ಆ ನಿಮ್ಮ ದೇವರಿಗಿಂತ ಮೋದಿಯೇ ಉತ್ತಮ: ಮುಫ್ತಿ ಷಮಾಯಿಲ್ ನದ್ವಿಗೆ ಕುಟುಕಿದ ಜಾವೇದ್ ಅಖ್ತರ್

ಆ ನಿಮ್ಮ ದೇವರಿಗಿಂತ ಮೋದಿಯೇ ಉತ್ತಮ: ಮುಫ್ತಿ ಷಮಾಯಿಲ್ ನದ್ವಿಗೆ ಕುಟುಕಿದ ಜಾವೇದ್ ಅಖ್ತರ್


ಜುಲೈ, ಡಿಸೆಂಬರ್ 21: ಜಗತ್ತಿನ ಎಲ್ಲಾ ಧರ್ಮಗಳನ್ನು ಯಾವುದೇ ಭೇದವಿಲ್ಲದೇ ಕುಟುಕುವ ಬಾಲಿವುಡ್ ಚಿತ್ರ ಸಾಹಿತಿ, ಕವಿ ಹಾಗೂ ವಿಚಾರವಂತರಾದ ಜಾವೇದ್ ಅಖ್ತರ್ (ಜಾವೇದ್ ಅಖ್ತರ್), ಮತ್ತೊಮ್ಮೆ ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡಿದ್ದಾರೆ. ದಿ ಲಲ್ಲನ್‌ಟಾಪ್ ಎಂಬ ಯೂಟ್ಯೂಬ್ ಪಾಡ್‌ಕ್ಯಾಸ್ಟ್‌ನಲ್ಲಿ ಇಸ್ಲಾಮೀ ವಿದ್ವಾಂಸ ಮುಫ್ತಿ ಶಮಾಯಿಲ್ ನದ್ವಿ (ಮುಫ್ತಿ ಶಮಾಯಿಲ್ ನದ್ವಿ) ಮತ್ತು ಜಾವೇದ್ ಅಖ್ತರ್ ನಡುವೆ ದೇವರ ಅಸ್ತಿತ್ವದ ವಿಚಾರ ಕುರಿತು ನಡೆದ ಚರ್ಚೆ ಸಾಕಷ್ಟು ಪ್ರತಿಕ್ರಿಯೆ ಪಡೆಯುತ್ತಿದೆ.

ಈ ವೇಳೆ, ಅಖ್ತರ್ ಅವರು ಪ್ಯಾಲೆಸ್ಟೀನ್ ಹಿಂಸೆಯ ಪರಿಸ್ಥಿತಿಯನ್ನು ಉಲ್ಲೇಖಿಸಿ, ಆ ದೇವರಿಗಿಂತ ನರೇಂದ್ರ ಮೋದಿಯೇ ವಾಸಿ ಎಂದು ಈ ಡಿಬೇಟ್‌ನಲ್ಲಿ ವಾದಿಸಿದ್ದರು. ದೇವರು ಅಸ್ತಿತ್ವದಲ್ಲಿದ್ದಾನಾ ಇಲ್ಲವಾ ಎಂಬುದು ಈ ಡಿಬೇಟ್‌ನ ಮುಖ್ಯ ವಿಷಯವಾಗಿತ್ತು. ಚರ್ಚೆಯ ವೇಳೆ, ಗಾಜಾ ಸಂಘರ್ಷದ ಘಟನೆಗಳನ್ನು ಜಾವೇದ್ ಅಖ್ತರ್ ಅವರು ಉಲ್ಲೇಖಿಸಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ಡಬಲ್ ಎಂಜಿನ್ ಇದ್ದರೂ ಎಲ್ಲಾ ಸಮಸ್ಯೆಗಳಿಗೆ ವಿಪಕ್ಷಗಳನ್ನೇ ಹೊಣೆ ಮಾಡುವುದೇಕೆ? ಖರ್ಗೆ ಪ್ರಶ್ನೆ

‘ಇಸ್ರೇಲ್-ಪ್ಯಾಲೆಸ್ಟೀನ್ ಭಾಗದ ಗಾಜಾದಲ್ಲಿ 70,000 ಪ್ಯಾಲೆಸ್ಟೀನಿಯನ್ನರು ಬಲಿಯಾಗಿದ್ದಾರೆ. ನೀನು (ದೇವರು) ಸರ್ವಾಂತರ್ಯಾಮಿಯೇ ಆಗಿದ್ದರೆ ಗಾಜಾದಲ್ಲೂ ಇರಬೇಕು. ಅಲ್ಲಿ ಮಕ್ಕಳ ನರಮೇಧ ಆಗುತ್ತಿರುವುದನ್ನು ಕಂಡಿರಬೇಕು. ಆದರೂ ಸುಮ್ಮನಿದ್ದೀಯ ಎಂದರೆ ನಿನ್ನನ್ನು ಹೇಗೆ ನಂಬಲು ಸಾಧ್ಯ?’ ಎಂದು ಜಾವೇದ್ ಅಖ್ತರ್ ಹೇಳುತ್ತಾ, ಈ ವಾದಕ್ಕೆ ನರೇಂದ್ರ ಮೋದಿ ಅವರನ್ನೂ ಪ್ರಸ್ತಾಪಿಸಿದರು.

‘ಅದಕ್ಕೆ (ದೇವರು) ನಂತರ ನಮ್ಮ ಪ್ರಧಾನಿಯೇ ಉತ್ತಮ ಎನಿಸುತ್ತದೆ. ಅವರು ನಮ್ಮ ಯೋಗಕ್ಷೇಮವನ್ನಾದರೂ ನೋಡಿಕೊಳ್ಳುತ್ತಾರೆ’ ಎಂದು ಜಾವೇದ್ ಅಖ್ತರ್ ಆ ಡಿಬೇಟ್‌ನಲ್ಲಿ ಹೇಳಿದರು.

‘ಈ ದೇವರ ವಿಷಯ ಬಂದರೆ ಯಾಕೆ ಎಲ್ಲವೂ ನಿಂತುಬಿಡುತ್ತದೆ? ನಾವು ಯಾಕೆ ಪ್ರಶ್ನಿಸೋದನ್ನೇ ನಿಲ್ಲಿಸಬೇಕು? ಮಕ್ಕಳ ಮೇಲೆ ಬಾಂಬ್ ಹಾಕಲು ಅನುಮತಿಸುವ ದೇವರು ಎಂಥವನು? ಅವನು ಅಸ್ತಿತ್ವದಲ್ಲಿದ್ದೂ ಇದಕ್ಕೆ ಅವಕಾಶ ಕೊಡುತ್ತಾನೆ ಹೇಗೆ’ ಎಂದು ಅಖ್ತರ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್‌ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ

ಜಾವೇದ್ ಅಖ್ತರ್ ಅವರ ತೀಕ್ಷ್ಣ ಪ್ರಶ್ನೆಗಳಿಗೆ ಇಸ್ಲಾಮೀ ಧರ್ಮಗುರು ಮುಫ್ತಿ ಶಮಾಯಿಲ್ ನದ್ವಿ ಒಂದಷ್ಟು ಸಮಾಧಾನದ ಉತ್ತರ ಕೊಡಲು ಯತ್ನಿಸಿದರು. ದೇವರಿಂದ ಕೆಟ್ಟದ್ದೂ ಸೃಷ್ಟಿಯಾಗಿದೆ ವಿನಃ ದೇವರೇ ಕೆಟ್ಟವನಲ್ಲ. ಜನರು ತಮಗೆ ಸಿಕ್ಕಿರುವ ಮುಕ್ತ ವಿವೇಚನೆಯನ್ನು ದುರ್ಬಳಕೆ ಮಾಡಿಕೊಳ್ಳುವವರು ದುರುಳರು. ಹಿಂಸಾಚಾರ, ಅತ್ಯಾಚಾರ ಇವೆಲ್ಲವೂ ಮನುಷ್ಯನ ಆಯ್ಕೆಯಿಂದ ದೇವರ ಉದ್ದೇಶವಲ್ಲ ಎಂದು ಧರ್ಮಗುರು ವಾದಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *