’ಅವತಾರ್: ಫೈರ್ ಅಂಡ್ ಆಶ್’ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಸಿನಿಮಾಗಳ ಮೇಲೆ ಇಂದು ಶತಕೋಟಿ ಡಾಲರ್‌ಗಳಷ್ಟು ಹಣ ಹೂಡಿಕೆ ಮಾಡಲಾಗುತ್ತೆ. ಆದರೆ ಅವರ ಆರಂಭದ ದಿನಗಳು ತುಂಬಾ ಕಷ್ಟಕರವಾಗಿದ್ದವು. ಕಾಲೇಜು ಬಿಟ್ಟು, ಟ್ರಕ್ ಓಡಿಸಿದ್ದು ಕೂಡ ಅವರ ಜೀವನದ ಒಂದು ಭಾಗವಾಗಿತ್ತು.

ಜೇಮ್ಸ್ ಕ್ಯಾಮರೂನ್ ಆಗಸ್ಟ್ 16, 1954 ರಂದು ಕೆನಡಾದ ಒಂಟಾರಿಯೊದಲ್ಲಿ ಜನಿಸಿದರು. ಅವರ ತಂದೆ ಇಂಜಿನಿಯರ್ ಆಗಿದ್ದರು. 1971ರಲ್ಲಿ, ಕ್ಯಾಮರೂನ್ ಕುಟುಂಬ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಮೊದಲು ಭೌತಶಾಸ್ತ್ರ ಓದಿದರೂ, ನಂತರ ಇಂಗ್ಲಿಷ್ ಆಯ್ಕೆ ಮಾಡಿಕೊಂಡರು. ಕೊನೆಗೆ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು.

ಕಾಲೇಜು ಬಿಟ್ಟ ನಂತರ ಜೇಮ್ಸ್ ಕ್ಯಾಮರೂನ್ ಟ್ರಕ್ ಓಡಿಸುತ್ತಾ, ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಚಿತ್ರಕಥೆ ಬರೆಯುವುದನ್ನು ಕಲಿತರು. 1980ರಲ್ಲಿ ಕಲಾ ನಿರ್ದೇಶಕರಾಗಿ, 1982ರಲ್ಲಿ ‘ಪಿರನ್ಹಾ II’ಗೆ ನಿರ್ದೇಶಕರಾದರು. ಆದರೆ ಎರಡು ವಾರಗಳಲ್ಲಿ ಅವರನ್ನು ಚಿತ್ರದಿಂದ ತೆಗೆದುಹಾಕಲಾಯಿತು.

1984ರ ‘ದಿ ಟರ್ಮಿನೇಟರ್’ ಕ್ಯಾಮರೂನ್ ವೃತ್ತಿಜೀವನಕ್ಕೆ ತಿರುವು ನೀಡಿತು. ನಂತರ ‘ಟ್ರೂ ಲೈಸ್’, ‘ಟೈಟಾನಿಕ್’ ಮತ್ತು ‘ಅವತಾರ್’ ಅವರನ್ನು ಸೂಪರ್‌ಹಿಟ್ ನಿರ್ದೇಶಕರನ್ನಾಗಿ ಮಾಡಿದವು. ‘ಟೈಟಾನಿಕ್’ ಸಿನಿಮಾ ‘ಸ್ಟಾರ್ ವಾರ್ಸ್’ ಚಿತ್ರದ ದಾಖಲೆಯನ್ನು ಮುರಿಯಿತು.

ಹಲವು ಕಷ್ಟಗಳ ನಂತರ ಇಂದು ಜೇಮ್ಸ್ ಕ್ಯಾಮರೂನ್ ಶ್ರೀಮಂತ ನಿರ್ದೇಶಕರಾಗಿದ್ದಾರೆ. ಫೋರ್ಬ್ಸ್ ಪ್ರಕಾರ, ಅವರ ಆಸ್ತಿ ಸುಮಾರು 1.1 ಬಿಲಿಯನ್ ಡಾಲರ್. ಅವರ ಮುಂದಿನ ಚಿತ್ರ ‘ಅವತಾರ್: ಫೈರ್ ಅಂಡ್ ಆಶ್’ ಡಿಸೆಂಬರ್ 19, 2025 ರಂದು ಬಿಡುಗಡೆಯಾಗಿದೆ.

Source link
ಟ್ರಕ್ ಡ್ರೈವರ್ ಕೋಟ್ಯಾಧಿಪತಿ ನಿರ್ದೇಶಕನಾಗಿದ್ದು ಹೇಗೆ? ಇಲ್ಲಿದೆ ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಯಶೋಗಾಥೆ