ಕಿಚ್ಚ ಸುದೀಪ್ ಹೇಳಿಕೆ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿರುಗೇಟು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸುದೀಪ್ ಅವರು ಯಾರ ಹೆಸರನ್ನು ಉಲ್ಲೇಖಿಸಿದ್ದಾರೆ. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ ಮಾತು ಎಂದು ಭಾವಿಸಿದ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದ್ದರು. ಇದಕ್ಕೆ ವಿಜಯಲಕ್ಷ್ಮೀ ಅವರು ತಿರುಗೇಟು ನೀಡಿದ್ದಾರೆ. ಈ ಬೆನ್ನಲ್ಲೇ ಸುದೀಪ್ ಹಾಗೂ ವಿಜಯಲಕ್ಷ್ಮೀ ಅವರ ಹಳೆಯ ಫೋಟೋ ಹಾಗೂ ಸುದೀಪ್ ಹಳೆಯ ಹೇಳಿಕೆ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಏನಿದು ವಾರ್?
‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಪ್ರೀ ರಿಲೀಸ್ ಈವೆಂಟ್ ವೇಳೆ ಮಾತನಾಡಿದ್ದ ಸುದೀಪ್, ‘ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಈ ವೇಳೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ’ ಎಂದು ಹೇಳಿದ್ದರು. ‘ದರ್ಶನ್ ಫ್ಯಾನ್ಸ್ ಚಿತ್ರವನ್ನು ಹಾಳು ಮಾಡಲು ಸನ್ನದ್ಧವಾಗಿದೆ’ ಎಂಬರ್ಥದಲ್ಲಿ ಇದನ್ನು ಕಲ್ಪಿಸಲಾಗಿದೆ. ಇದಕ್ಕೆ ವಿಜಯಲಕ್ಷ್ಮೀ ಅವರು ಕೌಂಟರ್ ಕೊಟ್ಟಿದ್ದಾರೆ. ‘ದರ್ಶನ್ ಇಲ್ಲದ ಕಾರಣಕ್ಕೆ ಸುದೀಪ್ ಈ ರೀತಿ ಮಾತನಾಡುತ್ತಿದ್ದಾರೆ’ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.
ಹಳೆಯ ಫೋಟೋ ವೈರಲ್
ವಿಜಯಲಕ್ಷ್ಮೀ ಹೇಳಿಕೆ ಬೆನ್ನಲ್ಲೇ, ಸುದೀಪ್ ಹಾಗೂ ವಿಜಯಲಕ್ಷ್ಮೀ ಅವರ ಸುದ್ದಿಗೋಷ್ಠಿಯಲ್ಲಿ ಒಟ್ಟಾಗಿ ಕುಳಿತಿರೋ ಫೋಟೋ ಫ್ಯಾನ್ಸ್ ವೈರಲ್ ಆಗುತ್ತಿದೆ. ಕೃತಜ್ಞತೆ ಮುಖ್ಯ ಎಂಬರ್ಥದಲ್ಲಿ ಪೋಸ್ಟ್ಗಳನ್ನು ಹಾಕಲಾಗುತ್ತಿದೆ. ದರ್ಶನ್ ಅವರಿಗೆ 2013ರಲ್ಲ ‘ಬೃಂದಾವನ’ ಚಿತ್ರದ ಶೂಟಿಂಗ್ ವೇಳೆ ಗಾಯವಾಗಿತ್ತು. ಆಗ ಇದ್ದಾಗ ಸುದೀಪ್ ಅವರು ಈ ಕುಟುಂಬದ ಬೆಂಬಲಕ್ಕೆ ನಿಂತಿದ್ದರು. ದರ್ಶನ್ ಆರಾಮಾಗಿದ್ದಾರೆ ಎಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ವಿಜಯಲಕ್ಷ್ಮೀ ಜೊತೆ ಭಾಗಿ ಆಗಿದ್ದರು. ಆ ಸಂದರ್ಭದ ಫೋಟೋ ಇದಾಗಿದೆ.
ಜೀವನದಲ್ಲಿ ಕೃತಜ್ಞತೆ ಹೆಚ್ಚು ಮುಖ್ಯವಾಗಿದೆ, ನೀವು ಅದನ್ನು ಕಳೆದುಕೊಂಡಾಗ, ನಿಮ್ಮ ಮೌಲ್ಯವು ಕುಸಿಯುತ್ತದೆ 🙂#ಮಾರ್ಕ್ ದಿ ಫಿಲ್ಮ್ #ಕಿಚ್ಚ ಸುದೀಪ್#ದರ್ಶನ್ #DBoss #BBK12
#DevilTheMovie pic.twitter.com/SEmE1Pi0Kx— ❤️ (@itzme_liki) ಡಿಸೆಂಬರ್ 21, 2025
ವಿಜಯಲಕ್ಷ್ಮೀಗೆ ಸಹಾಯ ಮಾಡಿದ್ರಾ?
ದರ್ಶನ್ ಅವರು ವಿಜಯಲಕ್ಷ್ಮೀ ಮೇಲೆ ಹಲ್ಲೆ ನಡೆಸಿದರು. ಈ ಹಲ್ಲೆ ಬಳಿಕ ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಕೇಸ್ ಹಾಕಿದ್ದರು. ಈ ವೇಳೆ ವಿಜಯಲಕ್ಷ್ಮೀ ಅವರು ಸುದೀಪ್ ಅವರಿಂದ ಬೆಂಬಲ ಕೇಳಿದ್ದರೆ ಎಂಬ ಪ್ರಶ್ನೆ ಮೂಡಿತ್ತು. ಈ ಮೊದಲು ಮಾಧ್ಯಮದ ಜೊತೆ ಮಾತನಾಡಿದ್ದ ಸುದೀಪ್, ‘ಯಾರೋ ಒಬ್ಬರು ಬಂದು ಅವರು ನಂಗೆ ಹೊಡೀತಾ ಇದಾರೆ ಎಂದು ಸಪೋರ್ಟ್ ಕೇಳ್ತಾರೆ. ಆ ವ್ಯಕ್ತಿ ಸಪೋರ್ಟ್ ಮಾಡ್ತಾನೆ. ಆದರೆ, ಹೊಡೆದಾಡಿಕೊಂಡವರು ಒಂದಾಗ್ತಾರೆ. ಸಪೋರ್ಟ್ ಮಾಡಿದವನು ಗೂಬೆ ತರ ಕಾಣ್ತಾರೆ’ ಎಂದು ಹೇಳಿದ್ದರು. ಇದು ವಿಜಯಲಕ್ಷ್ಮೀದರ್ಶನ್ ಬಗ್ಗೆ ಹೇಳಿದ ಮಾತು ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.