ಬಿಗ್ ಬಾಸ್ ಮನೆ ಗಿಲ್ಲಿ ನಟ (ಗಿಲ್ಲಿ ನಟ) ಅವರು ಸಖತ್ ಹೈಲೈಟ್ ಆಗಿದ್ದಾರೆ. ಅವರ ಜೊತೆ ಕಾವ್ಯಾ ಶೈವ ಮತ್ತು ಸ್ಪಂದನಾ ಅವರು ಇದ್ದಾಗ ರಕ್ಷಿತಾ ಶೆಟ್ಟಿ (ರಕ್ಷಿತಾ ಶೆಟ್ಟಿ) ಸಹಿಸಿಕೊಳ್ಳುವುದಿಲ್ಲ. ಗಿಲ್ಲಿ ಮೇಲೆ ಅವರಿಗೆ ಪೊಸೆಸಿವ್ ನೆಸ್ ಇರಬಹುದು ಎಂಬ ಅನುಮಾನ ಕೂಡ ಮೂಡುತ್ತದೆ. ಆ ಬಗ್ಗೆ ರಜತ್ ಅವರಿಗೆ ಪ್ರಶ್ನೆ ಕೇಳಲಾಯಿತು. ಇಷ್ಟು ದಿನ ಅತಿಥಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಜತ್ (ರಜತ್ ಕಿಶನ್) ಅವರು ಈಗ ಹೊರಗೆ ಬಂದಿದ್ದಾರೆ. TV9 ಜೊತೆ ಮಾತನಾಡಿ ಅವರು ಅಸಲಿ ವಿಷಯ ತೆರೆದಿಟ್ಟಿದ್ದಾರೆ. ‘ಗಿಲ್ಲಿಯನ್ನು ರಕ್ಷಿತಾ ಇಷ್ಟಪಡುತ್ತಿಲ್ಲ. ಅವವನ್ನು ಬ್ರೋ ಅಂತ ಅವಳು ಕರೆಯುತ್ತಾಳೆ. ನಾನು ಅದನ್ನು ನೋಡಿದ್ದೇನೆ. ಪೊಸೆಸಿವ್ ಆಗುವ ಅವಶ್ಯಕತೆ ಇಲ್ಲ. ರಕ್ಷಿತಾ ತುಂಬಾ ಮುಗ್ಧೆ. ಅವಳು ತುಂಬಾ ಒಳ್ಳೆಯ ಹುಡುಗಿ. ಅವಳು ಗೆದ್ದರೆ ನಾನೇ ಪಟಾಕಿ ಹೊಡೆಯುತ್ತೇನೆ. ಕೋಪ ಬಂದರೆ ಅವಳು ಮನುಷ್ಯಳೇ ಅಲ್ಲ. ಕಾವ್ಯ ಮತ್ತು ಸ್ಪಂದನಾ ಎಲ್ಲೋ ಟ್ರಿಗರ್ ಮಾಡುತ್ತಾರೆ’ ಎಂದು ರಜತ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.