SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ? ಕನ್ನಡ ಭಾಷಾ ಅಂಕಗಳ ಕಡಿತಕ್ಕೆ ಪ್ರಸ್ತಾವನೆ! | Karnataka Sslc Board Proposes Reducing First Language Marks From 125 To 100 Sat

SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ? ಕನ್ನಡ ಭಾಷಾ ಅಂಕಗಳ ಕಡಿತಕ್ಕೆ ಪ್ರಸ್ತಾವನೆ! | Karnataka Sslc Board Proposes Reducing First Language Marks From 125 To 100 Sat



SSLC ಪರೀಕ್ಷೆಯ ಪ್ರಥಮ ಭಾಷೆ ಕನ್ನಡ ವಿಷಯದ ಅಂಕಗಳನ್ನು ಕಡಿತಗೊಳಿಸಲು KSEAB ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಒಟ್ಟು ಅಂಕಗಳನ್ನು 625 ರಿಂದ 600 ಕ್ಕೆ ಇಳಿಸುವ ಸಾಧ್ಯತೆ ಇದೆ. ಈ ಬದಲಾವಣೆ 2025-26ನೇ ಸಾಲಿನಿಂದ ಜಾರಿಗೆ ಬರಬಹುದು.

ಬೆಂಗಳೂರು (ಜು.10): ರಾಜ್ಯದಲ್ಲಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) SSLC ಪರೀಕ್ಷೆಯ ಪ್ರಥಮ ಭಾಷಾ ವಿಷಯಗಳಲ್ಲಿ ಅಂಕ ಕಡಿತ ಮಾಡಲು ಸರ್ಕಾರಕ್ಕೆ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆಯ ಪ್ರಕಾರ, ಇತ್ತೀಚೆಗಿನ ಶಿಕ್ಷಣ ನೀತಿಯನ್ನು ಮುನ್ನೆಲೆಗೆ ತೆಗೆದುಕೊಳ್ಳುತ್ತಾ, ಪ್ರಸ್ತುತ 125 ಅಂಕಗಳನ್ನು ಹೊಂದಿರುವ ಪ್ರಥಮ ಭಾಷಾ ವಿಷಯಗಳನ್ನು 100 ಅಂಕಗಳಿಗೆ ತಗ್ಗಿಸುವ ಕುರಿತಾಗಿ ಮೌಲ್ಯ ನಿರ್ಣಯ ಮಂಡಳಿ ಸರ್ಕಾರಕ್ಕೆ ಸೂಕ್ತ ದಾಖಲೆ ಕಳುಹಿಸಿಕೊಟ್ಟಿದೆ.

ಒಟ್ಟು ಅಂಕ 625ರಿಂದ 600ಕ್ಕೆ ಬದಲಾವಣೆ:

ಕನ್ನಡ ಭಾಷಾ ವಿಷಯದಲ್ಲಿರುವ 125 ಅಂಕಗಳನ್ನು 100 ಅಂಕಗಳಿಗೆ ಇಳಿಕೆ ಮಾಡುವ ಜೊತೆಗೆ ಈಗಿರುವ ಒಟ್ಟು 625 ಅಂಕಗಳ SSLC ಪರೀಕ್ಷಾ ಮಾದರಿಯನ್ನು 600 ಅಂಕಗಳಿಗೆ ಇಳಿಸಲು ಕೂಡ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಎಲ್ಲಾ ವಿಷಯಗಳಂತೆ ಪ್ರಥಮ ಭಾಷೆಯೂ 100 ಅಂಕದ ಪರೀಕ್ಷೆಯಾಗಿ ಪರಿವರ್ತನೆಯಾಗಲಿದೆ. ಇದೀಗ ಬೋರ್ಡ್ ನೀಡಿದ ಪ್ರಸ್ತಾವನೆಯಂತೆ, 100 ಅಂಕಗಳಲ್ಲಿ 80 ಅಂಕಗಳನ್ನು ಬರವಣಿಗೆಯ ಪರೀಕ್ಷೆಗಾಗಿ ಮೀಸಲಾಗಿಡಲಾಗುವುದು. ಉಳಿದ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನದ ಮೂಲಕ ನಿರ್ಧರಿಸಲಾಗುವುದು. ಇದನ್ನು ಶಾಲಾ ಮಟ್ಟದಲ್ಲಿ ಶಿಕ್ಷಕರ ಮೂಲಕ ನಿರ್ವಹಿಸಲಾಗುವುದು.

ಬಸವರಾಜೇಂದ್ರ ಅವರಿಂದ ಪ್ರಸ್ತಾವನೆ

ಈ ಪ್ರಸ್ತಾವನೆಯ ಮೂಲದ ಹಿಂದೆ ಬೋರ್ಡ್ ಮಾಜಿ ಅಧ್ಯಕ್ಷ ಬಸವರಾಜೇಂದ್ರ ಅವರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ಈ ಪ್ರಸ್ತಾವನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದರೆ, ಈಗಾಗಲೇ ಪ್ರಾರಂಭವಾಗಿರುವ 2025-26ನೇ ಸಾಲಿನ SSLC ವಿದ್ಯಾರ್ಥಿಗಳಿಗೆ ಈ ಹೊಸ ಮಾದರಿ ಜಾರಿಯಾಗುವ ಸಾಧ್ಯತೆ ಇದೆ. ಈ ಸಂಬಂಧದ ತೀರ್ಮಾನವನ್ನು ಸರ್ಕಾರ ಶೀಘ್ರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.



Source link

Leave a Reply

Your email address will not be published. Required fields are marked *