IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಪಡೆಯನ್ನು ರೂಪಿಸಲಾಗಿದೆ. ಹರಾಜಿಗೂ ಮುನ್ನ 17 ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ ಫ್ರಾಂಚೈಸಿ, ಆಕ್ಷನ್ ಮೂಲಕ 8 ಆಟಗಾರರನ್ನು ಖರೀದಿಸಿದ್ದಾರೆ. ಈ ಎಂಟು ಆಟಗಾರರಲ್ಲಿ ಐವರು ವಿದೇಶಿ ಪ್ಲೇಯರ್ಸ್ ಎಂಬುದು ವಿಶೇಷ.
ಈ ಐವರು ವಿದೇಶಿ ಆಟಗಾರರಲ್ಲಿ ಬೆನ್ ಡಕೆಟ್ ಕೂಡ ಒಬ್ಬರು. ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಬೆನ್ ಡಕೆಟ್ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂದರೆ ಕಳೆದ 18 ಸೀಸನ್ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನತ್ತ ಮುಖ ಮಾಡಿದ ಡಕೆಟ್ ಅನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಲಾಗಿದೆ.
ವಿಶೇಷ ಎಂದರೆ ಬೆನ್ ಡಕೆಟ್ನ ಖರೀದಿಸಿರುವುದು ಕೆಎಲ್ ರಾಹುಲ್ ಗಾಗಿ. ಐಪಿಎಲ್ ಹರಾಜಿಗೂ ಮುನ್ನ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕ ಪಾರ್ಥ್ ಜಿಂದಾಲ್ ತಂಡಕ್ಕೆ ಡಕೆಟ್ ಅವರ ಅವಶ್ಯಕತೆಯಿದೆ ಎಂದಿದ್ದರು. ಹೀಗಾಗಿಯೇ ಬೆನ್ ಡಕೆಟ್ ಅವರಿಗಾಗಿ ನಾವು ಬಿಡ್ ಮಾಡಿದ್ದೇವೆ ಎಂದು ಜಿಂದಾಲ್ ಆಗಿರುತ್ತದೆ.
ಇತ್ತ ಕೆಎಲ್ ರಾಹುಲ್ ಸೂಚನೆ ಡಿಸಿ ಫ್ರಾಂಚೈಸಿ ಇಂಗ್ಲೆಂಡ್ ದಾಂಡಿಗನ ಖರೀದಿಸಿದ ಕಾರಣ ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬೆನ್ ಡಕೆಟ್ ಆರಂಭಿಕನಾಗಿ ಕಣಕ್ಕಿಳಿಯಬಹುದು. ಅಂದರೆ ರಾಹುಲ್ ಹಾಗೂ ಡಕೆಟ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಕರುಣ್ ನಾಯರ್, ಸಮೀರ್ ರಿಝ್ವಿ, ಅಶುತೋಷ್ ಶರ್ಮಾ, ವಿಪ್ರಾಜ್ ನಿಗಮ್, ಮಾಧವ್ ತಿವಾರಿ, ತ್ರಿಪುರಾಣ ವಿಜಯ್, ಅಜಯ್ ಮಂಡಲ್, ಕುಲದೀಪ್ ಯಾದವ್, ಮಿಚೆಲ್ ಸ್ಟಾರ್. ನಟರಾಜನ್, ಮುಕೇಶ್ ಕುಮಾರ್, ದುಷ್ಮಂತ ಚಮೀರಾ, ಆಕಿಬ್ ನಬಿ, ಪಾತುಮ್ ನಿಸ್ಸಂಕಾ, ಬೆನ್ ಡಕೆಟ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಸಾಹಿಲ್ ಪರಾಖ್, ಪೃಥ್ವಿ ಶಾ, ಕೈಲ್ ಜೇಮಿಸನ್.




