ಇ-ಕಾಮರ್ಸ್‌, ಡಿಜಿ ಪೇ ಬಳಸಿ ಉಗ್ರರಿಗೆ ಹಣ, ಎಫ್‌ಎಟಿಎಫ್‌ ಎಚ್ಚರಿಕೆ!

ಇ-ಕಾಮರ್ಸ್‌, ಡಿಜಿ ಪೇ ಬಳಸಿ ಉಗ್ರರಿಗೆ ಹಣ, ಎಫ್‌ಎಟಿಎಫ್‌ ಎಚ್ಚರಿಕೆ!

ಇ-ಕಾಮರ್ಸ್‌, ಡಿಜಿ ಪೇ ಬಳಸಿ ಉಗ್ರರಿಗೆ ಹಣ, ಎಫ್‌ಎಟಿಎಫ್‌ ಎಚ್ಚರಿಕೆ!

ನವದೆಹಲಿ (ಜು.10): ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಲು ಉಗ್ರ ಸಂಘಟನೆಗಳು ಬಳಸುತ್ತಿರುವ ವಿಧಾನ ಬದಲಾಗುತ್ತಿದೆ. 2019ರ ಪುಲ್ವಾಮಾ ದಾಳಿ, 2022ರ ಗೋರಖ್ ನಾಥ್‌ ದೇವಸ್ಥಾನ ಮೇಲಿನ ದಾಳಿ ವೇಳೆ ಉಗ್ರ ಸಂಘಟನೆಗಳು ಇ-ಕಾಮರ್ಸ್ ಮತ್ತು ಆನ್‌ಲೈನ್ ಪೇಮೆಂಟ್ ಸೇವೆಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಅಂತಾರಾಷ್ಟ್ರೀಯ `ಭಯೋತ್ಪಾದನಾ ಹಣಕಾಸು ಮೇಲಿನ ನಿಗಾ ಸಂಸ್ಥೆಯಾದ ಎಫ್ಎಟಿಎಫ್ ಎಚ್ಚರಿಸಿದೆ.

ಎಫ್‌ಟಿಎಎಫ್ ಬಿಡುಗಡೆ ಮಾಡಿದ ಹೊಸ ವರದಿಯಲ್ಲಿ ಬದ ಲಾದ ಕಾಲಘಟ್ಟದಲ್ಲಿ ಭಯೋತ್ಪಾದ ನೆಗೆ ಹಣಕಾಸು ನೆರವು ಒದಗಿಸುವ ರೀತಿ ಹೇಗೆ ಬದಲಾಗಿದೆ ಎಂಬುದನ್ನು ಪಾಕಿಸ್ತಾನ ಮೂಲದ ಉಗ್ರರು ಭಾರತದಲ್ಲಿ ನಡೆಸಿದ ಹಿಂದಿನ ಎರಡು ದಾಳಿಗಳನ್ನು ಉಲ್ಲೇಖಿಸಿ ವಿವರಿಸಲಾಗಿದೆ.

ಭಾರತದಲ್ಲಿನ ದಾಳಿ ಉದಾಹರಣೆ: 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಐಇಡಿ ಬಳಸಲಾಗಿತ್ತು. ಇದಕ್ಕೆ ಬಳಸಲಾಗುವ ಅಲ್ಯುಮಿನಿಯಂ ಪೌಡ‌ರ್ ಅನ್ನು ಇಪಿಒಎಂ ಅಮೆ ಜಾನ್ ಮೂಲಕ ಖರೀದಿಸುತ್ತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದರು. ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ದಾಳಿ ಹೊಣೆ ಹೊತ್ತುಕೊಂಡಿತ್ತು.

ಇನ್ನು 2022, ಏಪ್ರಿಲ್ 4ರಂದು ಗೋರಖ್‌ನಾಥ್ ದೇವಸ್ಥಾನದ ಮೇಲಿನ ದಾಳಿಯ ರೂವಾರಿ ಆನ್‌ಲೈನ್ ಪೇಮೆಂಟ್ ಸಿಸ್ಟಮ್ ಮತ್ತು ವಿಪಿಎನ್ ಬಳಸಿದ್ದು ಬೆಳಕಿಗೆ ಬಂದಿತ್ತು. ಎಫ್‌ಎಟಿಎಫ್ ಪ್ರಕಾರ, ತನಿಖೆ ವೇಳೆ ಆರೋಪಿ ಪೇಪಾಲ್ ಮೂಲಕ 6 ಲಕ್ಷ ರು. ಐಎಸ್‌ಐಎಲ್‌ ಉಗ್ರ ಸಂಘಟನೆ ಪರ ವರ್ಗಾಯಿಸಿದ್ದ. ಇದಕ್ಕಾಗಿ ಆತ ಅಂತಾರಾಷ್ಟ್ರೀಯ ಮೂರನೇ ವ್ಯಕ್ತಿಯ ವರ್ಗಾವಣೆ ಮತ್ತು ವಿಪಿಎನ್ ಸೇವೆ ಬಳಸಿದ್ದ ಎಂದು ಕಂಡುಬಂದಿತ್ತು.

ಪಂಜಾಬ್‌ನಲ್ಲಿ ಉಗ್ರ ದಾಳಿ ಸಂಚು ತಡೆದ ಪೊಲೀಸರು

ಚಂಡೀಗಢ: ಪಂಜಾಬ್ ಪೊಲೀಸರು ಪಾಕ್ ಉಗ್ರರ ಅತಿದೊಡ್ಡ ದಾಳಿಯ ಸಂಚು ವಿಫಲ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ದಾಳಿಗೆಂದುಪಾಕ್‌ ಮೂಲದ ಉಗ್ರ ಹರ್ವಿಂದರ್ ರಿಂಡಾ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿ ಅರಣ್ಯದಲ್ಲಿ ಸಂಗ್ರಹಿಸಿದ್ದ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾರತದಲ್ಲಿ ದಾಳಿಗೆ ಪಾಕಿಸ್ತಾನಿ ಏಜೆನ್ಸಿಗಳು ಮತ್ತು ರಿಂಡಾ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿ ದ್ದರು ಎನ್ನುವ ಗುಪ್ತಚರ ಮಾಹಿತಿ ಪೊಲೀಸರಿಗೆ ಲಭ್ಯ ವಾದ ಹಿನ್ನೆಲೆ ತನಿಖೆ ಕೈಗೊಂಡ ಎಜಿಟಿಎಫ್ ಪಡೆ ದಾಳಿಗೂ ಮುನ್ನ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. 2 ಎಕೆ-47 ರೈಫಲ್, 16 ಲೈವ್ ಕಾರ್ಟ್‌ರಿಡ್ಜ್ ಸೇರಿ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *