Headlines

ಕಾವ್ಯಾ ವಿಚಾರದಲ್ಲಿ ಅತಿ ಆಯ್ತು ಗಿಲ್ಲಿ ವರ್ತನೆ: ಸುದೀಪ್ ಹೇಳಿದರೂ ಬುದ್ಧಿ ಕಲಿತಿಲ್ಲ

ಕಾವ್ಯಾ ವಿಚಾರದಲ್ಲಿ ಅತಿ ಆಯ್ತು ಗಿಲ್ಲಿ ವರ್ತನೆ: ಸುದೀಪ್ ಹೇಳಿದರೂ ಬುದ್ಧಿ ಕಲಿತಿಲ್ಲ


‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ ಸೀಸನ್ 12) ಶೋನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರು ಆತ್ಮೀಯರಾಗಿದ್ದಾರೆ. ಶೋ ಆರಂಭದಿಂದಲೂ ಕೂಡ ಅವರು ಇದ್ದಾರೆ. ಕಾವ್ಯ ಅವರ ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ಕಿಚ್ಚ ಸುದೀಪ್ ಅವರು ಸೂಚಿಸಿದ್ದಾರೆ. ಆದರೂ ಕೂಡ ಗಿಲ್ಲಿ ನಟ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಡಿಸೆಂಬರ್ 22ರ ಸಂಚಿಕೆಯಲ್ಲಿ ಗಿಲ್ಲಿ ನಟ (ಗಿಲ್ಲಿ ನಟ) ಅವರು ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಕಾವ್ಯ (ಕಾವ್ಯ ಶೈವ) ಬೇಡ ಎಂದರೂ ಕೂಡ ಗಿಲ್ಲಿ ನಟ ಅವರು ಮುಗಿದು ಮಾತನಾಡಲು ಬಂದಿದ್ದಾರೆ.

ಗಿಲ್ಲಿ ನಟ ಅವರ ವರ್ತನೆಯಿಂದ ಹಲವು ಬಾರಿ ಕಾವ್ಯಾ ಅವರಿಗೆ ಕಿರಿಕಿರಿ ಆಗಿದೆ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. ‘ನಿನಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ’ ಎಂದು ಕಾವ್ಯಾ ಅವರು ಮುಲಾಜಿಲ್ಲದೇ ಹೇಳಿದರೂ ಗಿಲ್ಲಿ ನಟ ಅರ್ಥ ಮಾಡಿಕೊಂಡಿಲ್ಲ. ಕಾವ್ಯಕ್ಕೆ ಕಿರಿಕಿರಿ ಆಗುವ ರೀತಿಯಲ್ಲಿ ಗಿಲ್ಲಿ ನಡೆದುಕೊಂಡಿದ್ದಾರೆ.

86ನೇ ಸಂಚಿಕೆಯಲ್ಲಿ ಕಾವ್ಯ ಅವರ ಅಡುಗೆ ಮನೆಯಲ್ಲಿ ದಾಳಿಂಬೆ ಹಣ್ಣು ಬಿಡಿಸಲಾಯಿತು. ಆಗ ಗಿಲ್ಲಿ ಬಂದು ತಮಾಷೆ ಮಾಡಲು ಆರಂಭಿಸಿದರು. ಕತ್ತರಿ ಹಿಡಿದುಕೊಂಡು ಕಾವ್ಯಾ ಅವರ ಕೂದಲು ಕತ್ತರಿಸುವ ರೀತಿಯಲ್ಲಿ ನಟಿಸಿದರು. ಇದರಿಂದ ಕಾವ್ಯ ಅವರಿಗೆ ತುಂಬಾ ಕೋಪ ಬಂತು. ಕೋಪ ವ್ಯಕ್ತಪಡಿಸಿದರೂ ಸಹ ಗಿಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ.

ಕಾವ್ಯ ಬಿಡುತ್ತಿದ್ದಂಬೆ ಹಣ್ಣನ್ನು ಬಲವಂತವಾಗಿ ತೆಗೆದುಕೊಂಡು ತಿನ್ನಲು ಗಿಲ್ಲಿ ಮುಂದಾದರು. ಅದು ಕೂಡ ಕಾವ್ಯಾ ಅವರಿಗೆ ಹಿಡಿಸಲಿಲ್ಲ. ದಾಳಿಂಬೆ ಹಣ್ಣನ್ನು ಅಲ್ಲಿಯೇ ಬಿಟ್ಟು ಕ್ಯಾಪ್ಟನ್ ರೂಮ್‌ಗೆ ತೆರಳಿದರು. ಅವರು ತುಂಬಾ ಬೇಸರ ಮಾಡಿಕೊಂಡಿದ್ದು ಕಾಣಿಸಿತು. ಅಷ್ಟರ ನಂತರ ಅವರಿಗೆ ಸಮಾಧಾನ ಮಾಡಲು ಗಿಲ್ಲಿ ಪ್ರಯತ್ನಿಸಿದರು.

ಇದನ್ನೂ ಓದಿ: ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್

ಈ ವಾರ ಕಾವ್ಯ ಶೈವ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರು ನಾಮನಿರ್ದೇಶನದಿಂದ ಬಚಾವ್ ಆಗಿದ್ದಾರೆ. ಆದರೆ ಗಿಲ್ಲಿ ನಟ ಅವರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯ ಅವರು ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟದ ಪೈಪೋಟಿ ಜೋರಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *