಎಂದೇ ಫೇಮಸ್​ ಆಗಿರೋ ಮುಕೇಶ್​ ಅವರು, ‘ತೀರ್ಥರೂಪ ತಂದೆಯವರಿಗೆ ‘ ಚಿತ್ರದ ಮೂಲಕ ಫೇಮಸ್​ ಆದವರು. ಇದಕ್ಕೂ ಮುನ್ನ ಅವರು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಹೊಂಗನಸು ‘ ಎಂಬ ತೆಲುಗು ರಿಮೇಕ್​ನಲ್ಲಿ ನಟಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ಇವರು, ಇನ್ಸ್ಟಾಗ್ರಾಂನಲ್ಲಿ ಮೂರು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಹುಡುಗರ ಡ್ರೀಮ್​ ಬಾಯ್​ ಕೂಡ ಇವರು. ಇದೇ ಕಾರಣಕ್ಕೆ ಇವರಿಗೆ ಬಿಗ್​ಬಾಸ್​ನಲ್ಲಿ ಆಫರ್​ ನೀಡಲಾಗಿತ್ತು. ಅದರಲ್ಲಿಯೂ ತೆಲುಗುವಿನಲ್ಲಿ ಎಲ್ಲರಿಗಿಂತಲೂ ಹೆಚ್ಚು ಹಣ ಆಫರ್​ ಮಾಡಲಾಗಿತ್ತಂತೆ. ಕನ್ನಡದ ಈ ಬಾರಿಯ Bigg Boss 12ನಲ್ಲಿಯೂ ಇವರಿಗೆ ಆಫರ್​ ಬಂದಿತ್ತು.

ನನಗೆ ಈ ಹಿಂದೆಯೂ ಆಫರ್​ ಬಂದಿತ್ತು. ಆಗಲೂ ಬಿಜಿ ಇದ್ದೆ. ಬಿಗ್​ಬಾಸ್​​ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟು ಇದೆ. ಅದನ್ನು ಹೇಗೆ ಆಡಬೇಕು, ಅದರ ಕಾನ್ಸೆಪ್ಟ್​ ಏನು ಎನ್ನೋದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದು ಕಷ್ಟ. ಅದನ್ನು ಗೆಲ್ಲುವುದು ಸುಲಭವಲ್ಲ. ಸುಮ್ಮನಿದ್ದರೂ ಗೆಲ್ಲುತ್ತಾರೆ, ಜಗಳವಾಡಿದರೂ ಗೆಲ್ಲುತ್ತಾರೆ… ಒಮ್ಮೊಮ್ಮೆ ಎಲ್ಲಾ ಮಾಡಿದ್ದರೂ ಗೆಲ್ಲುವುದಿಲ್ಲ. ಅದಕ್ಕಾಗಿ ನನಗೆ ಅದು ಸರಿಯಾಗಿ ಅರ್ಥವಾಗದ ಕಾರಣ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *