ಮಹಿಳಾ ಪ್ರೀಮಿಯರ್ನ ನಾಲ್ಕನೇ ಸೀಸನ್ಗೆ ಮೊದಲು, ಡೆಲ್ಲಿ ಕ್ಯಾಪಿಟಲ್ಸ್ ತನ್ನ ತಂಡದ ನಾಯಕಿಯನ್ನು ಬದಲಾಯಿಸಲು ನಿರ್ಧರಿಸಿದೆ. ಕಳೆದ ಎರಡು ವರ್ಷಗಳಿಂದ ಮೆಗ್ ಲ್ಯಾನಿಂಗ್ ತಂಡದ ನಾಯಕಿಯಾಗಿದ್ದರು. ಆದರೆ ಈಗ ಈ ಜವಾಬ್ದಾರಿಯನ್ನು ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ಗೆ ನೀಡಲಾಗುತ್ತಿದೆ.
ಡಿಸೆಂಬರ್ 23 ರಂದು ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ವರದಿಯಾಗಿದೆ. 2 ಆವೃತ್ತಿಗಳಲ್ಲಿ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡಲಾಯಿತು. ಇದಾದ ಬಳಿಕವೇ ಉಪನಾಯಕಿ ಜೆಮಿಮಾ ಅವರನ್ನು ನಾಯಕಿಯಾಗಿ ನೇಮಿಸಲು ಮುಂದಾಗಿದೆ.
ಕ್ರಿಕ್ಬಜ್ ವರದಿ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧ ಭಾರತವನ್ನು ಗೆಲ್ಲುವ ಮೂಲಕ ಮುನ್ನಡೆಸಿದ್ದ ಜೆಮಿಮಾಗೆ ಡೆಲ್ಲಿ ತಂಡದ ನಾಯಕತ್ವ ಸಿಗಲಿದೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ WPL 2026 ಆಟಗಾರರ ಹರಾಜಿನ ಸಂದರ್ಭದಲ್ಲಿ, DC ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ರೋಡ್ರಿಗಸ್ಗೆ ನಾಯಕತ್ವವನ್ನು ಹಸ್ತಾಂತರಿಸುವ ಬಗ್ಗೆ ಸುಳಿವು ನೀಡಿದ್ದರು.
ಆದಾಗ್ಯೂ ಮೆಗಾ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ, ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್ರನ್ನು ಖರೀದಿಸಿದಾಗ ಅವರಿಗೆ ನಾಯಕತ್ವ ಸಿಗಬಹುದು ಎಂಬ ವದಂತಿ ಹಬ್ಬಿತ್ತು. ಆದರೆ ಈ ವದಂತಿಗೆ ತೆರೆ ಎಳೆದಿದ್ದ ಪಾರ್ಥ್ ಜಿಂದಾಲ್ ಭಾರತೀಯರನ್ನು ನಾಯಕಿಯಾಗಿ ಮಾಡುವುದಾಗಿ ಹೇಳಿದ್ದರು. ಅದರಂತೆ ಈಗ ಜೆಮಿಮಾಗೆ ನಾಯಕತ್ವ ಸಿಗುತ್ತಿದೆ.
202 ರಲ್ಲಿ ನಡೆದ ಮೊದಲ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ ಘೋಷಿಸಿದ್ದ ಜೆಮಿಮಾ, ಮುಂದಿನ ಆವೃತ್ತಿಯಲ್ಲಿ ದೆಹಲಿ ತಂಡ ಉಳಿಸಿಕೊಂಡ ಐದು ಆಟಗಾರರಲ್ಲಿ ಮೊದಲಿಗರಾಗಿದ್ದರು. ಜೆಮಿಮಾ ಜೊತೆಗೆ, ಶಫಾಲಿ ವರ್ಮಾ, ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ಮರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ) ಮತ್ತು ಅಂಡರ್-19 ತಂಡ ವಿಜೇತ ನಾಯಕಿ ನಿಕ್ಕಿ ಪ್ರಸಾದ್ ಅವರನ್ನು ಸಹ ಉಳಿಸಿಕೊಂಡರು.
ಕಳೆದ ಮೂರು ಆವೃತ್ತಿಗಳಲ್ಲಿ ರೋಡ್ರಿಗಸ್ ಡೆಲ್ಲಿ ಕ್ಯಾಪಿಟಲ್ಸ್ ಪರ 27 ಪಂದ್ಯಗಳಲ್ಲಿ ಆಡಿರುವ ಜೆಮಿಮಾ 24 ಇನ್ನಿಂಗ್ಸ್ಗಳಲ್ಲಿ 28.16 ಸರಾಸರಿ ಮತ್ತು 139.66 ಸ್ಟ್ರೈಕ್ ರೇಟ್ನಲ್ಲಿ 507 ರನ್ ಗಳಿಸಿದ್ದಾರೆ. ಈ ವರ್ಷ ಭಾರತದ ಮೊದಲ ಪಾತ್ರ ವಹಿಸಿದ್ದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಮಿಮಾ, ಸೆಮಿನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 127 ರನ್ ಬಾರಿಸಿದ್ದರು.





