Headlines

BJP Donation 2024-25ರಲ್ಲಿ ಕಾಂಗ್ರೆಸ್‌ಗಿಂತ 12 ಪಟ್ಟು ಹೆಚ್ಚು ದೇಣಿಗೆ ಸಂಗ್ರಹಿಸಿದ ಬಿಜೆಪಿ, ಫಂಡ್ ಪಟ್ಟಿ ಪ್ರಕಟ | Bjp Receives Rs 6088 Crore Donation In 2024 25 Year 12 Times More From Congress

BJP Donation 2024-25ರಲ್ಲಿ ಕಾಂಗ್ರೆಸ್‌ಗಿಂತ 12 ಪಟ್ಟು ಹೆಚ್ಚು ದೇಣಿಗೆ ಸಂಗ್ರಹಿಸಿದ ಬಿಜೆಪಿ, ಫಂಡ್ ಪಟ್ಟಿ ಪ್ರಕಟ | Bjp Receives Rs 6088 Crore Donation In 2024 25 Year 12 Times More From Congress



BJP Donation 2024-25ರಲ್ಲಿ ಕಾಂಗ್ರೆಸ್‌ಗಿಂತ 12 ಪಟ್ಟು ಹೆಚ್ಚು ದೇಣಿಗೆ ಸಂಗ್ರಹಿಸಿದ ಬಿಜೆಪಿ, ಫಂಡ್ ಪಟ್ಟಿ ಪ್ರಕಟ | Bjp Receives Rs 6088 Crore Donation In 2024 25 Year 12 Times More From Congress

2024-25ರಲ್ಲಿ ಕಾಂಗ್ರೆಸ್‌ಗಿಂತ 12 ಪಟ್ಟು ಹೆಚ್ಚು ದೇಣಿಗೆ ಸಂಗ್ರಹಿಸಿದ ಬಿಜೆಪಿ, ಫಂಡ್ ಪಟ್ಟಿ ಪ್ರಕಟ, ವಿವಾದಿತ ಎಲೆಕ್ಟೋರಲ್ ಬಾಂಡ್ ರದ್ದುಗೊಳಿಸಿದ ಬಳಿಕ ಒಂದು ವರ್ಷ ಅವಧಿಯಲ್ಲಿ ಪಕ್ಷಗಳು ಸಂಗ್ರಹಿಸಿದ ದೇಣಿಗೆ ಮೊತ್ತ ಅಚ್ಚರಿಗೆ ಕಾರಣವಾಗಿದೆ. 

ನವದೆಹಲಿ (ಡಿ.23) ಭಾರತದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಲವು ಮೂಲಗಳಿಂದ ದೇಣಿಗೆ ಸಂಗ್ರಹಿಸುತ್ತದೆ. ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲು, ಚುನಾವಣೆ ಎದುರಿಸಲು, ಪಕ್ಷ ಸಂಘಟನೆ ಸೇರಿದಂತೆ ಹಲವು ಕಾರಣಗಳಿಂದ ಪಕ್ಷಗಳು ದೇಣಿಗೆ ಸಂಗ್ರಹ ಮಾಡುವುದು ಗೌಪ್ಯವಾದ ವಿಚಾರವಲ್ಲ. ವಿವಾದಿತ ಎಲೆಕ್ಟೋರಲ್ ಬಾಂಡ್‌ಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಬಳಿಕ ಒಂದು ವರ್ಷದಲ್ಲಿ ರಾಜಕೀಯ ಪಕ್ಷಗಳು ಸಂಗ್ರಹಿಸಿದ ಪಾರ್ಟಿ ಫಂಡ್ ಸಾವಿರಾರು ಕೋಟಿ ರೂಪಾಯಿ. ಈ ಬೈಕಿ ಬಿಜೆಪಿ, ಕಾಂಗ್ರೆಸ್‌ಗಿಂತ 12 ಪಟ್ಟು ಹೆಚ್ಚು ಡೋನೇಶನ್ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. 2024-25ರ ಸಾಲಿನಲ್ಲಿ ಬಿಜೆಪಿ ಬರೋಬ್ಬರಿ 6,088 ಕೋಟಿ ರೂಪಾಯಿ ಸಂಗ್ರಹ ಮಾಡಿದೆ.

ಕಾಂಗ್ರೆಸ್ ಸಂಗ್ರಹಿಸಿದ್ದೆಷ್ಟು?

ಕೇಂದ್ರ ಚುನಾವಣಾ ಆಯೋಗ 2024-25ರ ಸಾಲಿನಲ್ಲಿ ರಾಜಕೀಯ ಪಕ್ಷಗಳು ಸಂಗ್ರಹ ಮಾಡಿದ ದೇಣಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಕಳೆದ ವರ್ಷ ಸಂಗ್ರಹದ ಮೊತ್ತಕ್ಕೆ ಹೋಲಿಸಿದರೆ ಸರಿಸುಮಾರು ಡಬಲ್. ಬಿಜೆಪಿ 2024-25ರ ಸಾಲಿನಲ್ಲಿ 6,088 ಕೋಟಿ ರೂಪಾಯಿ ಸಂಗ್ರಹಿಸಿದೆ. ಕಳೆದ ವರ್ಷ ಅಂದರೆ 2023-24ರ ಸಾಲಿನಲ್ಲಿ 3,967 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು. 2024-25ರ ಸಾಲಿನಲ್ಲಿ ಕಾಂಗ್ರೆಸ್ 522 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಸಂಗ್ರಹ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಾಂಗ್ರೆಸ್ ಭಾರಿ ಕುಸಿತ ಕಂಡಿದೆ. 2023-24ರ ಸಾಲಿನಲ್ಲಿ ಕಾಂಗ್ರೆಸ್ 1,230 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು.

ವಿವಾದಿತ ಚುನಾವಣಾ ಬಾಂಡ್ ದೇಣಿಕೆ ಕ್ರಮಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಬಳಿಕ ಈ ವರ್ಷ ಗರಿಷ್ಠ ಮೊತ್ತದ ದೇಣಿಗೆ ಸಂಗ್ರಹ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 20,000 ರೂಪಾಯಿಗಿಂತ ಮೇಲ್ಪಟ್ಟು ದೇಣಿಗೆ ನೀಡಿದವರ ಹೆಸರು, ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕಂಪನಿ, ಸಂಘ ಸಂಸ್ಥೆ, ವೈಯುಕ್ತಿ ಸೇರಿದಂತೆ ಎಲ್ಲಾ ರೀತಿಯಲ್ಲಿ ದೇಣಿಗೆ ನೀಡಿದವರ ಪಟ್ಟಿ ಚುನಾವಣಾ ಆಯೋಗದ ಸೈಟ್‌ನಲ್ಲಿ ಲಭ್ಯವಿದೆ.

ಗರಿಷ್ಠ ದೇಣಿಗೆ ನೀಡಿದ್ದು ಯಾರು? 

ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಸ್ವೀಕರಿಸಿದ ದೇಣಿಗೆ ಹಣ ಶೇಕಡಾ 95ರಷ್ಟು ಎಲೆಕ್ಟೋರಲ್ ಟ್ರಸ್ಟ್ ಮೂಲಕ ಪಡೆದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಗರಿಷ್ಠ ದೇಣಿಗೆ ನೀಡಿ ಮೊದಲ ಸ್ಥಾನದಲ್ಲಿರುವುದು ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್. ಬಿಜೆಪಿಗೆ ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್ 2180.7 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇತ್ತ ಕಾಂಗ್ರೆಸ್‌ಗೆ ಇದೇ ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್ 216.3 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಬಿಜೆಪಿಗೆ ಡೋನೇಶನ್ ಕೊಟ್ಟವರು ಯಾರು? 

ಪ್ರೊಗೆಸ್ಸೀವ್ ಎಲೆಕ್ಟೋರಲ್ ಟ್ರಸ್ಟ್ 757.6 ಕೋಟಿ ರೂಪಾಯಿ, ಎಬಿ ಜನರಲ್ ಎಲೆಕ್ಟೋರಲ್ ಟ್ರಸ್ಟ್ 606 ಕೋಟಿ ರೂಪಾಯಿ, ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್ 150 ಕೋಟಿ ರೂಪಾಯಿ, ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ 100 ಕೋಟಿ ರೂಪಾಯಿ, ರುಂಗ್ತಾ ಗ್ರೂಪ 95, ಬಜಾಜ್ ಗ್ರೂಪ್ 74 ಕೋಟಿ ರೂಪಾಯಿ, ಐಟಿಸಿ ಗ್ರೂಪ್ 72.5 ಕೋಟಿ ರೂಪಾಯಿ ಹಣವನ್ನು ಬಿಜೆಪಿಗೆ ದೇಣಿಗೆ ರೂಪದಲ್ಲಿ ನೀಡಿದೆ.



Source link

Leave a Reply

Your email address will not be published. Required fields are marked *