ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮದ ನಡುವೆ ಸಾಂಸ್ಕೃತಿಕ ನಗರಿ ಮೈಸೂರು ವಿಶೇಷವಾಗಿ ಮಿಂಚುತ್ತಿದೆ. 2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸಲು ಮೈಸೂರು ಅರಮನೆಯ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿದೆ. ಅರಮನೆಯಲ್ಲಿ ನಡೆಯುತ್ತಿರುವ ಮಾಗಿ ಉತ್ಸವವನ್ನು ಆಕರ್ಷಿಸುತ್ತಿದೆ, ಈಶ್ವರನ ಹೂದೋಟದಂತೆ ಹೂವಿನ ಧರೆಗಿಳಿದ ಅನುಭವ ನೀಡುತ್ತಿದೆ.
11 ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಚಾಲನೆ ನೀಡಿದ್ದಾರೆ. ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ಆಚರಣೆಯ ಜೊತೆಗೆ ಸಂಖ್ಯೆ. ಡಿಸೆಂಬರ್ 31 ರಂದು ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಹೂವಿನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಬಾರಿಯ ಫ್ಲವರ್ ಶೋನ ಪ್ರಮುಖ ಆಕರ್ಷಣೆ ಶೃಂಗೇರಿಯ ಶಾರದ ಮಾತೆ ದೇಗುಲದ ಮಾದರಿ. 50 ಅಡಿ ಅಗಲ, 16 ಅಡಿ ಉದ್ದ ಮತ್ತು 25 ಅಡಿ ಎತ್ತರದ ಈ ಕಲಾಕೃತಿ ಗುಲಾಬಿ ಹಾಗೂ ಸೇವಂತಿಗೆ ಹೂಗಳಿಂದ ನಿರ್ಮಿಸಲಾಗಿದೆ. ದೇಗುಲದ ಭವ್ಯತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಫಲಪುಷ್ಪ ಪ್ರದರ್ಶನದಲ್ಲಿ 2025ರಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗರು ಗೆದ್ದ ಟ್ರೋಫಿಯ ಮಾದರಿ, ಸಾಲುಮರದ ತಿಮ್ಮಕ್ಕ, ಆಪರೇಷನ್ ಸಿಂಧೂರ್ ಹಾಗೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಲಾಕೃತಿಗಳು ವಿಶೇಷ ಆಕರ್ಷಣೆಯಾಗಿವೆ. ಜೊತೆಗೆ ಸೆಲ್ಫಿ ಪ್ರಿಯರಿಗಾಗಿ ವಿಶಿಷ್ಟ ವಿನ್ಯಾಸದ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ.
ಫ್ಲವರ್ ಶೋ ಜೊತೆಗೆ ಡಿಸೆಂಬರ್ 25ರವರೆಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಣಿಕಾಂತ್ ಕದ್ರಿ, ವಾಸುಕಿ ವೈಭವ್, ಅಜಯ್ ವಾರಿಯರ್ ತಂಡಗಳ ಸಂಗೀತ ರಸಸಂಜೆ ಪ್ರದರ್ಶನ ಮನಸೂರೆಗೊಳ್ಳಲಿದೆ. ಸುಮಾರು 4 ಲಕ್ಷ ಹೂಗಳು ಹಾಗೂ 35 ಸಾವಿರ ಜಾತಿಯ ಗಿಡಗಳಿಂದ ಅರಮನೆ ಆವರಣ ಜಗಮಗುತ್ತಿದೆ.




