‘ಡೆವಿಲ್’ ಸಿನಿಮಾ (ದೆವ್ವದ ಚಲನಚಿತ್ರ) ಭಾನುವಾರ ಒಳ್ಳೆಯ ಕಲೆಕ್ಷನ್ ಮಾಡಿದೆ. ಡಿಸೆಂಬರ್ 11ರಂದು ರಿಲೀಸ್ ಆದ ಈ ಸಿನಿಮಾ ವಾರದ ಮಧ್ಯದಲ್ಲಿ ಕುಂಟುತ್ತಾ ಸಾಗಿತ್ತು. ವೀಕೆಂಡ್ನಲ್ಲಿ ಸಿನಿಮಾ ಯಶಸ್ವಿಯಾಗಿದೆ. ಆದರೆ, ಚಿತ್ರದ ಬಜೆಟ್ಗೂ ಸಿನಿಮಾದ ಗಳಿಕೆಗೂ ಅಜಗಜಾಂತರ ಇದೆ ಎಂದು ಹೇಳಲಾಗದು. ಈ ವಾರದಿಂದ ಸಿನಿಮಾ ಮತ್ತಷ್ಟು ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ. ಈ ಲೈಫ್ಟೈಮ್ ಕಲೆಕ್ಷನ್ ಎಷ್ಟರಮಟ್ಟಿಗೆ ಕಾದು ನೋಡಬೇಕಾಗಿದೆ.
‘ಡೆವಿಲ್’ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ದರ್ಶನ್ ಜೈಲಿನಲ್ಲಿ ಇದ್ದಾರೆ. ಇದರ ಮಧ್ಯೆಯೂ ಅಭಿಮಾನಿಗಳು ಸಿನಿಮಾದ ಪ್ರಚಾರ ಮಾಡುವ ಕೆಲಸ ಮಾಡಿದ್ದರು. ಮೊದಲ ದಿನ ಸಿನಿಮಾ ಅಬ್ಬರಿಸಿತ್ತು. 10 ಕೋಟಿ ರೂಪಾಯಿ ಹಣವನ್ನು ಈ ಚಿತ್ರ ಮೊದಲ ದಿನ ಗಳಿಕೆ ಮಾಡಿತ್ತು. ನಂತರ ಶನಿವಾರ ಹಾಗೂ ಭಾನುವಾರ ಉತ್ತಮ ಕಲೆಕ್ಷನ್ ಮಾಡಿತ್ತು. ನಂತರದ ದಿನಗಳಲ್ಲಿ ಸಿನಿಮಾದ ಗಳಿಗೆ ಕುಗ್ಗಿದೆ.
ಭಾನುವಾರ ಸಿನಿಮಾದ ಕಲೆಕ್ಷನ್ ನಲ್ಲಿ ಕೊಂಚ ಚೇತರಿಕೆ ಕಂಡಿದೆ. ಈ ಸಿನಿಮಾ ಡಿಸೆಂಬರ್ 21ರಂದು 1.24 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು sacnilk ವರದಿ ಮಾಡಿದೆ. ಶನಿವಾರ (ಡಿಸೆಂಬರ್ 20) ಚಿತ್ರ 74 ಲಕ್ಷ ರೂಪಾಯಿ ಗಳಿಸಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ‘ದಿ ಡೆವಿಲ್’ ಪ್ರಚಾರ ಮಾಡಿದ ವಿಜಯಲಕ್ಷ್ಮಿ ದರ್ಶನ್
ಸದ್ಯ ‘ಡೆವಿಲ್’ ಸಿನಿಮಾದ ಕಲೆಕ್ಷನ್ 27.6 ಕೋಟಿ ರೂಪಾಯಿ ಆಗಿದೆ ಎಂದು sacnilk ವರದಿ ಮಾಡಿದೆ. ಇಂದಿನಿಂದ ಮೂರು ದಿನಗಳ ಕಾಲ ಸಿನಿಮಾ ಎಷ್ಟು ಗಳಿಕೆ ಮಾಡಿದರೆ ಅದು ಮುಖ್ಯವಾಗುತ್ತದೆ. ಇದಾದ ಬಳಿಕ ಸಿನಿಮಾದ ಕಲೆಕ್ಷನ್ ತೀವ್ರವಾಗಿ ಕುಸಿಯೋ ಸಾಧ್ಯತೆ ಇದೆ. ಸುದೀಪ್ ನಟನೆಯ ‘ಮಾರ್ಕ್’ ಹಾಗೂ ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾ ತೆರೆಗೆ ಬರುತ್ತಿರುವುದೇ ಇದಕ್ಕೆ ಕಾರಣ. ‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನವಿದೆ. ರಚನಾ ರೈ ಸಿನಿಮಾಗೆ ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 7:39 am, ಸೋಮ, 22 ಡಿಸೆಂಬರ್ 25