ವಿಜಯ್ ದೇವರಕೊಂಡ (ವಿಜಯ್ ದೇವರಕೊಂಡ) ತೆಲುಗು ಚಿತ್ರರಂಗದ ಸ್ಟಾರ್ ನಟ. ಆದರೆ ಕಳೆದ ಕೆಲ ವರ್ಷಗಳಿಂದಲೂ ಗೆಲುವು ಅವರಿಂದ ಬಲು ದೂರವೇ ಉಳಿದಿದೆ. ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರಾದರೂ ಗೆಲುವು ಎಂಬುದು ಅವರ ಪಾಲಿಗೆ ಮರೀಚಿಕೆಯೇ ಆಗಿದೆ. ರೊಮ್ಯಾಂಟಿಕ್, ಆಕ್ಷನ್, ಕೌಟುಂಬಿಕ, ಹಾರರ್, ಕಾಮಿಡಿ ಸಿನಿಮಾ ಹೀಗೆ ಹಲವು ಜಾನರ್ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಲ್ಲಿ ನಟಿಸಿದ್ದಾರೆ. ಆದರೆ ಯಾವೊಂದು ಸಿನಿಮಾ ಸಹ ಗೆದ್ದಿಲ್ಲ. ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದೆ. ಬಾರಿಯಂತೆ ರಶ್ಮಿಕಾ, ಈ ಬಾರಿಯೂ ತಮ್ಮ ಭಾವಿ ಪತಿಗೆ ಶುಭಾಶಯಗಳು.
ಇತ್ತೀಚೆಗೆ ಅತಿಯಾದ ವೈಯಲೆನ್ಸ್ ಎಂಬುದು ಸಿನಿಮಾಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ. ಅತಿಯಾದ ಹಿಂಸಾತ್ಮಕ ದೃಶ್ಯಗಳುಳ್ಳ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಖತ್ ಹಿಟ್ ಆಗುತ್ತಿವೆ. ‘ಅನಿಮಲ್’, ‘ಮಾರ್ಕೊ’ ಇತ್ತೀಚೆಗೆ ಬಿಡುಗಡೆ ಆದ ‘ಧುರಂಧರ’ ಇಂಥಹ ಸಿನಿಮಾಗಳಲ್ಲಿ ಕೆಲವು. ಇದೀಗ ವಿಜಯ್ ದೇವರೊಕಂಡ ಸಹ ಅದೇ ಫಾರ್ಮುಲಾ ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದು, ಅತ್ಯಂತ ವೈಯಲೆಂಟ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ವಿಜಯ್ ದೇವರಕೊಂಡ, ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಇಂದು (ಡಿಸೆಂಬರ್ 23) ಬಿಡುಗಡೆ ಆಗಿದ್ದು, ಟೀಸರ್ ನಲ್ಲಿ ರಕ್ತವನ್ನು ಮೈಗೆಲ್ಲ ಮೆತ್ತಿಕೊಂಡು ಬರಿಮೈಯಲ್ಲಿ ಕಾಣಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಕೈಯಲ್ಲಿ ರಕ್ತ ಮೆತ್ತಿದ ಕತ್ತಿ ಹಿಡಿದು ಅದನ್ನು ಎದುರಾಳಿ ಗುಂಪಿನ ಕಡೆ ಬೀಸುತ್ತಿದೆ. ಮೀಸೆ ಬಿಟ್ಟುಕೊಂಡು, ತುಸು ಕೂದಲು ಬಿಟ್ಟು 80ರ ಇತ್ತೀಚಿನ ವಿಲನ್‌ಗಳ ರೀತಿ ಕಾಣುತ್ತಿದ್ದಾರೆ ನಟ ವಿಜಯ್ ದೇವರಕೊಂಡ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಜೈಪುರದಲ್ಲಿ?
ಸಿನಿಮಾದ ಬಗ್ಗೆ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ‘ಲೆಟ್ಸ್ ಗೋ…’ ಎಂದು ಉತ್ಸಾಹ ವ್ಯಕ್ತಪಡಿಸಿದ್ದಾರೆ. ‘ರೌಡಿ ಜನಾರ್ಧನ್’ ಸಿನಿಮಾವನ್ನು ತೆಲುಗಿನ ನಿರ್ದೇಶಕ ರವಿ ಕಿರಣ್ ಕೊಲ್ಲಲು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ‘ಅಶೋಕವನಂ ಲೊ ಅರ್ಜುನ ಕನ್ಯಾಣಂ’, ‘ರಾಜಾವಾರು, ರಾಣಿಗಾರು’, ‘ಲವ್ ಮ್ಯಾರೇಜ್’ ಅಂಥಾ ಹಾಸ್ಯಮಯ ಪ್ರೇಮಕತೆಗಳನ್ನು ನಿರ್ದೇಶನ ಮಾಡಿದ್ದ ರವಿ ಕಿರಣ್ ಅವರು ಇದೀಗ ಪಕ್ಕಾ ಆಕ್ಷನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಹೋಗೋಣ! ಹೋಗಲಿ! ಹೋಗೋಣ!!❤️🔥@ದೇವರಕೊಂಡ https://t.co/RUmWmYULBy
— ರಶ್ಮಿಕಾ ಮಂದಣ್ಣ (@iamRashmika) ಡಿಸೆಂಬರ್ 22, 2025
ವಿಜಯ್ ದೇವರಕೊಂಡ ನಟನೆಯ ‘ಗೀತಾ ಗೋವಿಂದಂ’ ಸಿನಿಮಾದ ಬಳಿಕ ಅವರು ನಟಿಸಿದ ಯಾವೊಂದು ಸಿನಿಮಾ ಕೂಡ ಹಿಟ್ ಆಗಿಲ್ಲ. ‘ಡಿಯರ್ ಕಾಮ್ರೆಡ್’ ಸಾಧಾರಣ ಹಿಟ್ ಆಗಿದ್ದು ಬಿಟ್ಟರೆ, ‘ಲೈಗರ್’, ‘ಖುಷಿ’, ‘ಟ್ಯಾಕ್ಸಿವಾಲ’, ‘ವರ್ಲ್ಡ್ ಫೇಮಸ್ ಲವ್ವರ್’, ‘ದಿ ಫ್ಯಾಮಿಲಿ ಸ್ಟಾರ್’ ಈ ಕೆಲವು ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೋತಿವೆ. ಇತ್ತೀಚೆಗೆ ಬಂದ ‘ಕಿಂಗ್ಡಮ್’ ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ. ಇದೀಗ ‘ರೌಡಿ ಜನಾರ್ಧನ್’ ಸಿನಿಮಾ ಆದರೂ ಗೆಲ್ಲುತ್ತದೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ