Video: ಭಾರತಕ್ಕೆ ಬರುವ ಮುಂಚೆ ಈ ವಿಷ್ಯಗಳನ್ನು ತಿಳಿದುಕೊಳ್ಳಲು ಬಯಸ್ತೇನೆ ಎಂದ ರಷ್ಯನ್ ಮಹಿಳೆ

Video: ಭಾರತಕ್ಕೆ ಬರುವ ಮುಂಚೆ ಈ ವಿಷ್ಯಗಳನ್ನು ತಿಳಿದುಕೊಳ್ಳಲು ಬಯಸ್ತೇನೆ ಎಂದ ರಷ್ಯನ್ ಮಹಿಳೆ


ಯಾರೇ ಆಗಲಿ, ನಾವು, ದೇಶಕ್ಕೆ ತೆರಳಲಿ ಅಲ್ಲಿಗೆ ಆಚಾರ ವಿಚಾರ, ಆಹಾರ ಪದ್ಧತಿ ಹಾಗೂ ಜೀವನ ಶೈಲಿಯ ಬಗ್ಗೆ ತೆರಳುವ ಮುನ್ನ ತಿಳಿದುಕೊಳ್ಳಲು ಮುಂದಾಗುತ್ತಾರೆ. ಮಹಿಳೆ (ರಷ್ಯಾದ ಮಹಿಳೆ) ಕೂಡ ಭಾರತಕ್ಕೆ ಬರುವ ಮೊದಲು ನಾನು ಈ ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು. ಅಷ್ಟೇ ಅಲ್ಲದೆ, ಭಾರತದಲ್ಲಿ ನೆಲೆಸುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದು, ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅನಸ್ತಾಸಿಯಾ ಶರೋವಾ (ಅನಾಸ್ಟಾಸಿಯಾ ಶರೋವ್) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹಿಂದಿ ಭಾಷೆಯ ಪ್ರಾಮುಖ್ಯತೆ, ಯುಪಿಐ ಪಾವತಿಗಳು ಸುಲಭ ಮತ್ತು ದಿನಸಿ ವಸ್ತುಗಳ ತ್ವರಿತ ವಿತರಣೆಯ ಬಗ್ಗೆ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ನನ್ನ ಸುತ್ತಲಿನ ಜನರು ಎಂದಿಗೂ ನೇರವಾಗಿ ಇಲ್ಲ ಎಂದು ಹೇಳುವುದಿಲ್ಲ. ಈ ಸಿಗ್ನಲ್‌ಗಳ ಬಗ್ಗೆ ತಿಳಿದುಕೊಳ್ಳಬೇಕು. ಕಡಿಮೆ ದೂರಕ್ಕೂ ವಾಹನದ ಅಗತ್ಯವಿದೆ ಎಂದು. ರಾತ್ರಿಯಲ್ಲಿ ಫ್ಯಾನ್‌ನ ಶಬ್ದಕ್ಕೆ ತಾನು ಒಗ್ಗಿಕೊಂಡಿದ್ದೇನೆ, ಫ್ಯಾನ್ ಇಲ್ಲದೆ ಮಲಗಲು ಸಾಧ್ಯವಿಲ್ಲ ಎಂದು ಹೀಗೆ ಹತ್ತಾರು ವಿಷಯಗಳನ್ನು ಪಟ್ಟಿ ಮಾಡಿ ನೋಡಬಹುದು.

ಇದನ್ನೂ ಓದಿ:ಗೋಲ್ಗಪ್ಪ ಸವಿದು ಮುದ್ದಾಗಿ ರಿಯಾಕ್ಷನ್ ಕೊಟ್ಟ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಒಬ್ಬ ಬಳಕೆದಾರ ಇದು ಯಾವುದೇ ಅಪಪ್ರಚಾರವಲ್ಲ, ದ್ವೇಷವಿಲ್ಲದೆ ಭಾರತದ ಬಗ್ಗೆ ಅತ್ಯಂತ ನಿಖರವಾದ ಸಂಗತಿಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಮುಂಬೈ, ಕೇರಳ, ಅಸ್ಸಾಂ ಭಾರತದಂತಹ ಕರಾವಳಿ ಪ್ರದೇಶಗಳಿಗೆ ಹೋದರೆ, ನೀವು ಮಾನ್ಸೂನ್ ಅನ್ನು ಅನುಭವಿಸುವಿರಿ. ಇತರರು, ಬದುಕಿನಲ್ಲಿ ಎಲ್ಲಾ ಅನುಭವಗಳಿಗೆ ತೆರೆದುಕೊಳ್ಳಬೇಕು ಎಂದು ಕಾಮೆಂಟ್ ಮಾಡಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *