Headlines

ಇಂದಿರಾನಗರದ ಪಾದಚಾರಿ ಮಾರ್ಗ ಅಪಾಯದಲ್ಲಿ: ಕೆನಡಾ ವ್ಯಕ್ತಿಯ ಹೇಳಿದ್ದೇನು?

ಇಂದಿರಾನಗರದ ಪಾದಚಾರಿ ಮಾರ್ಗ ಅಪಾಯದಲ್ಲಿ: ಕೆನಡಾ ವ್ಯಕ್ತಿಯ ಹೇಳಿದ್ದೇನು?


ಬೆಂಗಳೂರು, ಡಿ.22: ಬೆಂಗಳೂರಿನ ದುಬಾರಿ ನಗರಗಳಲ್ಲಿ ಒಂದಾದ ಇಂದಿರಾನಗರದಲ್ಲಿ ನಡೆದ ಅಪಾಯಕಾರಿ ವಿಚಾರದ ಬಗ್ಗೆ ಕೆನಾಡ ವ್ಯಕ್ತಿಯೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆನಡಾದ ಪ್ರಜೆಯೊಬ್ಬರು ತಮ್ಮ ಮಗನ ಜೊತೆ ಇಂದಿರಾನಗರದಲ್ಲಿ (ಇಂದಿರಾನಗರ ಕಾಲುದಾರಿಗಳು) ಮುರಿದ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿದ್ದಾರೆ, ಇದೊಂದು ಅಪಾಯಕಾರಿ ಪುಟ್ಪಾತ್ ಎಂದು ಕ್ಯಾಲೆಬ್ ಫ್ರೈಸೆನ್ ಹೇಳಿದ್ದಾರೆ. ವಿಡಿಯೋದಲ್ಲಿ ಅವರು ಇಂದಿರಾನಗರದ ಡಬಲ್ ರಸ್ತೆಯ ಉದ್ದಕ್ಕೂ ಮುರಿದ ಪಾದಚಾರಿ ಮಾರ್ಗಗಳು, ತೆರೆದ ಅಂತರಗಳು, ಅತಿಕ್ರಮಣಗಳು ಮತ್ತು ಅಸಮವಾದ ಸ್ಲ್ಯಾಬ್‌ಗಳಲ್ಲಿ ಸಂಚರಿಸುವುದನ್ನು ಕಾಣಬಹುದು.

ಬಿರುಕು ಬಿಟ್ಟ ಪಾದಚಾರಿ ದಾರಿಯಲ್ಲಿ ಸರಿಯಾದ ಸ್ಲ್ಯಾಬ್ಗಳು ಇಲ್ಲ. ಈ ರಸ್ತೆಯಲ್ಲಿ ತೆರೆದಿರುವ ಕೆಟ್ಟ ವಾಸನೆಗಳು ಕೂಡ ಬರುತ್ತದೆ ಎಂದು ಈ ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ಪಾದಚಾರಿ ರಸ್ತೆಯಲ್ಲೇ ಅಡ್ಡಲಾಗಿ ಸಸ್ಯಗಳು ಹಾಗೂ ಮರಗಳು ಬೆಳೆದಿವೆ. ಇನ್ನು ಈ ಪಾದಚಾರಿ ರಸ್ತೆಯನ್ನು ಬಿಟ್ಟು ರಸ್ತೆಯಲ್ಲಿ ಹೋಗುವ ಎಂದರೆ ವಾಹನಗಳು ಹಿಗ್ಗಾಮುಗ್ಗಾ ಹೋಗುತ್ತದೆ. ಜೊತೆಗೆ ನನ್ನ ಮಗ ಕೂಡ ಇರುವ ಕಾರಣ ರಸ್ತೆಯಲ್ಲಿ ಹೋಗಲು ಭಯವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇಂದಿರಾನಗರ ತುಂಬಾ ದುಬಾರಿ ನಗರ, ಆದರೆ ಇಲ್ಲಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳು ತುಂಬಾ ಕೆಟ್ಟದಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಪಾದಚಾರಿ ಮಾರ್ಗಗಳು ಸಂಚಾರ ಮಾಡಲಾಗದಷ್ಟು ಹಾನಿಯಾಗಿದೆ. ಇಲ್ಲಿ ಕುಂಡಗಳಲ್ಲಿ ಇಟ್ಟಿರುವ ಸಸ್ಯಗಳು, ಮರಗಳು ಮತ್ತು ವಾಹನಗಳಿಂದ ಈ ರಸ್ತೆ ಅತಿಕ್ರಮಿಸಲ್ಪಟ್ಟಿದೆ. ದುಬಾರಿ ಒಂದಾದ ಇಂದಿರಾನಗರದ ಮೂಲಸೌಕರ್ಯಗಳ ಸ್ಥಿತಿ ಹೇಗಿದೆ ಎಂದು ತೋರಿಸಲಾಗಿದೆ. ಆದರೆ ಇತರ ವಿಚಾರಗಳಲ್ಲಿ ಭಾರತಕ್ಕಿಂತ ಇಂದಿರಾನಗರ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಕನಿಷ್ಠ ಪಕ್ಷ ಇಂದಿರಾನಗರದಲ್ಲಿ ಪಾದಚಾರಿ ಮಾರ್ಗಗಳಿವೆ. ಭಾರತದ ಮಹಾನಗರದ ಅನೇಕ ಪ್ರದೇಶಗಳ ಈ ಸೌಲಭ್ಯಗಳು ಇಲ್ಲ. ಮುಂಬರುವ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ಭಾಗ ಜನರಿಗೆ ಸಿಹಿಸುದ್ದಿ: 6 ವರ್ಷಗಳ ನಂತರ ಸಂಚಾರಕ್ಕೆ ಮುಕ್ತ ಈ ರಸ್ತೆ

ಇನ್ನು ಈ ವಿಡಿಯೋ ನೋಡಿ ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇದು ತುಂಬಾಕರ ಮತ್ತು ಭಯಾನಕವಾಗಿದೆ. ನನಗೆ ಇಡೀ ವೀಡಿಯೊವನ್ನು ನೋಡಲು ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ನಾನು ಪ್ರತಿದಿನ ಈ ಫುಟ್‌ಪಾತ್‌ಗಳಲ್ಲಿ ನಡೆಯುತ್ತೇನೆ, ಆದರೆ ನಾನು ಅವರಿಗೆ ಒಗ್ಗಿಕೊಂಡಿದ್ದೇನೆ ಎಂದರೆ ನನಗೆ ಇದರ ಬಗ್ಗೆ ಗಮನವೇ ಇರಲಿಲ್ಲ ಎಂದು ಹೇಳಿದರು. ದಯವಿಟ್ಟು ಇಲ್ಲಿ ನಡೆಯಬೇಡಿ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 11:14 am, ಸೋಮ, 22 ಡಿಸೆಂಬರ್ 25





Source link

Leave a Reply

Your email address will not be published. Required fields are marked *