ಬ್ರಹ್ಮಗಂಟು ಸೀರಿಯಲ್ನಲ್ಲಿ ದೀಪಾ ಮತ್ತು ದಿಶಾ ಒಬ್ಬಳೇ ಎಂಬ ಸತ್ಯ ರೂಪಾಳಿಗೆ ತಿಳಿದಿದೆ. ಈ ಸತ್ಯವನ್ನು ಬಯಲು ಮಾಡಲು ರೂಪಾ, ದೀಪಾಳ ಮುಖಕ್ಕೆ ನೀರು ಎರಚುತ್ತಾಳೆ, ಇದರಿಂದ ಆಕೆಯ ಮೇಕಪ್ ಅಳಿಸಿಹೋಗುತ್ತದೆ. ಇದನ್ನು ನೋಡಿದ ನೆಟ್ಟಿಗರು ವಾಟರ್ಪ್ರೂಫ್ ಮೇಕಪ್ ಇರಲಿಲ್ವಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಬ್ರಹ್ಮಗಂಟು ಸೀರಿಯಲ್ (Brahmagantu Serial)ನಲ್ಲಿ ಇದೀಗ ದೀಪಾಗೆ ಹಿನ್ನಡೆಯಾಗುತ್ತದೆ. ದಿಶಾ ಮತ್ತು ದೀಪಾ ಒಬ್ಬಳೇ ಎನ್ನೋದು ತಿಳಿದಿರೋ ರೂಪಾ ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾಳೆ.

ದುಡ್ಡನ್ನು ಕದ್ದಿರೋ ಕೇಸ್ನಲ್ಲಿ ದೀಪಾಳನ್ನು ಜೈಲಿಗೆ ಅಟ್ಟಿದ್ದ ರೂಪಾ, ಅದನ್ನೇ ಮುಂದು ಮಾಡಿಕೊಂಡು ದಿಶಾಳಿಗೆ ಕಾಟ ಕೊಡುತ್ತಿದ್ದರು. ಚಿರಾಗ್ನ ಪರ್ಸನಲ್ ಅಸಿಸ್ಟೆಂಟ್ ಆಗಿ ನೇಮಕ ಮಾಡಿಸಿಕೊಳ್ಳೋದು ನಿನ್ನ ಜವಾಬ್ದಾರಿ ಎಂದು ಹೇಳಿ, ಅದೇ ಆಫೀಸ್ನಲ್ಲಿ ಉಳಿದುಕೊಳ್ಳುವಂತೆ ಮಾಡಿದಳು.

ಇದೀಗ ಅವಳದ್ದು ಮಿತಿಮೀರಿದಾಗ ಏನು ಬೇಕಾದ್ರೂ ಮಾಡಿಕೋ ಎಂದು ದೀಪಾ ಹೇಳಿದಾಗ, ಕೊನೆಯ ಅಸ್ತ್ರವಾಗಿ ರೂಪಾ, ಅಲ್ಲಿದ್ದ ನೀರನ್ನು ದೀಪಾಳ ಮುಖದ ಮೇಲೆ ಚೆಲ್ಲಿ, ನೀನೇ ದೀಪಾ ಎನ್ನುವುದು ನನಗೆ ಗೊತ್ತು ಎಂದಿದ್ದಾಳೆ.

ಕುತೂಹಲ ಎಂದರೆ, ನೀರು ಸೋಕಿದ ತಕ್ಷಣ ದಿಶಾ ಹಾಕಿಕೊಂಡಿದ್ದ ಬಣ್ಣ ಎಲ್ಲಾ ಹೋಗಿ ಬಿಟ್ಟಿದೆ. ದಿಶಾ ಎಚ್ಚರ ತಪ್ಪಿದ್ದ ಸಂದರ್ಭದಲ್ಲಿ ಚಿರಾಗ್ ನೀರು ಹಾಕಿದಾಗ ಹೋಗದಿದ್ದ ಮೇಕಪ್ ಈಗ ಹೇಗೆ ಹೋಯ್ತು ಎಂದು ಇನ್ನಿಲ್ಲದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ದಿಶಾಳಿಗೆ ವಾಟರ್ಪ್ರೂಫ್ ಮೇಕಪ್ ಕೊಡೋದು ಅಲ್ವಾ ಡೈರೆಕ್ಟರ್ ಸಾಹೇಬ್ರೆ ಎಂದು ನೆಟ್ಟಿಗರು ಕೇಳ್ತಿದ್ದಾರೆ. ನೀರು ಹಾಕಿದ ತಕ್ಷಣ ಮೇಕಪ್ ಅಳಿಸಿಹೋಗುವುದು ಎಂದರೆ ಏನರ್ಥ, ಬೇರೆ ರೀತಿಯಲ್ಲಿ ಈ ವಿಷಯ ತನಗೆ ಗೊತ್ತು ಎಂದು ರೂಪಾ ಹೇಳಬಹುದಿತ್ತಲ್ವಾ, ಈ ರೀತಿಯ ನಾನ್ಸೆನ್ಸ್ ಸೀನ್ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ಮತ್ತೆ ಕೆಲವರು ದೀಪಾಗೆ ಸರಿಯಾಗಿ ಆಯಿತು. ರೂಪಾಳನ್ನು ಹೊರಕ್ಕೆ ಹಾಕಿದಾಗ, ಅತಿ ಒಳ್ಳೆಯತನ ತೋರಿಸಿ ಅವಳನ್ನು ಕೆಲಸಕ್ಕೆ ಇಟ್ಟುಕೊಂಡಳು. ಅಕ್ಕ ಅಕ್ಕ ಎಂದು ಮಮಕಾರ ತೋರಿದಳು. ಅದಕ್ಕೆ ಸರಿಯಾದ ಶಾಸ್ತಿ ಆಗಿದೆ. ಅವಳಿಗೆ ಆಗಬೇಕಾದದ್ದೇ ಎನ್ನುತ್ತಿದ್ದಾರೆ.

Source link
Brahmagantu ಡೈರೆಕ್ಟರ್ ಸಾಹೇಬ್ರೇ, ಇದೇನಿದು ಅನ್ಯಾಯ? ದೀಪಾಗೆ ವಾಟರ್ಪ್ರೂಫ್ ಮೇಕಪ್ ಕೊಡೋದಲ್ವಾ?