Headlines

ಸುದೀಪ್ ‘ಮಾರ್ಕ್’ ಸಿನಿಮಾ ತುಳಿಯಲು ‘ಟಿವಿ9 ಕನ್ನಡ’ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು

ಸುದೀಪ್ ‘ಮಾರ್ಕ್’ ಸಿನಿಮಾ ತುಳಿಯಲು ‘ಟಿವಿ9 ಕನ್ನಡ’ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು


ಸೋಶಿಯಲ್ ಮೀಡಿಯಾ ಜಗತ್ತಲ್ಲಿ ಸುಳ್ಳು ಸುದ್ದಿ ಹಬ್ಬಿಸೋದು ದೊಡ್ಡ ವಿಷಯವೇ ಅಲ್ಲ. ಯಾವುದೋ ಒಂದು ಪೋಸ್ಟ್ ಅನ್ನು ಸಂಪಾದಿಸಿ ಹಂಚಿಕೊಂಡರೆ ಸಾಕು ಒಂದಷ್ಟು ಮಂದಿ ಅದನ್ನೇ ಸತ್ಯ ಎಂದು ನಂಬುತ್ತಾರೆ. ಇದೇ ರೀತಿ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ (ಮಾರ್ಕ್ ಚಲನಚಿತ್ರ) ಅಪಪ್ರಚಾರ ಮಾಡಲು ‘ಟಿವಿ9 ಕನ್ನಡ’ ಹೆಸರನ್ನು ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಸ್ಪಷ್ಟನೆ.

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿ ಸಾಧಾರಣ ಗಳಿಕೆ ಮಾಡಿದೆ. ಈ ಸಿನಿಮಾ ರಿಲೀಸ್ ಆಗಿ ಎರಡು ವಾರಗಳ ಬಳಿಕ ‘ಮಾರ್ಕ್’ ಸಿನಿಮಾ ರಿಲೀಸ್ (ಡಿಸೆಂಬರ್ 25) ಆಗುತ್ತಿದೆ. ಈ ಒಳಗೊಂಡ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ವಾರ ಸೃಷ್ಟಿಯಾಗಿದೆ. ಹೀಗಿರುವಾಗಲೇ ‘ಮಾರ್ಕ್’ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಅದೂ ಟಿವಿ9 ಕನ್ನಡ ಹೆಸರಲ್ಲಿ.

ಫೇಸ್ಬುಕ್ ಪೋಸ್ಟ್ ಒಂದನ್ನು ವೈರಲ್ ಮಾಡಲಾಗಿದೆ. ಈ ಪೋಸ್ಟ್ ನಲ್ಲಿ TV9 ಕನ್ನಡದ ಲೋಗೋ ಇದೆ. ಕೆಳ ಭಾಗದಲ್ಲಿ ‘ಕಾವೇರಿ ನೀರು ಯಾವಾಗಲು ತಮಿಳರಿಗೆ ಸೇರಿದ್ದು ಎಂದು ತಮಿಳು ನಾಡಿನ ಖಾಸಗಿ ಮಾಧ್ಯಮದಲ್ಲಿ ನಾಲಿಗೆ ಹರಿಬಿಟ್ಟ ಸುದೀಪ್ ಮಾರ್ಕ್ ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯನ್’ ಎಂದು ಹೆಡ್ ಲೈನ್ ಹಾಕಲಾಗಿದೆ. ಕೆಳಗೆ ಸುದೀಪ್-ವಿಜಯ್ ನಿಂತಿರುವ ಫೋಟೋ ಹಾಗೂ ಕಾವೇರಿ ನದಿಯ ಫೋಟೋ ಸೇರಿಸಲಾಗಿದೆ.

ಇದು ಸಂಪೂರ್ಣವಾಗಿ ಎಡಿಟ್ ಮಾಡಲಾದ ಪೋಸ್ಟ್. ಮೊದಲನೆಯದು TV9 ಕನ್ನಡ ಆ ರೀತಿಯ ಸುದ್ದಿಯನ್ನೇ ಪ್ರಕಟಿಸಿಲ್ಲ. ಎರಡನೆಯದು ವಿಜಯ್ ಕಾರ್ತಿಕೇಯನ್ ಆ ರೀತಿಯ ಹೇಳಿಕೆಯನ್ನೇ ನೀಡಿಲ್ಲ. ಆದರೆ, ಕೆಲವು ಕಿಡಿಗೇಡಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಪೋಸ್ಟ್ ಸೃಷ್ಟಿಸಿದ್ದಾರೆ. ಅದಕ್ಕೆ ಟಿವಿ9 ಕನ್ನಡ ಹೆಸರು ಬಳಸಿಕೊಂಡಿದ್ದು ನಿಜಕ್ಕೂ ಬೇಸರದ ವಿಷಯ. ಅಂದಹಾಗೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಎಲ್ಲಿಯೂ ಸುದ್ದಿ ಲಿಂಕ್ ಇಲ್ಲ, ಕೇವಲ ಎಡಿಟ್ ಮಾಡಲಾದ ಪೋಸ್ಟ್ ಮಾತ್ರ ಇದೆ.

ಇದನ್ನೂ ಓದಿ: ಸುದೀಪ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ ಏಕೆ?

ಟಿವಿ9 ಕನ್ನಡ ಕಳೆದ 19 ವರ್ಷಗಳಿಂದ ನಿಖರವಾದ ಸುದ್ದಿಗಳನ್ನು ನೀಡುತ್ತಾ ಬರುತ್ತಿದೆ. ಹೀಗಾಗಿ, ತಾವು ಸೃಷ್ಟಿಸಿದ ಪೋಸ್ಟ್ ನಿಜ ಎಂದನಿಸಲಿ ಎಂದು ಕಿಡಿಗೇಡಿಗಳು ಟಿವಿ9 ಸಂಸ್ಥೆಯ ಹೆಸರನ್ನೇ ಬಳಕೆ ಮಾಡಿಕೊಂಡಿದ್ದಾರೆ. ಅದು ಎಡಿಟ್ ಮಾಡಲಾದ ಪೋಸ್ಟ್ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ನಕಲಿ ಪೋಸ್ಟ್ಗೆ TV9 ಜವಾಬ್ದಾರಿ ಅಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:07 am, ಸೋಮ, 22 ಡಿಸೆಂಬರ್ 25



Source link

Leave a Reply

Your email address will not be published. Required fields are marked *