‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಶೋನಲ್ಲಿ ಫಿನಾಲೆ ಸಮೀಪಿಸುತ್ತಿದೆ. ನಟಿ ರಾಶಿಕಾ ಶೆಟ್ಟಿ (Rashika Shetty) ಅವರು ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ ಗಿಲ್ಲಿಯನ್ನು ರಾಶಿಕಾ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅವರು ಕಾರಣ ತಿಳಿಸಿದ್ದಾರೆ. ‘ಗಿಲ್ಲಿ ಪ್ರತಿ ದಿನ ಒಂದೊಂದು ಪಾತ್ರ ಮಾಡ್ತಾನೆ. ಅವನು ಬಹಳ ದೊಡ್ಡ ಕುತಂತ್ರಿ’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ. ಇಷ್ಟು ದಿನ ಸೀಕ್ರೆಟ್ ರೂಮ್ ನಲ್ಲಿ ಇದ್ದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರು ಈಗ ಮತ್ತೆ ಬಿಗ್ ಬಾಸ್ ಮನೆಗೆ ಬಂದು ಆಟ ಮುಂದುವರಿಸಿದ್ದಾರೆ. ಅತಿಥಿಗಳಿಗೆ ತೆರಳಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ಹೊರಗೆ ಬಂದಿದ್ದಾರೆ. ಗಿಲ್ಲಿ ನಟ (ಗಿಲ್ಲಿ ನಟ) ಅವರೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಜೋರಾಗಿದೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಮುಂತಾದವರು ಕೂಡ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಡಿಸೆಂಬರ್ 22 ರ ಬಿಗ್ ಬಾಸ್ ಸಂಚಿಕೆಯ ಪ್ರೋಮೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.