Headlines

ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್

ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್


ಹುಬ್ಬಳ್ಳಿ, (ಡಿಸೆಂಬರ್ 23): ಹುಬ್ಬಳ್ಳಿಯಲ್ಲಿ (ಹುಬ್ಬಳ್ಳಿ) ಪ್ರೀತಿಸಿ ಅಂತರ್ಜಾತಿ ಯುವಕನ ಜೊತೆ ಮದುವೆಯಾದ ಮಗಳನ್ನೇ ತಂದೆಯೇ ಬರ್ಬರ ಕೊಲೆ (ಹುಬ್ಬಳ್ಳಿ ಮರ್ಯಾದೆ ಹತ್ಯೆ) ಮಾಡಿದ ಪ್ರಕರಣ ಬೆಚ್ಚಿಬೀಳಿಸಿದೆ. ವಿರೋಧದ ನಡುವೆಯೂ ದಲಿತ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಕೆರಳಿದ್ದ ತಂದೆ ಡಿಸೆಂಬರ್ 21 ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಎಂದು ಯೋಚಿಸದೇ ಮಗಳನ್ನು ಕೊಚ್ಚಿ ಕೊಂದಿದ್ದಾನೆ. ಅಂತರ್ಜಾತಿಯಾಗಿದ್ದರೂ ಸಹ ಮಾನ್ಯಳ ಪತಿ ವಿವೇಕಾನಂದ ಕುಟುಂಬದವರು ಚೆನ್ನಾಗಿ ನೋಡಿದ್ದಾರೆ. ಆದರೂ ಸಹ ತಂದೆ ಮಗಳನ್ನು ಬಲಿಯಾಗಿದ್ದಾರೆ. ಈ ಮೂಲಕ ಪ್ರೀತಿ ಮುಂದೆ ಜಾತಿ ಗೆದ್ದಿದೆ.

ಇದೀಗ ಮಾನ್ಯಗಳ ಜೊತೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡು ಪತಿ ವಿವೇಕಾನಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾನೆ. ಇನ್ನೊಂದೆಡೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿವೇಕಾನಂದನ ತಾಯಿ ಸಹ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದು. ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬ ಕಂಗಾಲಾಗಿದೆ. ಈ ಬಗ್ಗೆ ವಿವೇಕಾನಂದ ಕಣ್ಣೀರಿಡುತ್ತಲೇ ನೋವು ಹಂಚಿಕೊಂಡಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *